ಗದಗ ಜಿಲ್ಲೆಯ ಖಾಕಿ ಖದರ್ ಗೆ ಜನರು ಖುಷ್..!: ಕಳೆದ ವಸ್ತುಗಳು ಕೈಸೇರಿದ್ದಕ್ಕೆ ಜನ್ರು ಖುಷ್ !

gadag sp police

ಗದಗ ಜಿಲ್ಲೆಯ ಖಾಕಿ ಖದರ್ ಗೆ ಜನರು ಖುಷ್..!: ಕಳೆದ ವಸ್ತುಗಳು ಕೈಸೇರಿದ್ದಕ್ಕೆ ಜನ್ರು ಖುಷ್ !

ಗದಗ: ಖಾಕಿ ತನ್ನ ಖದರ್ ತೋರಿಸಿದರೆ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಗದಗ ಜಿಲ್ಲೆಯ ಪೊಲೀಸರು ತಾಜಾ ಉದಾಹರಣೆ. ಒಂದು ವರ್ಷದಿಂದ ಜಿಲ್ಲೆಯಲ್ಲಿ ಆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ ಜಾಲ ಭೇದಿಸಿ ಕಳ್ಳರ ಹೆಡೆಮುರಿ ಕಟ್ಟಿ ಜನರು ಕಳೆದುಕೊಂಡ ವಸ್ತುಗಳನ್ನು ಮರಳಿಸುವ ಮೂಲಕ ಜಿಲ್ಲಾ ಪೊಲೀಸ್ ಇಂದು ಜನರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಾಪರ್ಟಿ ರಿಟರ್ನ್ ಪರೇಡ್ ನಲ್ಲಿ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಳನ್ನು ಸಂಬಂಧಿಸಿದ ಫಲಾನುಭವಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಮರಳಿಸುವ ಮೂಲಕ ಜನರ ಮೊಗದಲ್ಲಿ ಮಂದಹಾಸ ಮೂಡಿಸಿತು.

ದಿನಾಂಕ 01-11-19 ರಿಂದ 20-11-20ರವರೆಗೆ ಒಂದು ವರ್ಷದ ಅವಧಿಯಲ್ಲಿ ಭೇದಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಗದಗ ನಗರದ ಪೊಲೀಸ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸ್ತುಗಳನ್ನು ಕಳೆದುಕೊಂಡವರಿಗೆ ಮರಳಿಸುವ, ಮೂಲಕ ಜಿಲ್ಲಾ ಪೊಲೀಸ್ ಜನಮನ್ನಣೆ ಪಡೆಯಿತು.

ಅಂದಾಜು 40 ಲಕ್ಷ ಮೌಲ್ಯದ ವಸ್ತುಗಳು

ಜಿಲ್ಲೆಯಲ್ಲಿ ಒಟ್ಟು 50 ಪ್ರಕರಣಗಳನ್ನು ಭೇದಿಸಿದ ಪೊಲೀಸ್ 39,24,379 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಒಟ್ಟು 656.5 ಗ್ರಾಂ ಚಿನ್ನ, 2ಕೆಜಿ 255 ಗ್ರಾಂ ಬೆಳ್ಳಿ, 23 ಮೊಟಾರ್ ಸೈಕಲ್, ನಾಲ್ಕು ಚಕ್ರದ 4 ವಾಹನಗಳನ್ನು ಕಳೆದುಕೊಂಡವರಿಗೆ ಹಿಂದಿರುಗಿಸಲಾಯಿತು.

ಯತೀಶ್ ಎನ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಸಿಬ್ಬಂದಿಗಳ ಸಹಕಾರದಿಂದ ವರ್ಷದ ಅವಧಿಯಲ್ಲಿ ಕಳ್ಳತನ ಪ್ರಕರಣಗಳನ್ನು ಭೇದಿಸುವ ಮೂಲಕ ಕಳೆದುಕೊಮಡ ವಸ್ತುಗಳನ್ನು ಜನರಿಗೆ ಮರಳಿಸುವ ಪ್ರಯತ್ನ ಮಾಡಿದ್ದೇವೆ. ಒಟ್ಟು ಪ್ರಕರಣಗಳಲ್ಲಿ ಹೆಸರೂರು ದೇವಾಲಯ ಕಳ್ಳತನ, ನರಗುಂದ ಬ್ಯಾಟರಿ ಕಳ್ಳತನ, ಲಕ್ಷ್ಮೇಶ್ವರ ಕುರಿ ಕಳ್ಳತನಗಳು ಅತ್ಯಂತ ಕ್ಲಿಷ್ಟವಾಗಿದ್ದವು. ಪೊಲೀಸ್ ಇಲಾಖೆಯ ಕಾರ್ಯದ ಬಗ್ಗೆ ಜನರಲ್ಲಿ ನಂಬಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್ ನಲ್ಲಿ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತು ಮತ್ತು ಆಭರಣಗಳನ್ನು ಸಂಬಂಧಿಸಿದ ಫಲಾನುಭವಿಗಳಿಗೆ ಹಿಂತಿರುಗಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 112ಕ್ಕೆ 60ಕ್ಕಿಂತ ಹೆಚ್ಚು ಕರೆಗಳು ಬಂದಿದ್ದು, ಎಲ್ಲ ಕರೆಗಳು ಸ್ಪಂದಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ಹೆಚ್ಚು ತಿಳುವಳಿಕೆ ಹೊಂದಬೇಕಿದೆ. -ಯತೀಶ್ ಎನ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಲೂಕುವಾರ ವಿವರ

ಮುಂಡರಗಿ: ಠಾಣಾ ವ್ಯಾಪ್ತಿಯಲ್ಲಿ ಇಟ್ಟು ಪ್ರಕರಣಗಳ ಸಂಖ್ಯೆ-06, ವಶಪಡಿಸಿಕೊಂಡ ಮಾಲಿನ ಕಿಮ್ಮತ್ತು 3,64,500 ಒಟ್ಟು, 90 ಗ್ರಾಮ ಚಿನ್ನ, 1ಕೆಜಿ 850 ಗ್ರಾಂ ಬೆಳ್ಳಿ, 2 ಮೋಟಾರ್ ಸೈಕಲ್ ಗಳು.  

ನರಗುಂದ: ಠಾಣೆಯಲ್ಲಿ 5 ಪ್ರಕರಣಗಳನ್ನು ಭೇದಿಸಿದ್ದು, ಈ ಪೈಕಿ, 1,58,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು. ಇದರಲ್ಲಿ 40 ಗ್ರಾಂ ಚಿನ್ನ ಒಳಗೊಂಡಿದೆ.  

ಮಗಳ ಶಿಕ್ಷಣಕ್ಕೆ ಕಳಿಸಬೇಕಿದ್ದ 50,000 ಹಣ ಕಳೆದುಕೊಂಡು ನಾನು ಬಹಳಷ್ಟು ನೊಂದಿದ್ದೆ. ಆದರೆ ಪೊಲೀಸರು ಹೆಚ್ಚು ಆಸಕ್ತಿ ವಹಿಸಿ ಹಣ ಕಳ್ಳತನ ಮಾಡಿದವರನ್ನು ಬಂಧಿಸುವ ಮೂಲಕ ನಾನು ಕಳೆದುಕೊಂಡ ಹಣ ನನಗೆ ಕೊಡಿಸಿದ್ದಾರೆ. ಪೊಲೀಸರ ಈ ಕಾರ್ಯ ಎಷ್ಟು ನೆನಸಿದರೂ ಸಾಲದು. -ನಿರ್ಮಲಾ, ಗಜೇಂದ್ರಗಡ

ಬೆಟಗೇರಿ: ಠಾಣೆಯಲ್ಲಿ 3 ಪ್ರಕರಣಗಳ ಪೈಕಿ 1,65,200 ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 2.5 ಗ್ರಾಂ ಚಿನ್ನ, 4-ಮೋಟಾರ್ ಸೈಕಲ್ ಗಳು ಮರಳಿಸಲಾಯಿತು.  

ಬಡಾವಣೆ ಠಾಣೆ: ಈ ಠಾಣೆಯಲ್ಲಿ 4 ಪ್ರಕರಣಗಳ ಪೈಕಿ 90,000 ಕಿಮ್ಮತ್ತಿನ 3 ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಗಜೇಂದ್ರಗಡ: ಈ ಠಾಣೆಯಲ್ಲಿ 3 ಪ್ರಕರಣಗಳಿಗೆ ಸಂಬಂಧಿಸಿದಂತೆ 3,30,000 ಮೌಲ್ಯದ 5 ಮೋಟಾರ್ ಸೈಕಲ್ ಗಳನ್ನು ವಶಕ್ಕೆ ಪಡೆಯಲಾಗಿತ್ತು.

ಮನೆ ಕಟ್ಟಲು ನನ್ನ ಪತಿ 2 ಲಕ್ಷ ಹಣ ಬ್ಯಾಂಕಿನಿಂದ ತರುವಾಗ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪೊಲೀಸರು ಕಾಳಜಿಯಿಂದ ಸ್ಪಂದಿಸಿ ನಮ್ಮ ಹಣ ನಮಗೆ ಸಿಗುವಂತೆ ಮಾಡಿದರು. ಪೊಲೀಸ್ ಇಲಾಖೆ ಈ ಕಾರ್ಯಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು. -ರೇಷ್ಮಾ, ಗದಗ

ಮುಳಗುಂದ: ಈ ಠಾಣೆಯಲ್ಲಿ ಒಂದು ಪ್ರಕರಣ ಭೇದಿಸಿದ್ದು, 6,20,000 ನಾಲ್ಕು ಚಕ್ರದ 1 ವಾಹನವನ್ನು ಪೊಲೀಸರು ಮರಳಿಸಿದ್ದಾರೆ.  

ನರೇಗಲ್ಲ ಠಾಣೆ: ಒಂದು ಪ್ರಕರಣಗಳ ಪೈಕಿ 2,10,000 ಕಿಮ್ಮತ್ತಿನಲ್ಲಿ 85 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.  

ರೋಣ: ಠಾಣೆಯಲ್ಲಿ 4 ಪ್ರಕರಣಗಳ ಪೈಕಿ 2,48,279 ಕಿಮ್ಮತ್ತಿನ 42 ಗ್ರಾಮ ಚಿನ್ನ ಹಾಗೂ ತಲಾ ಒಂದು ಮೋಟಾರ್ ಸೈಕಲ್ ಹಾಗೂ ನಾಲ್ಕು ಚಕ್ರದ ವಾಹನ ವಶಪಡಿಸಿಕೊಂಡಿದ್ದಾರೆ.

ಇಂಡಸ್ ಟಾವರ್ ಗೆ ಸಂಬಂಧಿಸಿದಂತೆ ಲಕ್ಷಾಂತರ ಬೆಲೆ ಬಾಳುವ 200 ಬ್ಯಾಟರಿ ಕಳ್ಳತನ ಮಾಡಲಾಗಿತ್ತು. ಈ ವಿಚಾರ ಕಂಪನಿಗೂ ಕೂಡ ತಲೆನೋವಿನ ಸಂಗತಿಯಾಗಿತ್ತು. ಆದರೆ ಪೊಲೀಸರು ಬ್ಯಾಟರಿ ಕಳ್ಳತನ ಮಾಡಿದವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ನಮಗೆ ದೊಡ್ಡ ಪಕಾರ ಮಾಡಿದ್ದಾರೆ. ಯಾಕೂಬ್ ಅಲಿ, ಇಂಡಸ್ ಕಂಪನಿ

ಗದಗ ಗ್ರಾಮೀಣ: ಠಾಣೆಯಲ್ಲಿ 7 ಪ್ರಕರಣಗಳ ಪೈಕಿ ಇದರಲ್ಲಿ 6,76,400 ಮೌಲ್ಯದ 169 ಚಿನ್ನ, 210 ಗ್ರಾಂ ಬೆಳ್ಳಿ ಹಾಗೂ 2- ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದರು.  

ಶಿರಹಟ್ಟಿ: ಠಾಣೆಯಲ್ಲಿ ಒಂದು ಪ್ರಕರಣಗಳ ಪೈಕಿ 86,000 ಕಿಮ್ಮತ್ತಿ ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಲಾಗಿದೆ.

ಗದಗ ಶಹರ: ಠಾಣೆಯಲ್ಲಿ 15 ಪ್ರಕರಣಗಳ ಪೈಕಿ 9,76,000 ಕಿಮ್ಮತ್ತಿನಲ್ಲಿ 228 ಗ್ರಾಂ ಚಿನ್ನ, 205 ಗ್ರಾಂ ಬೆಳ್ಳಿ, ಒಟ್ಟು ಮೋಟಾರ್ ಸೈಕಲ್ ಗಳ ಸಂಖ್ಯೆ 6, ನಾಲ್ಕು ಗಾಲಿಗಳ 2 ವಾಹನಗಳನ್ನು ವಶಕ್ಕೆ ಪಡೆದು ಹಿಂತಿರುಗಿಸಲಾಗಿದೆ.

Exit mobile version