ಮೇ. 17ರ ನಂತರ ಲಾಕ್ ಡೌನ್ ಸ್ಥಿತಿ ಹೇಗಿರಲಿದೆ?

ಬೆಂಗಳೂರು: ಮೂರನೇ ಹಂತದ ಲಾಕ್ ಡೌನ್ ಮುಗಿಯಲು ಇನ್ನೂ 7 ದಿನಗಳು ಬಾಕಿ ಇವೆ. ಈ ಸಮಯದಲ್ಲಿ ಸದ್ಯ ಮುಂದಿನ ದೇಶದ ಸ್ಥಿತಿ ಹೇಗಿರುತ್ತದೆ ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ.

ಒಂದು ವೇಳೆ ಲಾಕ್ ಡೌನ್ ಮುಂದುವರೆಸಿದರೆ, ಏನಿರುತ್ತದೆ ಎಂಬ ಕುರಿತು ಚರ್ಚೆಗಳು ಶುರುವಾಗಿವೆ. ಲಾಕ್ಡೌಲನ್ ಮುಗಿದರೆ, ವೈರಸ್ ಹಬ್ಬಿದರೆ ಏನು ಗತಿ? ಎಂಬ ಕುರಿತು ಕೂಡ ಚರ್ಚೆಗಳು ಪ್ರಾರಂಭವಾಗಿವೆ. ಈ ಎಲ್ಲ ಲೆಕ್ಕಾಚಾರದ ನಡುವೆ ಪ್ರಧಾನಿ ಮೋದಿ ಅವರು ಇಂದು ಮಧ್ಯಾಹ್ನ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. 

ಅಲ್ಲದೇ, ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಅವರು ಮಧ್ಯಾಹ್ನ 2ಕ್ಕೆ ಸಚಿವರು, ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ರಾಜ್ಯದ ಕೊರೋನಾ ಪ್ರಕರಣ, ಲಾಕ್ಡೌ ನ್ ನಿರ್ಬಂಧ, ಲಾಕ್ಡೌಂನ್ ಸಡಿಲಿಕೆ, ನಿರ್ವಹಣೆಗಳ ಬಗ್ಗೆ ವಿವರ ಪಡೆಯಲಿದ್ದಾರೆ.

ಒಂದು ವೇಳೆ ಲಾಕ್ ಡೌನ್ ಮುಂದುವರೆದರೂ ರಾಜ್ಯದಲ್ಲಿ ಹಲವು ಮಾರ್ಗಸೂಚಿಗಳನ್ನು ಕೈಗೊಳ್ಳಬಹುದು ಎನ್ನಲಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಅಂತರ್ ಜಿಲ್ಲಾ ಸಾರಿಗೆಗೆ ಅವಕಾಶ ಸಾಧ್ಯತೆಯಿದೆ. ಕಂಟೈನ್ಮೆಂಟ್ ಝೋನ್ ಬಿಟ್ಟು ಉಳಿದೆಡೆ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಬಹುದು. 

ಸರ್ಕಾರಿ, ಖಾಸಗಿ ಬಸ್, ಆಟೋ ರಿಕ್ಷಾ, ಟ್ಯಾಕ್ಸಿಗೆ ಅವಕಾಶ ಸಿಗಬಹುದು. ಶೇ. 50 ರಷ್ಟು ಬಸ್, ಪ್ರಯಾಣಿಕರಿಗೆ ಸಂಚರಿಸಲು ಅವಕಾಶ ನೀಡಬಹುದು. ಶಾಪಿಂಗ್ ಮಾಲ್, ಥಿಯೇಟರ್‍ ಗಳಿಗೆ ನಿರ್ಬಂಧ ಹೇರುವ ಸಾಧ್ಯದೆ ಇದೆ. ಧಾರಾವಾಹಿ, ಸಿನಿಮಾ ಹೊರಾಂಗಣ ಶೂಟಿಂಗ್ಗೂನ ನಿರ್ಬಂಧ ಮುಂದುವರಿಸಬಹುದು.

ದೇಗುಲ, ದೇವರ ಜಾತ್ರೆ, ಸಂತೆ, ಉತ್ಸವಗಳಿಗೆ ಬಹುತೇಕ ನಿರ್ಬಂಧ ಇರಬಹುದು. ಸರ್ಕಾರಿ, ಖಾಸಗಿ ಸಭೆ, ಸಮಾರಂಭಗಳಿಗೂ ಅವಕಾಶ ಕೊಡದಿರಬಹುದು. ಜೂನ್ ಮಧ್ಯಭಾಗ ಅಥವಾ ಜುಲೈನಲ್ಲಿ ಶಾಲಾ-ಕಾಲೇಜುಗಳ ಆರಂಭ ಆಗಬಹುದು.

Exit mobile version