ದಕ್ಷಿಣ ಕನ್ನಡ(ಸವಣೂರು) :
ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ ಮಂಗಳೂರು, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು. ಇವರುಗಳ ವತಿಯಿಂದ ಜಿಲ್ಲಾ ಯುವ ಸಮಾವೇಶ ತರಬೇತಿ ಕಾರ್ಯಾಗಾರವನ್ನು ಶನಿವಾರ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಹಾಗೂ ಯುವಕ ಮಂಡಲ ಸವಣೂರು ಇವರುಗಳ ಸಹಕಾರದೊಂದಿಗೆ ರಾಜ್ಯ ಮಟ್ಟದ ಜನಪದ ನೃತ್ಯ ಸ್ಪರ್ಧೆ ಮತ್ತು ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭವು ಶನಿವಾರ ದ.ಕ.ಜಿ.ಒಂ.ಉ. ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ ಆಗಮಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೆರಿಸಿ ಮಾತನಾಡಿದ ಅವರು ರಾಜ್ಯದ 31 ಜಿಲ್ಲೆಗಳಿಂದ ಆಯ್ಕೆಯಾದ ಯುವ ಪ್ರತಿಭೆಗಳು ಇಂದು ನಮ್ಮ ಪುತ್ತೂರಿಗೆ ಬಂದಿರುವುದು ಬಹಳ ಸಂತೋಷದ ವಿಷಯ, ಈ ತರಹದ ಇನ್ಮು ಹೆಚ್ಚಿನ ಕಾರ್ಯಕ್ರಮ ಜರುಗಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಪ್ರತಿಭೆಗಳು ಹೊರಬಿಳಲಿ, ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಭಾಗೀರತಿ ಮುರುಳ್ಯಾ ಮಾತನಾಡಿ ರಾಜ್ಯದ ಎಲ್ಲ ಮೂಲೆಗಳಿಂದ ಯುವಪ್ರತಿಭೆಗಳು ಇಂದು ನನ್ನ ಕ್ಷೆತ್ರಕ್ಕೆ ಬಂದಿರುವುದು, ಹಾಗೂ ನಾನು ನಿಮ್ಮೆಲ್ಲರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನನ್ನ ಭಾಗ್ಯ, ನಾನು ಕೂಡಾ ಯವತಿ ಸಂಘಟನೆಯಿಂದ ಈ ಸ್ಥಾನಕ್ಕೆ ತಲುಪಲು ಸಾಧ್ಯವಾಯಿತು.
ಹೀಗೆ ರಾಜ್ಯಾದ್ಯಂತ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಯುವತಿಯರು ಯುವ ಸಂಘಟನೆಯ ಮೂಲಕ ಜನರಿಗೆ ಮಾದರಿಯಾಗಬೇಕು ಹಾಗೂ ಹೀಗೆ ಅನೇಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಮೂಲಕ ಇತರರಿಗೆ ಮಾದರಿಯಾಗುವಂತೆ ಹೇಳಿದರು.
ದುರದಿಂದ ಪ್ರತಿ ಜಿಲ್ಲೆಗಳಿಂದ ನನ್ನ ಕ್ಷೇತ್ರಕ್ಕೆ ಬಂದು ಈ ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಅಭಿನಂದನೆ ಹೇಳಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಹಾಗೂ ರಾಜ್ಯ ಪ್ರದಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ ವರ್ಷಾನು ವರ್ಷಗಳಿಂದ ನಾವು ನಮ್ಮ ತಂಡ ರಾಜ್ಯದ ವಿವಿಧ ಮೂಲೆ ಮೂಲೆಗಳಿಗೂ ಹೋಗಿ ಅಲ್ಲಿನ ಹೊಸ ಪ್ರತಿಭೆಗಳನ್ನು ಹೊರಹಾಕುವ ಪ್ರಯತ್ನದಲ್ಲಿದ್ದೆವೆ, ಈ ವರ್ಷ 2024-25ನೇ ಸಾಲಿನ ರಾಜ್ಯ ಯುವ ಪ್ರಶಸ್ತಿ ಪ್ರದಾನವು ಪೂತ್ತುರಿನಲ್ಲಿ ನಡೆಯುತ್ತಿದೆ ಹೀಗೆ ಎಲ್ಲ 31 ಜಿಲ್ಲೆಗಳಿಂದ ಆಯ್ಕೆಯಾದ ಅಭ್ಯರ್ಥಿಗಳು ಇಲ್ಲಿಯವರೆಗೆ ಬಂದು ಪ್ರಶಸ್ತಿ ಪಡೆದು ಇತರರಿಗೆ ಮಾದರಿಯಾಗಿದ್ದಿರಿ ನಿಮಗೆಲ್ಲ ಅಭಿನಂದನೆಗಳು ಎಂದು ಸಲ್ಲಿಸುತ್ತಾ, ಹೀಗೆ ಒಂದು ಆದ ಮೇಲೆ ಒಂದು ಜಿಲ್ಲೆಗಳಲ್ಲಿ ನಾವು ರಾಜ್ಯ ಯುವ ಸಂಘಗಳ ಒಕ್ಕೂಟ ಸ್ಥಾಪಿಸುತ್ತಿದ್ದು, ಇನ್ಮು ಹೆಚ್ಚಿನ ಸಂಖ್ಯೆಯಲ್ಲಿ ಯುವ ಪ್ರತಿಭೆಗಳು ಹೊರಬಿಳಲಿ, ಯುವ ಜನರು ಸಂಘಟಿಕರಾಗಲಿ ಇದಕ್ಕೆ ಸರ್ಕಾರದಿಂದ ಯುವ ಸಂಘಟನೆಗಳಿಗೆ ಪ್ರೋತ್ಸಾಹ ದೊರೆಯಲಿ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲರಿಗೆ ಸರ್ಕಾರದ ಗಮನಕ್ಕೆ ತರುವಂತೆ ಒತ್ತಾಯಿಸಿದರು.
ವೇದಿಕೆಯಲ್ಲಿ ಅಥಿತಿಗಳಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೂಟ್ಟು, ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್. ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಶಿವಪ್ರಸಾದ್ ಮೈಲೇರಿ, ಸವಣೂರು ಸ.ಉ.ಹಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶ್ರಫ್ ಜನತಾ, ಮುಖ್ಯ ಶಿಕ್ಷಕ ನಿಂಗರಾಜು, ಬೆಳಗಾವಿ ಯುವಜನ ಒಕ್ಕೂಟದ ಅಧ್ಯಕ್ಷ ಸಿದ್ದಣ್ಣ ದುರದುಂಡಿ, ಕೊಡಗು ಜಿಲ್ಲಾಧ್ಯಕ್ಷ ಸುಕುಮಾರ್ ಹಾಗೂ ಮುಂತಾದವರಿದ್ದರು.
ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ರಾಜ್ಯ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿದರು, ಮಾಮಚ್ಚನ್ ನಿರೂಪಿಸಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು :
ಶ್ರೀ ಕರಬಸಪ್ಪ ರೇವಡಿಹಾಳ, (ಧಾರವಾಡ).
ಶ್ರೀ ಎಮ್.ರಮೇಶ ಕಮತಗಿ, (ಬಾಗಲಕೋಟೆ).
ಶ್ರೀಮತಿ ಮರಿಯಮ್ಮ, (ಯಾದಗಿರಿ).
ಶ್ರೀ ಶಾದಕ್, (ಬೀದರ್)
ಶ್ರೀ ಶರಣಬಸಪ್ಪ, (ಕಲ್ಬುರ್ಗಿ).
ಶ್ರೀ ದೇವರಾಜ್ ಯಲಿ, (ರಾಯಚೂರು).
ಶ್ರೀಮತಿ ಕಾವ್ಯಶ್ರೀ ಎಂ. ಕೆ, (ಕೊಡಗು).
ಶ್ರೀ ಸ್ಮಿತೇಶ್ ಎಸ್ ಬಾರ್ಯ, (ದಕ್ಷಿಣ ಕನ್ನಡ).
ಶ್ರೀ ಸುಭಾಸ ಹಾಲಪ್ಪ ಗೊಡ್ಯಾಗೋಳ, (ಬೆಳಗಾವಿ).
ಶ್ರೀ ಚೇತನ್ ಕುಮಾರ್ ಎನ್.ಜಿ, (ಬೆಂಗಳೂರು ಗ್ರಾಮಾಂತರ).
ಶ್ರೀ ರಾಜುಗೌಡ ಶ್ರೀ ತುಂಬಗಿ, (ವಿಜಯಪುರ).
ಶ್ರೀ ಆನಂದ ಗೌಡ ಪಿ. (ರಾಮನಗರ).
ಶ್ರೀ ಸಿ.ಲೋಕೇಶ ಪೂಜಾರಿ, (ತುಮಕೂರು).
ಶ್ರೀ ಅಜಿತ್ ಜೋಸೆಫ್, (ಚಿಕ್ಕಮಗಳೂರು).
ಕುಮಾರಿ ಟಿ.ಸಾಯಿ ವೋಮಾಲಿಕಾ, (ಬಳ್ಳಾರಿ).
ಕುಮಾರಿ ಸುಚಿತ್ರಾ ಬಿ, (ಚಾಮರಾಜ ನಗರ).
ಶ್ರೀ ಚಿರಂಜೀವಿ, (ಮೈಸೂರು).
ಶ್ರೀ ತರುಣ್ ಗೌಡ ಬಿ.ಎನ್, (ಮಂಡ್ಯ).
ಕುಮಾರಿ ಸುಮ ಎನ್, (ಚಿಕ್ಕಬಳ್ಳಾಪುರ).
ಕುಮಾರಿ ಅಪೂರ್ವ ಜಿ, (ವಿಜಯನಗರ).
