ಗದಗ: ದೇಶದಲ್ಲಿ ಇಂಧನ ಬೆಲೆ, ವಿದ್ಯುತ್ ಬೆಲೆ ಏರಿಕೆಯನ್ನು ಖಂಡಿಸಿ, ಶೀಘ್ರವಾಗಿ ಬೆಲೆ ಏರಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ) ಬಣದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿ, ಇಡೀ ದೇಶವೇ ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿ ಹೋಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕಳೆದ 2 ವರ್ಷಗಳಿಂದ 40ಕ್ಕೂ ಹೆಚ್ಚು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 100 ರೂ. ಕ್ಕೂ ಅಧಿಕ ಬೆಲೆಯಲ್ಲಿ ಏರಿಕೆಯಾಗಿತ್ತಿದೆ. ಪರಿಣಾಮ ಜನಸಾಮಾನ್ಯರು, ರೈತರು ತತ್ತರಿಸುವಂತಾಗಿದೆ. ದಿನಸಿ ವಸ್ತುಗಳ ಬೆಲೆ ಪ್ರತಿದಿನ ಏರುತ್ತಲೇ ಇವೆ ಎಂದು ಆಕ್ರೋಶ ಹೊರಹಾಕಿದರು.
ಗ್ರಾಪಂ ಸದಸ್ಯ ಮಂಜುನಾಥ ಪರ್ವತಗೌಡ್ರ ಮಾತನಾಡಿ, ಲಾಕ್‌ಡೌನ್‌ನಿಂದ ಸಿಲುಕಿ ಅನೇಕ ಕುಟುಂಬಗಳು ಸಂಕಷ್ಟದಲ್ಲಿ ಕಾಲ ಕಳೆಯುತ್ತಿವೆ. ಅಗತ್ಯ ವಸ್ತುಗಳಾದ ಗ್ಯಾಸ್ ಸಿಲೆಂಡರ್, ಒಳ್ಳೆ ಎಣ್ಣಿ ಜನಸಾಮಾನ್ಯರ ಕೈಗೆಟುಕದಂತಾಗಿದೆ. ವಿದ್ಯುತ್ ಬಿಲ್ ತುಂಬಲಾಗದAತಹ ದುಸ್ಥಿತಿಯಲ್ಲಿ ರಾಜ್ಯದ ಜನರಲ್ಲಿ ಇದೆ. ರಾಜ್ಯದ ಬಿಜೆಪಿ ಸರಕಾರ ಪ್ರತಿ ಯೂನಿಟ್ ವಿದ್ಯುತ್‌ಗೆ 30 ಪೈಸೆಯಂತೆ ದರ ಏರಿಸಿ ಗಾಯದ ಮೇಲೆ ಬರೆ ಎಳೆದಿದೆ. ಕೂಡಲೇ ಕೇಂದ್ರ, ರಾಜ್ಯ ಸರಕಾರಗಳು ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಮುಂಗಾರು ಕೃಷಿ ಚಟುವಟಿಕೆ ಪ್ರಾರಂಭವಾಗಿದೆ. ರೈತ ಸಮುದಾಯ ಟ್ಯಾಕ್ಟರ್‌ಗೆ ಡೀಸೆಲ್ ಹಾಕಲು ಹಣವಿಲ್ಲದ ಪರಿಸ್ಥತಿ ಇದೆ. ಪ್ರತಿ ರೈತ ಕುಟುಂಬಗಳಿಗೆ, ಕಾರ್ಮಿಕ ಬಂಧುಗಳಿಗೆ, ಆಟೋ ಚಾಲಕರಿಗೆ ಹಾಗೂ ಕ್ಷೌರಿಕರಿಗೆ, ಬಡಿಗ ಸಮುದಾಯಕ್ಕೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಬೀದಿ ಬದಿ ವ್ಯಾಪಾರಸ್ಥರಿಗೆ, ಹಮಾಲರಿಗೆ ಸಹಾಯಧನ 5 ಸಾವಿರದಂತೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ದಾವಲ್ ಮುಳಗುಂದ, ಬಸವರಾಜ ಮುಳ್ಳಾಳ, ಶ್ರವಣ ಅಗಸಿಮನಿ, ಸುರೇಶ ಮುಳಗುಂದ, ವೀರನಗೌಡ ಮರಿಗೌಡ್ರ, ಯಲ್ಲಪ್ಪ ದೊಡಮನಿ, ಹನುಮೇಶ ಹುಚ್ಚನ್ನವರ, ಶ್ರೀಕಾಂತ ಹುಗ್ಗಿ, ನಿಂಗರಾಜ ಹುಯಿಲಗೋಳ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.