ಹುಬ್ಬಳ್ಳಿ ತಲುಪಿದ ವಿವಿಧ ಜಿಲ್ಲೆಗಳ ಜನರು!!

ಹುಬ್ಬಳ್ಳಿ: ದೆಹಲಿ- ಬೆಂಗಳೂರು ಶ್ರಮಿಕ ಎಕ್ಸ್ ಪ್ರೆಸ್ ರೈಲಿನ ಮೂಲಕ ರಾಜ್ಯದ ವಿವಿಧ 13 ಜಿಲ್ಲೆಗಳ 293  ಪ್ರಯಾಣಿಕರು ಇಂದು ಮಧ್ಯಾಹ್ನ ಇಲ್ಲಿಯ ರೈಲು ನಿಲ್ದಾಣ ತಲುಪಿದ್ದಾರೆ.

ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಮಾರ್ಗದರ್ಶನದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪ ಪೊಲೀಸ್ ಆಯುಕ್ತರಾದ ಕೃಷ್ಣಕಾಂತ್, ಎಂ.ಬಿ. ಬಸರಗಿ, ತಹಶೀಲ್ದಾರರಾದ ಶಶಿಧರ್ ಮಾಡ್ಯಾಳ, ಪ್ರಕಾಶ್ ನಾಶಿ, ವಾಕರಸಾಸಂ ಅಧಿಕಾರಿಗಳಾದ ಹೆಚ್.ಆರ್.ರಾಮನಗೌಡರ್, ಅಶೋಕ್ ಪಾಟೀಲ, ರೇಲ್ವೇ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ದೂರದ ಪ್ರಯಾಣದಿಂದ ತವರಿಗೆ ಮರಳಿದ ಜನರನ್ನು ಅವರ ಜಿಲ್ಲೆಗಳಿಗೆ ಕಳುಹಿಸಿದ್ದಾರೆ.

ಶಿವಮೊಗ್ಗ – 67, ಬೆಳಗಾವಿ-51, ಚಿಕ್ಕಮಗಳೂರು-05, ಉತ್ತರ ಕನ್ನಡ-09, ಕೊಪ್ಪಳ-10, ಚಿತ್ರದುರ್ಗ-12, ದಕ್ಷಿಣ ಕನ್ನಡ-42, ವಿಜಯಪುರ-32, ಹಾವೇರಿ-14, ಬಾಗಲಕೋಟ-13, ಧಾರವಾಡ-32, ಹಾಸನ -5 ಹಾಗೂ ಗದಗ ಜಿಲ್ಲೆಯ ಒಬ್ಬರು ಸೇರಿ ಒಟ್ಟು 293 ಜನರನ್ನು ಆಯಾ ಜಿಲ್ಲಾಡಳಿತಗಳು ಕಳುಹಿಸಿದ್ದ ಸಾರಿಗೆ ಬಸ್ಸುಗಳು ಹಾಗೂ ಇತರ ವಾಹನಗಳ ಮೂಲಕ ಕಳುಹಿಸಿಕೊಡಲಾಯಿತು.

ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳ ಪ್ರಯಾಣಕ್ಕೆ ಸ್ವತಃ ಅಧಿಕಾರಿಗಳೇ ಮುಂದೆ ನಿಂತು ಸಹಾಯ ಮಾಡಿದ ರೀತಿಗೆ ಜನತೆ ಮೆಚ್ಚುಗೆ ಸೂಚಿಸಿದ್ದಾರೆ.

Exit mobile version