ಮಗುವಿಗಾಗಿ ಆಹಾರ ಅರಸಿದ ತಾಯಿ..! ಇದು ಮಂಗಗಳ ಮಂಕಿಬಾತ್!

ಹುಬ್ಬಳ್ಳಿ: ದೇಶದೊಳಗ ಲಾಕ್ ಡೌನ್ ಶುರುವಾಗಿ 42 ದಿನದ ಹೊತ್ತಾಯಿತು. ಇಂಥಾದ್ರಾಗ, ಬಾಯಿದ್ದ ಮನುಷಾರಾ ಅನ್ನಕ್ಕಾಗಿ ಬಾಯಿ ಬಿಡುವಂಗಾಗೈತಿ. ಇನ್ನ ಪ್ರಾಣಿಗಳ ಪರಿಸ್ಥಿತಿ ಹೆಂಗಿರಬಾರದು? ಬಾಯಿದ್ದ ಮನುಷ್ಯಾ ತನ್ನ ಹಸಿವು ಬ್ಯಾರೆರ್ ಮುಂದಾದ್ರು ಹೇಳ್ಕೋತಾನ ಪಾಪ ಮೂಕ ಪ್ರಾಣಿಗಳು ಯಾರ ಮುಂದ ಹೇಳಬೇಕು ಹೇಳ್ರಿ?.

ಆಹಾರಕ್ಕಾಗಿ ಮಂಗಗಳ ಪರದಾಟ

ನೀವಾಗೇ ಒಂದು ತುತ್ತ್ ಕೊಟ್ರ ತಿಂತಾವು, ಇಲ್ಲಂದ್ರಾ ಉಷಾ…, ಅಂದ್ರ ಹೊಕ್ಕಾವು. ನಿಜ ಹೇಳಬೇಕಂದ್ರ ಪ್ರಾಣಿಗಳ ಸ್ಥಿತಿ ಭಾಳ್ ಕರುಣಾಜನಕ ಐತಿ ನೋಡ್ರಿ. ಇದಕ್ ಉದಾಹರಣೆ ಅನ್ನೋವಂಗ ಹುಬ್ಬಳ್ಯಾನ ದೃಷ್ಯ ನಮ್ ಕಣ್ ಕಟ್ ತೈತಿ ನೋಡ್ರಿ.

ಇಡೀ ದೇಖಕ್ಕ ದೇಶಾನಾ ಲಾಕ್ ಡೌನ್ ಆಗೈತಿ. ಒಂದಲ್ಲ ಎರಡಲ್ಲ ಒಂದುವರಿ ತಿಂಗಳದ ಹೊತ್ತಾತು. ಅವತ್ತಿನ ದುಡಿಮಿನಾ ನಂಬಿಕೊಂಡಿದ್ದ ಜನ್ರ ಸ್ಥಿತಿ ಹೇಗಿರಬ್ಯಾಡ, ಇನ್ನ, ಊರೂರು ಅಲೆಯುವುದ ಜೀವನ ಮಾಡಿಕೊಂಡಾವ್ರ ಪರಿಸ್ಥಿತಿ ಹೇಗಿರಬ್ಯಾಡ. ಇವೆಲ್ಲ ನೆನಿಸಿಕೊಂಡ್ರ ಕರಳು ಕಿತ್ತು ಬರುವಂಗಾಕ್ಕೈತಿ.

ಅಂದ್ಹಂಗ ನಾನು ನಿಮಗ ಹುಬ್ಬಳ್ಳ್ಯಾಗಿನ ಮಂಗಗಳ ಸ್ಥಿತಿಯ ಬಗ್ಗೆ ಹೇಳಾಕತ್ತಿದೆ. ವಿಷಯಕ್ಕ ಬರ್ತಿನಿ ಕೇಳ್ರಿ. ಮಂಗ ಒಂದು ಪಾಪ ಹಸಿದ ತನ್ನ ಮರಿ ಹೊಟ್ಟಿ ತುಂಬಿಸಾಕ ಎಷ್ಟ ಪರದಾಡಾಕತ್ತೈತಿ ಅನ್ನೋ ಕಥಿ ಇದು.

ಅಲ್ರಿ ಪಾಪ ಈ ಮಂಗ ಓಣಿ ಓಣಿ ಅಲೆದಾಗ ಯಾರಾದ್ರು ಏನಾರ ಕೊಟ್ರ ತಿನಬೇಕು. ಇಲ್ಲಂದ್ರ ಸುಮ್ನ ಇರಬೇಕು. ಇವತ್ತು ತನ್ನ ಮರಿ ಜೊತೆ ಆಹಾರ ಹುಡುಕಾಕ ವಾನರ ಸೈನ್ಯ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ಎಂಥವರ ಕರಳು ಹಿಂಡೋ ಕರುಣಾಜನ ಕಥೆ ಇದು. ಮಂಕಿಗಳ ಮನ್ ಕಿ ಬಾತ್.! ಅಂದ್ರ ತಪ್ಪಾಗ್ಲಿಕ್ಕಿಲ್ಲ.

ಸಿಕ್ಕ ಹಾಲಿನ ಪಾಕೀಟಿನಿಂದ ಕೆಳಗೆ ಬಿದ್ದ ಹನಿ-ಹನಿಗೆ ಬಾಯಿ ಹಾಕಿ ನೆಕ್ಕುವ ಮಂಗಗಳ ಪಾಡಂತು ಹೇಳತೀರದು. ಏನ ಆಗ್ಲಿ ಅವುಗಳದ್ದು ಒಂದು ಜೀವ. ನೋಡಿದವ್ರು ಇಂಥಹ ದೃಷ್ಯನಾ ನೋಡಿ ನಕ್ ಸುಮ್ನಾಗಿ ಬಿಡಬ್ಯಾಡ್ರಿ. ನಿಮ್ ಕೈಲಾದಷ್ಟು ಹಸಿದ ಆ ಮೂಕ ಪ್ರಾಣಿಗಳ ಹೊಟ್ಟಿಗೊಂದಿಷ್ಟು ಆಹಾರ ಕೊಟ್ಟು ಪುಣ್ಯಾ ಕಟ್ಟಿಕೊಳ್ರಿ. ಇದು ನಿಮ್ಮ ಉತ್ತರ ಪ್ರಭದ ಕಳಕಳಿ.

Exit mobile version