ಉತ್ತರಪ್ರಭ ಗದಗ :
ಕಳೆದ 7 ದಿನಗಳಿಂದ ರಾಜ್ಯಾದ್ಯಂತ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತನ ಎಲ್ಲ ವೃಂದದ ನೌಕರರು ವಿವಿಧ ಬೇಡಿಕೆ ಇಡೆರಿಸುವಂತೆ ಅನಿರ್ಧಿಷ್ಟ ಧರಣಿಗೆ ಪಟ್ಟು ಹಿಡಿದು ಕುಳುತಿದ್ದು, ಪಂಚಾಯತನ ಎಲ್ಲ (ಕಾರ್ಯ) ಸೇವೆಗಳು ಸ್ಥಗಿತಗೊಂಡಿದೆ. ಈ ಧರಣಿ ಗ್ರಾಮಸ್ಥರ ಪರದಾಟಕ್ಕೆ ಕಾರಣವಾಗಿದೆ.
ಹೀಗೆ ಕಳೆದ ವಾರ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ರಾಜ್ಯಾದ 6024 ಪಂಚಾಯತ ಅಧಿಕಾರಿಗಳು, ನೌಕರರು ಸೇರಿ ಅವರ ವಿವಿಧ ಬೇಡಿಕೆ ಈಡೆರಿಕೆಗಾಗಿ ಹೋರಾಟ ನಡೆಸಲಾಗಿತ್ತು, ಆದರು ಕೂಡಾ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ನೌಕರರ ಬೇಡಿಕೆಗೆ ಸ್ಪಂದಿಸದಿರುವ ಕಾರಣ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಸೋಮವಾರದಿಂದ ನಡೆದ ಧರಣಿ ಇಂದಿನವರೆಗೂ ಮುಂದುವರಿಯುತ್ತಿದೆ, ಹೀಗೆ ಗದಗ ಜಿಲ್ಲೆಯ ಜಿಲ್ಲಾಡಳಿತ ಕಛೇರಿ ಎದುರು ಜಿಲ್ಲೆಯ 122 ಪಂಚಾಯತನ ಅಧಿಕಾರಿ ವ’ ನೌಕರರು ಹಾಗೂ ಇವರೊಂದಿಗೆ ಗ್ರಾ.ಪಂ ಚುನಾಯಿತ ಸದಸ್ಯರುಗಳು ಸೇರಿ ಧರಣಿ ಮುಂದುವರೆಯುತ್ತಿದೆ.
ಗ್ರಾ.ಪಂ ಸೇವೆಗಳಿಲ್ಲದೆ ಸಾರ್ವಜನಿಕರ ಪರದಾಟ..!
ಪಂಚಾಯತ್ ಪಿಡಿಒ ಸೇರಿದಂತೆ ಎಲ್ಲ ಸಿಬಂದಿ ಧರಣಿಯಲ್ಲಿ ಭಾಗವಹಿಸಿರುವ ಹಿನ್ನೆಲೆಯಲ್ಲಿ ಅ. 4ರಿಂದ ಗ್ರಾ.ಪಂ.ಗೆ ಸಂಬoಧಿಸಿದ ಎಲ್ಲ (22) ಆನ್‌ಲೈನ್ ಸೇವೆಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಗ್ರಾ.ಪಂ'ಗೆ ಅಲೆದು ಅಲೆದು ಪರದಾಡುವಂತಾಗಿದೆ.
ಕುಡಿಯುವ ನೀರು, ಬೀದಿ ದೀಪ, ಚರಂಡಿ ಈ ಮೂಲ ಸೌಲಭ್ಯಗಳಿಗೆ ಕೊರತೆಯಾಗದಂತೆ ನೈರ್ಮಲ್ಯಕ್ಕೆ ಸಂಬAಧಿಸಿದ ಕೆಲಸಗಳು ಮಾತ್ರ ನಡೆಯುತ್ತಿದ್ದು, ಉಳಿದ ವ್ಯವಸ್ಥೆಗಳಾದ ಇ-ಸ್ವತ್ತು, ಜನನ-ಮರಣ ಪ್ರಮಾಣಪತ್ರ, ರವಾಸಿ, ಸೌಚಾಲಯ, ಯೋಜನೆಗಳಾದ ಉದ್ಯೋಗ ಖಾತ್ರಿ ಹಾಗೂ ಇತರೆ ಸೌಲಭ್ಯಗಳು ಸ್ಥಗಿತಗೊಂಡಿವೆ. ಇಂದು ಅ. 10ರಂದು ಸಚಿವ ಪ್ರಿಯಾಂಕ್ ಖರ್ಗೆ ಮಾತುಕತೆಗೆ ರಾಜ್ಯದ ಒಕ್ಕೂಟದ ರಾಜ್ಯಾಧ್ಯಕ್ಷರೊಂದಿಗೆ ಸಭೆ ಸಡೆಸೂತ್ತೆವೆ ಎನ್ನಲಾಗುತ್ತಿದೆ ಎಂದು ಧರಣಿ ನಿರತರು ತಿಳಿಸಿದ್ದಾರೆ.
ಹೋರಾಟ ನಿರತ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ :
ಬುಧವಾರ ಗದಗ ಜಿಲ್ಲಾಡಳಿತದ ಮುಂದೆ ಹೋರಾಟ ನೀರತ ಸ್ಥಳಕ್ಕೆ ಬೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ 'ಪಿಡಿಒ'ಗಳಿಗೆ ನೈತಿಕ ಸ್ಥೈರ್ಯ ತುಂಬುವ ಮೂಲಕ, ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಇಲ್ಲಿಗೆ ಬಂದಿಲ್ಲ, ನಾನು ಶಾಸಕನಾಗಿ ಬಂದ್ದೇನೆ, ನಿಮ್ಮ ಧ್ವನಿಯಾಗಲು ಬಂದಿದ್ದೇನೆ, ರಾಜ್ಯ ಸರ್ಕಾರದ ದುರಃಂಕಾರದ ವರ್ತನೆ ಯಾರು ಸಹಿಸುವದಿಲ್ಲ, ಬೆಂಗಳೂರಿನಲ್ಲಿ ಯಾವುದೇ ಸಚಿವರು ಬಂದು ಮನವಿ ಸ್ವೀಕಾರ ಮಾಡಿಲ್ಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕಾ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಾಪ ನಿಮ್ಮ ಇಲಾಖೆ ಸಚಿವರಿಗೆ ಬೇರೆ ಬೇರೆ ಇಲಾಖೆಯಲ್ಲಿ ಮೂಗು ತೋರಿಸಲು ಆಗುತ್ತೇ, ಇಡೀ ಜಗತ್ತಿನ ರಾಜಕಾರಣ ಬಗ್ಗೆ ಮಾತನಾಡುತ್ತಾರೆ, ಅವರ ಇಲಾಖೆಯಲ್ಲಿ ಇಷ್ಟೊಂದು ದೊಡ್ಡ ಸಮಸ್ಯೆ ಇದೆ, ಅವರ ಇಲಾಖೆಯ ಸಮಸ್ಯೆಯ ಮಾಹಿತಿ ಪಡೆದು ಬಗೆ ಹರಿಸುವ ಸೌಜನ್ಯ ತೊರಿಸಿಲ್ಲ ಎಂದು ಕಿಡಿಕಾರಿದರು. ರಾಜ್ಯ ಸರ್ಕಾರ ಕೂಡಲೇ ಎಚ್ಚತ್ತುಕೊಂಡು ಸಮಸ್ಯೆ ಬಗೆ ಹರಿಸಬೇಕು ಎಂದು ಬಿ.ವೈ ವಿಜಯೇಂದ್ರ ಆಗ್ರಹಿಸಿದರು.
ಈ ವೇಳೆ ಶಾಸಕ ಸಿ.ಸಿ ಪಾಟೀಲ, ವಿಧಾನಪರಿಷತ್ ಸದಸ್ಯ ಎಸ್.ವಿ ಸಂಕನೂರ, ಗದಗ ಬಿಜಿಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಸೇರಿ ಹಲವರು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಗ್ರಾಮೀಣ ಸೇವೆಗಳನ್ನು ನೀಡುತ್ತ ಜನ ಸೇವೆಯಲ್ಲಿ ತೊಡಗಿರುವ ಪಂಚಾಯತ ನೌಕರರ ಸಮಸ್ಯೆಗಳಿಗೆ ಸರಕಾರ ಕೂಡಲೇ ಸ್ಪಂದಿಸಿ, ನಮ್ಮ ವಿವಿಧ ಬೇಡಿಕೆ ಇಡೆರಿಸುವಂತೆ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಬೇಡಿಕೆ ಈಡೆರುವವರೆಗೂ ಈ ನಮ್ಮ ಹೋರಾಟ ನೀಲ್ಲಿಸುವ ಮಾತೆ ಇಲ್ಲಾ. - ಕುಮಾರ ಪೂಜಾರ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ, ಗದಗ.
ಧರಣಿ ನೀರತರ ಬೇಡಿಕೆಗಳು :
ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ‘ಬಿ’ ದರ್ಜೆಗೆ ಉನ್ನತೀಕರಿಸುವುದು, ಪ್ರತಿ ಗ್ರಾಮ ಪಂಚಾಯತಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಸೃಷ್ಟಿ, ಚುನಾಯಿತ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ರಾಜ್ಯ ಶಿಷ್ಟಾಚಾರದ ವ್ಯಾಪ್ತಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ನೌಕರರ ಎಲ್ಲ ವೃಂದಗಳ ಹಾಗೂ ಗ್ರಾಮ ಪಂಚಾಯತ ಸದಸ್ಯರ ಮಹಾ ಒಕ್ಕೂಟ ಜಿಲ್ಲಾಡಳಿತದ ಮುಂದೆ ಆರಂಭಿಸಿದ ಅನಿರ್ಧಿಷ್ಟಾವಧಿ ಧರಣಿ ಬೇಡಿಕೆ ಈಡೆರುವವರೆಗೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಪಂಚಾಯತ ನೌಕರರು ಧರಣಿ ನಿರತರಾಗಿದ್ದಾರೆ.
ಏಳು ವರ್ಷ ಪೂರೈಸಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಬೇರೆ ತಾಲ್ಲೂಕಿಗೆ ವರ್ಗಾಯಿಸುವುದನ್ನು ಕೈ ಬಿಡಬೇಕು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಗಳಲ್ಲಿ ಖಾಲಿಯಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಗ್ರಾಮ ಪಂಚಾಯತಗಳಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಪರಿಗಣಿಸಬೇಕು.
ಗ್ರೇಡ್ 1 ಕಾರ್ಯದರ್ಶಿಗಳಿಂದ ಪಂಚಾಯತ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಬಡ್ತಿ ಕೋಟಾವನ್ನು ಶೇ.60ಕ್ಕೆ ಹೆಚ್ಚಿಸಬೇಕು. ಗ್ರೇಡ್ 2 ಕಾರ್ಯದರ್ಶಿಗಳಿಂದ ಗ್ರೇಡ್-1 ಕಾರ್ಯದರ್ಶಿ ಹುದ್ದೆಗೆ ಬಡ್ತಿ ಕೋಟಾವನ್ನು ಶೇ. 80ಕ್ಕೆ ಹೆಚ್ಚಿಸಬೇಕು.
ಗ್ರಾಮ ಪಂಚಾಯತ ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸುವುದು ಹಾಗೂ ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ, ಆಪರೇಟರ್‌ಗಳಿಗೆ ಗ್ರೇಡ್-2 ಕಾರ್ಯದರ್ಶಿಗಳ ಸಮಾನ ವೇತನವನ್ನು ನಿಗದಿಪಡಿಸುವುದು. ಗ್ರಾಮ ಪಂಚಾಯತ ಚುನಾಯಿತ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳಿಗೆ ಆರೋಗ್ಯ ವಿಮೆ, ಉಚಿತ ಬಸ್‌ಪಾಸ್ ಸೌಲಭ್ಯ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಕುಮಾರ ಪೂಜಾರ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ, ಸೋಮರಡ್ಡಿ ನಡವೂರು ಅಧ್ಯಕ್ಷೃರು ಗ್ರಾ.ಪಂ ಸದಸ್ಯರ ಒಕ್ಕೂಟ ಗದಗ, ಅಶ್ವಿನಿ ಕುರಡಗಿ, ಜ್ಯೋತಿ ಗೂಡಗೂರ, ಶೀವಲಿಲಾ ಗೂಳಪ್ಪನವರ, ಗೋವಿಂದರಡ್ಡಿ ಕಿಲಬನವರ, ಶಿವಕುಮಾರ ವಾಲಿ, ಬೂಮಕ್ಕನವರ, ಸವಿತಾ ಸೋಮಣ್ಣವರ, ಎಚ್.ಎಸ್. ಚಟ್ರಿ, ಮಾಲತೇಶ ಮೇವುಂಡಿ, ರಿಯಾಜ್ ಖತೀಬ, ಪ್ರದೀಪ ಆಲೂರ, ಮಂಜುಳಾ ಪಾಟೀಲ, ಮಂಜುಳಾ ಹೊಸಮನಿ, ಸಂತೋಷ ಹೂಗಾರ, ಶರಣಪ್ಪ ನರೇಗಲ್, ಅನೀಲ ಬೇವಿನಮರದ, ಕೊಟ್ರೇಶ, ಬಸವರಾಜ ಜಕ್ಕಮ್ಮನವರ, ಸಿ.ಬಿ. ಜಾನೋಪಂತರ, ಕವಿತಾ ಅಣ್ಣಿಗೇರಿ, ಶಿವಲೀಲಾ ಗೂಳಪ್ಪನವರ, ಜೋಸ್ನಾ, ಮಹೇಶ ಅಲ್ಲಪೂರ, ಅನೀಲಗೌಡ, ಸಂತೋಷ ಪಾಟೀಲ, ಕೆ.ಎಸ್. ಪೂಜಾರ, ಕುಬೇರಪ್ಪ ಬೆಂತೂರ, ಮಲ್ಲಿಕಾರ್ಜುನ ದೂಳಪ್ಪನವರ, ಬಸವರಾಜ ಅರ್ಕಸಾಲಿ, ಶಂಕ್ರಪ್ಪ ಗೋಣೆಪ್ಪನವರ, ರಾಜು ಗಾರ್ಗಿ, ಪ್ರದೀಪ ಕದಂ ಸೇರಿದಂತೆ ಎಲ್ಲ ವೃಂದದ ನೌಕರರು ಸಿಬ್ಬಂದಿ ವರ್ಗದವರು ಧರಣಿಯಲ್ಲಿ ಭಾಗವಹಿಸಿದ್ದರು.
