ಹುಬ್ಬಳ್ಳಿ: ರಾಜ್ಯದಲ್ಲಿ ಜೂನ್ 7 ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಅಲ್ಲಿಯವರೆಗೆ ಲಾಕ್ ಡೌನ್ ಬಗ್ಗೆ ವಿಚಾರ ಬೇಡಾ. ಅಲ್ಲದೇ ಕೇಂದ್ರ ಸರ್ಕಾರ ಜೂನ್ 30 ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗುವುದು ಎಂದು ಹೇಳಿಲ್ಲಾ. ಅದು ಕಂಟೈನ್ಮೆಂಟ್ ಜೋನ್ ಸಂಖ್ಯೆಗಳನ್ನು ಹೆಚ್ಚಿಸಲು ಸೂಚಿಸಿರುವುದು. ಹಾಗಾಗಿ ಲಾಕ್ ಡೌನ್ ಬಗ್ಗೆ ಸಿಎಂ ಚರ್ಚಿಸಿ ಘೋಷಣೆ ಮಾಡುವರು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಅವರು ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಜಲ ಜೀವನ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಯ 388 ಗ್ರಾಮಗಳಿಗೆ ಮುಂದಿನ ಮೂರು ವರ್ಷಗಳಲ್ಲಿ, ಕುಡಿಯುವ ನೀರು ಒದಗಿಸಲಾಗುತ್ತದೆ ಎಂದು ಹೇಳಿದರು.
ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ, ಜಿಲ್ಲೆಗೆ 1032 ಕೋಟಿಯಲ್ಲಿ ಜಲ ಜೀವನ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ 403 ಕೋಟಿ ನೀಡಿದರೇ, 602 ಕೋಟಿ ರಾಜ್ಯ ಸರ್ಕಾರ ನೀಡಿದೆ, 423 ಕೋಟಿ ನಬಾರ್ಡ್ ರಿಂದ ಸಾಲ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಇನ್ನು ಅಣ್ಣಿಗೇರಿಯನ್ನು ಹೊಸ ತಾಲೂಕು ಮಾಡಿದ ನಂತರ ಅಲ್ಲಿಯೂ ಕುಡಿಯುವ ನೀರಿಗಾಗಿ 54 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದರು.

