ಕೊಡಿಕೊಪ್ಪ ಗ್ರಾಮದಲ್ಲಿ ಹೊತ್ತಿ ಉರಿದ ಹೊಟ್ಟಿನ ಬಣವೆ…!

ಉತ್ತರಪ್ರಭ

ನರೆಗಲ್ಲ: ಸಮೀಪದ ಮಜರೆ ಗ್ರಾಮವಾದ ಕೊಡಿಕೊಪ್ಪದ ಪ್ರಗತಿಶೀಲ ಶಿಕ್ಷಣ ಸಂಸ್ಥೆಯ ಮುಂಬಾಗದಲ್ಲಿ ಕಡಲೆ ಹೊಟ್ಟು ಹಾಗೂ ಜೋಳದ ಮೇವಿನ ಬಣವೆಗೆ ಶನಿವಾರ ಬೆಂಕಿ ತಗುಲಿದ್ದು ಸುಮಾರು 9 ಟ್ರಾಕ್ಟರಗಳಷ್ಡು ಹೊಟ್ಡು ಮೇವು ಸುಟ್ಡಿದೆ.

ಸ್ಥಳೀಯ ಹಾಗೂ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ, ವರ್ಷ ಪೂರ್ತಿ ದನ ಕರುಗಳಿಗೆ ಮೇವಿಗಾಗಿ ಸಂಗ್ರಹಿಸಿದ್ದ ಹೊಟ್ಟಿನ ಬಣವೆಗೆ ದುರುಳರ ಬೆಂಕಿ ಹಚ್ಚಿದ್ದಾರೆ ಈ ಹಿಂದೆ ನಮ್ಮ ಜಮೀನಿನಲ್ಲಿ ಗೋಧಿ ಹುಲ್ಲಿಗೂ ಬೆಂಕಿ ಹಾಕಿದ್ದರು, ಈಗ ಮತ್ತೆ ಬಣವೆಗೆ ಬೆಂಕಿ ಹಚ್ಚುವ ಮೂಲಕ ದುಷ್ಕ್ರತ್ಯವೆಸಗಿದ್ದಾರೆ, ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಬಣವೆಗಳ ಮಾಲೀಕರಾದ ಮಂಜಪ್ಪ ಹೊಸಳ್ಳಿ,ಉಮೇಶಪ್ಪ ಹೆಬ್ಬಳ್ಳಿ,ಆಗ್ರಹಿಸಿದರು.

ದನಕರುಗಳಿಗೆ ವರ್ಷಾನು ಗಟ್ಟೆ ಮೆಯಿಸಲು ಎರಡು ಬಣವೆಗಳ ಹೊಟ್ಡುಗಳನ್ನು ಸಂಗ್ರಹಿಸಿ ಹಾಕಿದ್ದೆವು ಆದರೆ ದುರುಳರು ಬೆಂಕಿ ಹಚ್ಚಿ ಸುಟ್ಟಿದ್ದಾರೆ.

-ಮಂಜುನಾಥ ಹೊಸಳ್ಳಿ.

Exit mobile version