ಕುಣಿಯೊಳಗಿಳಿದು ಸ್ವ್ಯಾಬ್ ಟೆಸ್ಟ್: ಕಥೆಯ ಹಿಂದಿನ ಟ್ವಿಸ್ಟ್

ಹಾವೇರಿ: ಕೊರೋನಾ ಕಷ್ಟಕಾಲದಲ್ಲಿ ಕೆಲಸ ಮಾಡುವುದು ಬಹಳಷ್ಟು ಕಷ್ಟದ ಕೆಲಸವಾಗಿದೆ. ಮೃತ ವೃದ್ಧನ ಸ್ವ್ಯಾಬ್ ಟೆಸ್ಟ್ ಮಾಡಿದ ತಪ್ಪಿಗೆ ಲ್ಯಾಬ್ ಟೆಕ್ನಿಷೀಯನ್ ಒಬ್ಬರು ಕುಟುಂಬದಿಂದಲೇ ಬಹಿಷ್ಕಾರಕ್ಕೆ ಒಳಗಾಗುವಂತಾಗಿದೆ. ಮುಖ್ಯವಾಗಿ ಹೆತ್ತ ಮಗನೇ ತಾಯಿಯ ಸಮೀಪಕ್ಕೂ ಬಾರದಂತಾಗಿದೆ.

ಅಂದ್ಹಾಗೆ ಈ ಕಥೆಯ ಹಿಂದೆ ಮತ್ತೊಂದು ಟ್ವೀಟ್ಸ್ ಇದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಈಗಾಗಲೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಹೀಗಾಗಿ ಸವಣೂರು ತಾಲೂಕು ಜಿಲ್ಲೆಯಲ್ಲಿಯೇ ಸೂಕ್ಷ್ಮ ಪ್ರದೇಶವಾಗಿದೆ. ಇಂಥದ್ರಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾತ್ರ ಇದರ ಗಂಭೀರತೆ ಗೊತ್ತಾದಂತೆ ಕಾಣ್ತಿಲ್ಲ. ಆರೋಗ್ಯ ಇಲಾಖೆ ಮಾಡಿದ ಯಡವಟ್ಟು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಲ್ಯಾಬ್ ಟೆಕ್ನಿಶಿಯನ್ ಒಬ್ಬರನ್ನು ಸಂಕಷ್ಟಕ್ಕೀಡು ಮಾಡಿದೆ.

ಸವಣೂರು ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಶೋಭಾ ಚನ್ನಪ್ಪನವರ್ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಿರೇಮಗದೂರು ಗ್ರಾಮಕ್ಕೆ ಸ್ವ್ಯಾಬ್ ಟೆಸ್ಟಿಂಗ್ ಇದೆ ಹೋಗಿ ಬನ್ನಿ ಎಂದು ತಾಲೂಕು ವೈದ್ಯಾಧಿಕಾರಿ ಆದೇಶದಂತೆ ಶೋಭಾ ಗ್ರಾಮಕ್ಕೆ ತೆರಳಿದ್ದಾರೆ. ಅಲ್ಲಿಗೆ ಹೋದ ಮೇಲೆ ಗೊತ್ತಾಗಿದ್ದು ತಾವು ಬಂದಿದ್ದು ಮೃತ ವೃದ್ಧನ ಸ್ವ್ಯಾಬ್ ಟೆಸ್ಟಿಂಗ್ ಗೆ ಅಂತ ಅವರು ಊರು ಸೇರುವಷ್ಟರಲ್ಲಾಗಲೇ ಇನ್ನೇನು ಅಂತ್ಯ ಕ್ರಿಯೇ ಆರಂಭ ವಾಗುವ ಹಂತದಲ್ಲಿತ್ತು. ಬೆಳಿಗ್ಗೆ ಒಂಭತ್ತು ಗಂಟೆಗೆ ಫೋನ್ ಮಾಡಿದ್ರೆ ಒಂದು ಗಂಟೆಗೆ ಬರ್ತಿರಾ ಅಂತ ಅಲ್ಲಿ ನೆರೆದಿದ್ದ ಗ್ರಾಮಸ್ಥರು ಶೋಭಾ ಅವರಿಗೆ ತರಾಟೆಗೆ ತೆಗೆದುಕೊಂಡರು. ಆದರೆ ಇಲಾಖೆಯ ಮರ್ಯಾದೆ ಜನರ ಆಕ್ರೋಶ ಕಂಡು ಶೋಭಾ ಅನಿವಾರ್ಯವಾಗಿ ಕುಣಿಯೊಳಗಿಳಿದು ಸ್ವ್ಯಾಬ್ ಶಾಂಪಲ್ ಪಡೆದಿದ್ದಾರೆ.

ಇದನ್ನೆಲ್ಲ ಮುಗಿಸುವಷ್ಟೊತ್ತಿಗೆ ಮತ್ತೆ ಟಿಎಚ್ಓ ಪಿಎ ಕಾಲ್ ಮಾಡಿ ಅಲ್ಲಿಂದ ಆಸ್ಪತ್ರೆಗೆ ಬನ್ನಿ ಇಲ್ಲಿ ಇನ್ನು ಸ್ವಲ್ಪ ಸ್ವ್ಯಾಬ್ ಟೆಸ್ಟಿಂಗ್ ಇದೆ ಎಂದು ತಾಕೀತು ಮಾಡಿದ್ದಾರೆ. ಇದಕ್ಕೆ ಶೋಭಾ ಅಲ್ಲಿ ನಡೆದ ಘಟನೆ ವಿವರಿಸಿದ್ದಾರೆ. ಆದಾಗ್ಯೂ ನೀವು ಆಸ್ಪತ್ರೆಗೆ ಬರಲೇಬೇಕೆಂದು ಆದೇಶಿಸಿದ್ದಾರೆ. ಆದರೆ ಶೋಭಾ ಮನೆಗೆ ಹೋಗಿ ಸ್ನಾನ ಮಾಡಿಕೊಂಡೇ ಬರುವುದಾಗಿ ಸಮಜಾಯಿಷಿ ನೀಡಿದ್ದಾರೆ.

ಮನೆಗೆ ಬಂದ ಶೋಭಾಗೆ ಮತ್ತೊಂದು ಆಘಾತ ಕಾದಿತ್ತು. ಹಿರೇಮುಗದೂರು ಗ್ರಾಮದಲ್ಲಿ ನಡೆದ ಕಥೆಯನ್ನು ಮನೆಯವರಿಗೆ ಶೋಭಾ ಹೇಳುತ್ತಾರೆ. ಇದನ್ನು ಕೇಳಿದ ತನ್ನೊಟ್ಟಿಗಿದ್ದ ಇಬ್ಬರು ಸಹೋದರಿಯರು ಹಾಗೂ ಹೆತ್ತ ಮಗ ಇವರನ್ನು ಹೊರಹಾಕಿದ್ದಾರೆ. ಹೆತ್ತ ಮಗ ಕೂಡ ತಾಯಿ ಸಮೀಪ ಬಂದಿಲ್ಲ. ಘಟನೆ ನಡೆದು ಎರಡು ದಿನವಾದ್ರು ಇಲಾಖೆ ಅಧಿಕಾರಿಗಳು ಮಾತ್ರ ಶೋಭಾಳನ್ನು ವಿಚಾರಿಸಿಲ್ಲ. ಮುಖ್ಯವಾಗಿ ಸ್ವ್ಯಾಬ್ ತೆಗೆಯುವ ಮುನ್ನ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ಅಲ್ಲಿ ಕೈಗೊಂಡಿರಲಿಲ್ಲ. ಕಾರ್ ಟ್ರೈವರ್ ಜೊತೆ ಲ್ಯಾಬ್ ಟೆಕ್ನಿಶಿಯನ್ ಮಾತ್ರ ಕಳುಹಿಸಿದ ಇಲಾಖೆ ಅಲ್ಲಿಯೂ ಕೂಡ ನಿಯಮಗಳನ್ನು ಗಾಳಿಗೆ ತೂರಿದೆ. ಮೇಲಧಿಕಾರಿಗಳು ಇಂಥಹ ಗುತ್ತಿಗೆ ನೌಕರರನ್ನು ಈ ರೀತಿ ನಡೆಸಿಕೊಂಡಿದ್ದು ಮಾತ್ರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಗುತ್ತಿಗೆ ಹಾಗೂ ಖಾಯಂ ಅನ್ನೋ ಬೇಧದ ಮೂಲಕ ನಮಗ್ಯಾಕೆ ತಾರತಮ್ಯ ಮಾಡುತ್ತಿರಿ, ಈ ತಾರತಮ್ಯ ನೀತಿಯನ್ನು ತೆಗೆಯಬೇಕು ಅಂತಾರೆ ಶೋಭಾ.

ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ವೈದ್ಯಾಧಿಕಾರಿ ರಾಜೇಂದ್ರ ದೊಡ್ಡಮನಿ ಹಿರೇಮಗದೂರು ಗ್ರಾಮದ ಘಟನೆ ಈಗಷ್ಟೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ತಾಲೂಕು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Exit mobile version