ಫೋನ್ ಗಾಗಿ ಈ ಬಾಲಕ ಮಾಡಿದ್ದೇನು?

ಬೆಂಗಳೂರು: ಸ್ಮಾರ್ಟ್ ಫೋನ್ ಗಾಗಿ ಕಳ್ಳತನ ಮಾಡಲು ಪ್ರಾರಂಭಿಸಿದ ಅಪ್ರಾಪ್ತ ಬಾಲಕನೊಬ್ಬ ಬರೋಬ್ಬರಿ ರೂ. 4 ಲಕ್ಷಕ್ಕೂ ಅಧಿಕ ಹಣ ಕದ್ದು ಸಿಕ್ಕಿ ಬಿದ್ದ ಘಟನೆ ನಗರದಲ್ಲಿ ನಡೆದಿದೆ.

ಈ ಬಾಲಕನ ಸ್ನೇಹಿತರು ದುಬಾರಿ ಫೋನ್ ಬಳಸಿ ಸೋಷಿಯಲ್ ಮೀಡಿಯಾದಲ್ಲಿ ನಿರತರಾಗಿರುತ್ತಿದ್ದರು. ಅವರನ್ನು ನೋಡಿ ಬಾಲಕನಿಗೂ ಮೊಬೈಲ್ ತೆಗೆದುಕೊಳ್ಳುವ ಆಸೆಯಾಗಿದೆ. ಇದಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದಾನೆ. ನಗರದ ಪ್ರತಿಷ್ಠಿತ ಏರಿಯಾದ ನಾಲ್ಕು ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾನೆ.

ಬಾಲಕ ಜೂ. 9ರಂದು ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆಯ ನಾಲ್ಕು ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡಿದ್ದಾನೆ. ಒಂದು ಅಂಗಡಿಯಲ್ಲಿ ರೂ. 4 ಸಾವಿರ ಹಾಗೂ ಮತ್ತೊಂದು ಅಂಗಡಿಯಲ್ಲಿ ರೂ. 4 ಲಕ್ಷ ದೋಚಿದ್ದಾನೆ.

ಈ ಕುರಿತು ಅಂಗಡಿ ಮಾಲೀಕರು ಸಿಸಿಟಿವಿ ವಿಡಿಯೋ ಸಹಿತ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಪ್ರಾಪ್ತನನ್ನು ಪತ್ತೆ ಹಚ್ಚಿ ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

Exit mobile version