ಕೊರೋನಾ ಕಾವ್ಯ-4

ಆತ್ಮಿಯರೆ,

ಇವತ್ತಿನ ಕೊರೋನಾ ಕಾವ್ಯ ಸರಿಣಿಗೆ ಕವನ ಕಳುಹಿಸಿದವರು ಮಂಗಳಗೌರಿ ಹಿರೇಮಠ, ಮಂಗಳಗೌರಿ ಹಿರೇಮಠ ಇವರು ಗದಗನ ಬಸವೇಶ್ವರ ನಗರದವರು, ಸಾಹಿತ್ತಿಕವಾಗಿ ಅಭಿರುಚಿ ಉಳ್ಳ ಮಂಗಳಗೌರಿ ಅವರು ಸಾಕಷ್ಟು ಕವತೆಗಳನ್ನು ರಚಿಸಿದ್ದಾರೆ. ಊಹಿಸದೇ ಬಂದ ಘಳಿಗೆಯನ್ನು ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಹದವಾಗಿ ಕಟ್ಟಿಕೊಟ್ಟಿದ್ದಾರೆ.

ಊಹಿಸದೇ ಬಂದ ಘಳಿಗೆ

ಕಾಲ ಹೀಗೆ ಇರೋದಿಲ್ಲ

ಮನುಷ್ಯ ಎಷ್ಟೇ ಮುಂದುವರೆದರೂ

ಪ್ರಕೃತಿ ಮಾತೆಯ ಮುಂದೆ ಕುಬ್ಜನೆಂಬುದು ಸಾಬೀತು ಆಗಿದೆ

ಯಾವುದೆಲ್ಲಾ ಮುಖ್ಯವೆಂದು ಜಗತ್ತಿಗೆ ತೋರಿಸಿಬಿಟ್ಟೆಯಾ ವೈರಸ್

ಚೀನಾದ ವುಹಾನ್ ಹುಟ್ಟೂರು

ಇಡಿ ವಿಶ್ವದಲ್ಲಿ ಸಾಂಕ್ರಾಮಿಕವಾಗಿ ಮುಂದುವರೆದಿದೆ

ಅಂತ್ಯಕ್ಕೊಂದು ಸಮಯ ಬೇರಬೇಕಾಗಿದೆ ಸಾಬಿತು ಆಗಬೇಕಾಗಿದೆ

ಸಮಯ ಹೀಗೆ ಇರುವದಿಲ್ಲ ಸಾಬೀತು ಮಾಡಿ ಸಾರಿ ಬಿಟ್ಟೆಯಾ ವೈರಸ್

ಶೀತ ನೆಗಡಿ ಕೆಮ್ಮು ಸಾಮಾನ್ಯ ಅಲ್ಲ

ಶುರುವಾಗಿ ಮನುಷ್ಯ ಉಸಿರಾಟಕ್ಕೆ ತೊಂದರೆ ಮಾಡಿ

ಒಂದು ಸಾಂಕ್ರಾಮಿಕವಾಗಿ ಕಾಡುವದು ಎಲ್ಲರಲ್ಲೂ ನಿನ್ನ ಗುಣ ಆಗಿದೆ

ಹುಟ್ಟು ಸಾವು ಪ್ರಕೃತಿಯ ನಿಯಮ ಎಂಬುದು ನೆನಪಿಸಿಬಿಟ್ಟೆಯಾ ವೈರಸ್

ಅದೆಷ್ಟು ಜನರ ಬದುಕಿಗೆ ಸಂಚಕಾರ ತಂದೆಯಾ

ಹಣದಿಂದ ಮೆರೆಯುವನಿಗೆ ಒಂದಿಷ್ಟು

ಜೀವನಮುಖ್ಯವಲ್ಲ ಜೀವ ಮುಖ್ಯ ಏಕತೆಯ ಮಂತ್ರ ಹಾಡಿದೆ

ಕಾಲಚಕ್ರ ಹೀಗೆ ಇರುವದಿಲ್ಲ ಎಂಬುದು ಸಾಬೀತು ಮಾಡಿಬಿಟ್ಟೆಯಾ ವೈರಸ್

ಆದೆಷ್ಟೋ ಕಾಯಿಲೆಗಳು ಬಂದವು

ನೋವು ಕೊಟ್ಟು ಬೆಂದು ಹೋದವು

ಈಗಷ್ಟೇ ಜಾಗೃತನಾಗಬೇಕು

ಮಾಸ್ಕ ಸ್ಯಾನಿಟೇಜರ್ ಅಂತರ ಕಾಯ್ದುಕೊಳ್ಳೋದು ಒಳಿತಿಗಾಗಿ ಒಳ್ಳೆಯ ಸಮಯಕ್ಕಾಗಿ

ಕಾಯಬೇಕು ತಾಳ್ಮೆ ಇರಬೇಕು ಅಷ್ಟೇ ಅಲ್ಲವೇ ವೈರಸ್

ಆರೋಗ್ಯವಂತ ಸಮಾಜ ನಿರ್ಮಾಣ

ವೈದ್ಯ ದಾದಿಯರು ಪೊಲೀಸ್ ಕಾರ್ಮಿಕರ ಶ್ರಮಕ್ಕೆ ಶೆಲ್ಯೂಟ್ ಮಾಡಿ ಎಲ್ಲರ ಬಾಳಲ್ಲಿ ಬೆಳಕಾಗಬೇಕು

ವೈರಸ್ ತೊಲಗಿಸೋಣ

ಸರ್ವೇ ಜನೋ ಸುಖಿ:ನೋ ಭವಂತು ಎನ್ನೋಣ

                      ಮಂಗಳಗೌರಿ ಹಿರೇಮಠ,ಗದಗ

Exit mobile version