ಸೌರ ಚಾಲಿತ ಕೃಷಿ ಪಂಪ್ ಸೆಟ್ ಗೆ ಆನ್ಲೈನ್ ಅಜಿ೯ – ಸವಿತಾ ಮೇಟಿ


ಆಲಮಟ್ಟಿ : ಕೇಂದ್ರ ಸರ್ಕಾರದ ಪಿಎಂ ಕುಸುಮ ಕಂಪೋನೆಟ್ ಬಿ ಯೋಜನೆ ಯಡಿ ಮೊದಲನೆ ಹಂತದಲ್ಲಿ ಜಾಲಮುಕ್ತ ಸೌರ ಚಾಲಿತ ಕೃಷಿ ಪಂಪ್ ಸೆಟ್‌ಗಳನ್ನು ಅಳವಡಿಸುವ ಯೋಜನೆಯನ್ನು ರಾಜ್ಯ ಸಕಾ೯ರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕನಾ೯ಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ( ಕೆ.ಆರ್.ಇ.ಡಿ.ಎಲ್) ಮೂಲಕ ಹಮ್ಮಿಕೊಳ್ಳಲಾಗಿದ್ದು ಆನ್ಲೈನ್ ಅಜಿ೯ ನೋಂದಣಿ ಪ್ರಕ್ರಿಯೆ ಕಳೆದ ಜುಲೈನಿಂದ ಆರಂಭಿಸಲಾಗಿದೆ ಎಂದು ಧಾರವಾಡ ಕೆ.ಆರ್.ಇ.ಡಿ.ಎಲ್. ಎ.ಇ.ಶ್ರೀಮತಿ ಸವಿತಾ ಮೇಟಿ ತಿಳಿದದರು.


ಇಲ್ಲಿನ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂರಕ್ಷಣೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸಕಾ೯ರದ ಸೌಲಭ್ಯಗಳನ್ನು ಪಡೆದುಕೊಂಡು ರೈತರು ತಮ್ಮ ಆಥಿ೯ಕ ಮಟ್ಟ ಸುಧಾರಿಸಿಕೊಳ್ಳಬೇಕು ಎಂದರು.
ರಾಜ್ಯ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗಳ ಸಹಯೋಗದೊಂದಿಗೆ ಆನ್ಲೈನ್ ಅಜಿ೯ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಆನ್ಲೈನ್ ಮೂಲಕವೇ ಅಜಿ೯ ಸಲ್ಲಿಸಬೇಕು. ಒದಗಿಸಬೇಕಾದ ವಿವರಗಳನ್ನು ಕೆ.ಆರ್.ಇ.ಡಿ.ಎಲ್.ಅಧಿಕೃತ ಜಾಲತಾಣ www.kredl.Karnataka.gov.in ನಲ್ಲಿ ಹೆಚ್ಚಿನ ಮಾಹಿತಿಗಳನ್ನು ಪಡೆದು ಆಸಕ್ತರು ಅಜಿ೯ ಸಲ್ಲಿಸಬಹುದೆಂದು ಅವರು ಹೇಳಿದರು.
ಇದಕ್ಕೆ ಪ್ರಮುಖ ಮಾನದಂಡಗಳಿದ್ದು ಗಮನಿಸಬೇಕು. ರೈತರು ಜಮೀನಿನಲ್ಲಿ ಬಾವಿಯನ್ನು ಕೊರೆಸಿರಬೇಕು.ಹೊಸ ಕೃಷಿ ಪಂಪ್ ಸೆಟ್ ಗಳಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.‌ ಹಾಲಿ ವಿದ್ಯುತ್ ಸಂಪರ್ಕ ಹೊಂದಿರುವ ಪಂಪ್ ಸೆಟ್ ಗಳು ಅರ್ಹವಿರುವುದಿಲ್ಲ, ಅಜಿ೯ ಸಲ್ಲಿಸುವರು ಒಂದು ಸೌರ ಪಂಪ್ ಸೆಟ್ ಗೆ ಮಾತ್ರ ಅಜಿ೯ ಹಾಕಬೇಕು. ಈಗಾಗಲೇ ಇತರ ಅನುದಾನಿತ ಸಕಾ೯ರಿ ಪ್ರಾಯೋಜಿತ ಯೋಜನೆಗಳಡಿ ಸೌರ ಪಂಪ್ ಸೆಟ್ ಪಡೆದಿದ್ದರೆ ಅಂತಹ ಅಜಿ೯ದಾರರು ಅರ್ಹರಿರುವುದಿಲ್ಲ. ವಿದ್ಯುತ್ ಸಂಪರ್ಕ ಇಲ್ಲದ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಸೌರ ಚಾಲಿತ ಕೃಷಿ ಪಂಪ್ ಸೆಟ್ ಗಳನ್ನು ಅಳವಡಿಸಲು ಆದ್ಯತೆ ನೀಡಲಾಗುತ್ತಿದೆ. ಎಲ್ಲ ವರ್ಗದ ಅಜಿ೯ಗಳಲ್ಲಿ ವಿಶೇಷ ತೇತನರಿಗೆ ಶೇ 5 ರಷ್ಟು ಮೀಸಲಾತಿ ಒದಗಿಸಲಾಗಿದೆ. ಸಾಮಾನ್ಯ ಹಾಗು ಪ.ಜಾ,ಪ.ಪಂ ವರ್ಗದಲ್ಲಿ ಸೂಚಿಸಲಾಗಿರುವ ವಂತಿಗೆ ಮೊತ್ತವನ್ನು ಆಯಾ ವಿಶೇಷ ಚೇತನ ವರ್ಗದವರು ಅವರ ವಂತಿಗೆ ಪಾವತಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ 8095132100 ಗೆ ಸಂಪಕಿ೯ಸಬಹುದು ಎಂದು ಅವರು ತಿಳಿಸಿದರು.
ಈ ಯೋಜನೆಯ ಹೆಸರಿನಲ್ಲಿ ನಕಲಿ ಜಾಲತಾಣಗಳು ರೈತರನ್ನು ವಂಚಿಸುತ್ತಿದ್ದು ಮೋಸ ಹೋಗದಿರಲು ಎಚ್ಚರಿಕೆ ವಹಿಸಬೇಕು ಎಂದು ಸವಿತಾ ಮೇಟಿ ರೈತರಲ್ಲಿ ಮನವಿ ಮಾಡಿಕೊಂಡರು.

Exit mobile version