ಕೊರೊನಾ ಹೋರಾಟದಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ – ಕೇಂದ್ರ ಸರ್ಕಾರ!

ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶ ಉತ್ತಮ ಸ್ಥಿತಿಯಲ್ಲಿಯೇ ಹೊರಟಿದೆ. ಆದರೂ ಮರೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಕುರಿತು ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು, ಕೊರೊನಾ ವೈರಸ್ ನ ಮಾಹಿತಿ ನೀಡಿದರು. ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟಾರೆ 4,785 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದು, ಆ ಮೂಲಕ ಭಾರತದಲ್ಲಿ 1,29,214 ಗುಣಮುಖರಾಗಿದ್ದಾರೆ.

ದೇಶದಲ್ಲಿ ಮತ್ತಷ್ಟು ಕ್ಷೇತ್ರಗಳಲ್ಲಿ ನಿಯಮ ಸಡಿಲಿಕೆ ಮಾಡಲಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ದೇಶದ ನಾಗರಿಕರು ಶಿಸ್ತಿನಿಂದ ಇರಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ನೈರ್ಮಲ್ಯ ಮತ್ತು ಉಸಿರಾಟದ ಶಿಷ್ಟಾಚಾರ ಸೇರಿದಂತೆ ಆರೋಗ್ಯ ಇಲಾಖೆ ನೀಡಲಾಗಿರುವ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 60,848 ವೆಂಟಿಲೇಟರ್ ಗಳ ಖರೀದಿಗೆ ಆರ್ಡರ್ ನೀಡಲಿದೆ. ಇದಲ್ಲದೆ 128.48 ಲಕ್ಷ ಎನ್ 95 ಮಾಸ್ಕ್ ಗಳು, 104.74 ಲಕ್ಷ ಪಿಪಿಇ ಕಿಟ್ ಗಳನ್ನು ದೇಶದ ವಿವಿಧ ರಾಜ್ಯಗಳಿಗೆ ರವಾನೆ ಮಾಡಲಾಗುತ್ತದೆ. ಐಸಿಎಂಆರ್ ನ ಕೊರೋನಾ ಟೆಸ್ಟ್ ಸಾಮರ್ಥ್ಯವನ್ನು 784 ಲ್ಯಾಬ್ ಗಳಿಗೆ ಹೆಚ್ಚಿಸಲಾಗಿದ್ದು ಈ ಪೈಕಿ 553 ಸರ್ಕಾರಿ ಲ್ಯಾಬ್ ಗಳು ಮತ್ತು 231 ಖಾಸಗಿ ಲ್ಯಾಬ್ ಗಳಾಗಿವೆ. ದೇಶದಲ್ಲಿ ಈ ವರೆಗೂ 49 ಲಕ್ಷ ಕೊರೋನಾ ಟೆಸ್ಟ್ ಗಳನ್ನು ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ 1,41,682

Exit mobile version