ಕೊಲ್ಲಾಪೂರ-ಹೈದ್ರಾಬಾದ್-ಮಣಗೂರು-ಕೊಲ್ಲಾಪೂರ ರೈಲು ಪ್ರಾರಂಭಕ್ಕೆ ಬ್ಯಾಳಿ ಒತ್ತಾಯ

ಬೆಟಗೇರಿ: ಬಹಳಷ್ಟು ಪ್ರಯಾಣಿಕರು ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿಯಿಂದ ರಾಯಚೂರು, ಮಂತ್ರಾಲಯ, ಗದ್ವಾಲ್ ಜಲಮ್ಮದೇವಿಗೆ ಕರ್ನೂಲ ಮೂಲಕ ಶ್ರೀಶೈಲಂಗೆ ಹೋಗಿ ಬರಲು ಕೊಲ್ಲಾಪೂರ-ಹೈದ್ರಾಬಾದ್-ಮಣಗೂರು-ಕೊಲ್ಲಾಪೂರ ಈ ರೈಲುಗಾಡಿ ಕೋವಿಡ್ 19 ಮಹಾಮಾರಿಗಿಂತ ಮುಂಚೆ ಇದ್ದು ಅದು ಪ್ರಯಾಣಿಕರಿಗೆ ಬಹಳ ಅನುಕೂಲವಾಗಿತ್ತು ಕೊರೊನಾ ಕಾರಣಾಂತರದಿAದ ಈ ರೈಲುಗಳು ರದ್ದಾಗಿರುವುದರಿಂದ ರಾಯಚೂರಿಗೆ, ಮಂತ್ರಾಲಯ, ದರ್ಶನಕ್ಕೆ ಶ್ರೀಶೈಲಂಗೆ ಹಾಗೂ ಗದ್ವಾಲ ಜಮಲಮ್ಮ ದೇವಿಗೆ ಹೋಗಿ ಬರುವ ಪ್ರಯಾಣಿಕರಿಗೆ ತೀವ್ರವಾದ ತೊಂದರೆಯಾಗಿದೆ ಎಂದು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ರೈಲುಗಳು ಮಧ್ಯ (ಶ್ರೀಶೈಲಂ) ರೇಲ್ವೆ ವಿಭಾಗದಿಂದ ಓಡಿಸಲಾಗುತ್ತಿತ್ತು ಕೊಲ್ಲಾಪೂರ-ಹೈದ್ರಾಬಾದ ಮಣಗೂರು-ಕೊಲ್ಲಾಪೂರ ರೈಲುಗಳು ಮೊದಲಿನಂತೆ ಪ್ರತಿನಿತ್ಯ ಓಡಿಸುವಂತೆ ಮತ್ತು ಮಂತ್ರಾಲಯ, ಶ್ರೀಶೈಲಂ, ಗದ್ವಾಲ್, ರಾಯಚೂರಿಗೆ ಹೋಗಿ ಬರುವ ಸದ್ಭಕ್ತರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವೇ ನೈರುತ್ಯ ರೇಲ್ವೆಯವರಾದರೂ ಈ ಗಾಡಿಗಳು ಹುಬ್ಬಳ್ಳಿಯಿಂದ ಓಡಿಸುವಂತೆ ಆಗ್ರಹಿಸಿದ್ದಾರೆ.

Exit mobile version