ನಿಡಗುಂದಿ : ಕನಕ ಜಯಂತಿ- ಭವ್ಯ ಮೆರವಣಿಗೆ

ಉತ್ತರಪ್ರಭ
ನಿಡಗುಂದಿ:
ನಿಡಗುಂದಿ ಪಟ್ಟಣದಲ್ಲಿ ಹಾಲುಮತ ಸಮಾಜ ವತಿಯಿಂದ ಶುಕ್ರವಾರ ಸಂತ ಶ್ರೇಷ್ಠ ಕನಕದಾಸರ 535 ನೇ ಜಯಂತಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕನಕನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅಲಂಕೃತವಾಗಿ ಸಿಂಗರಿಸಲ್ಪಟ್ಟ ಟ್ರಾಕ್ಟರ್ ನಲ್ಲಿ ಕನಕದಾಸರ ಭಾವಚಿತ್ರಯಿರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಂಗಮೇಶ ಬಳಿಗಾರ, ಕನಕರ ಭಕ್ತಿ, ವ್ಯಕ್ತಿತ್ವ ನಮಗೆಲ್ಲ ಸ್ಪೂತಿ೯. ಸಂತ ಶ್ರೇಷ್ಠ ಕನಕದಾಸ ಮನುಕುಲದ ಮಹಾನ ಸಂತ.ಅವರ ಕೀರ್ತನೆಗಳು, ಸುಳಾದಿಗಳು, ಉಗಭೋಗಗಳು ಕರುನಾಡಿನ ಸಾಹಿತ್ಯ ರಂಗವನ್ನು ಉನ್ಮಾದಕ್ಕೆ ಕೊಂಡೊಯ್ದು ಶ್ರೀಮಂತಗೊಳಿಸಿವೆ. ಅವರ ಜೀವನ ಚರಿತ್ರೆ ಮೌಲ್ಯಭರಿತವಾಗಿದೆ ಎಂದರು.
ಪಪಂ ಸದಸ್ಯ ಶಿವಾನಂದ ಮುಚ್ಚಂಡಿ ಮಾತನಾಡಿ, ಸಮಾಜದಲ್ಲಿ ಬೇರೂರಿರುವ ತಾರತಮ್ಯವನ್ನು ಧಿಕ್ಕರಿಸಿದ ಸಂತ ಶ್ರೇಷ್ಠ ಕನಕದಾಸರರು ಕವಿತ್ವದ ಮೇರು ಜೀವ. ಜಗದಲ್ಲಿ ದಾಸ ಸಾಹಿತ್ಯ ಬೇರುಬಿಟ್ಟುದೆ ಎಂದರು. ಶಿಕ್ಷಕರ ಸಂಘಟನೆ ಮುಖಂಡ ಬಿ.ಟಿ.ಗೌಡರ ಮಾತನಾಡಿ, ಕನಕದಾಸರರು ಅನೇಕ ಶ್ರೇಷ್ಠ ಗ್ರಂಥಗಳನ್ನು ರಚಿಸಿದ್ದಾರೆ. ಸಾಹಿತ್ಯ ಭಂಡಾರ, ತತ್ವ ಸಿದ್ದಾಂತಗಳೆಲ್ಲ ಅವಣಿ೯ಯಾಗಿವೆ. ದಾಸರ ಪದಗಳ ಪಯಣದ ಸಂಕಲನಗಳು ಮನುಕುಲಕ್ಕೆ ಮಾಮಿ೯ಕವಾಗಿವೆ. ಆದರ್ಶಗಳ ಗುಚ್ಚಾಗಿವೆ. ಕುಲ ಕುಲವೆಂದು ಹೊಡೆದಾಡದಿರಿ ಎಂದು ಕುಲದ ದಿಟ್ಟತನವೇ ಪ್ರಶ್ನಿಸಿ ಅದರ ಸಾರವನ್ನು ನಿಭೀ೯ತವಾಗಿ ಸಮಾಜದೆದರು ತೆರೆದಿಟ್ಟದ್ದಾರೆ. ತಿಮ್ಮಪ್ಪನಾಗಿದ್ದ ಈ ವ್ಯಕ್ತಿ ಮಹಾನ ಶರಣ, ಹರಿಭಕ್ತಿಸಾರ ಕನಕದಾಸರಾಗಿ ಪರಿವರ್ತನೆಗೊಂಡಿದ್ದು ವಿಸ್ಮಯ ಎಂದರು.
ಮುತ್ತಪ್ಪ ಹುಗ್ಗಿ, ಚಂದ್ರಪ್ಪ ದಳವಾಯಿ, ಗುಂಡಪ್ಪ ಕುರಜೋಗಿ,ಪರಶುರಾಮ ಕಾರಿ, ಶಿದ್ರಾಮಪ್ಪ ಮಾಗಿ, ಸಿದ್ದಯ್ಯ ಒಡೆಯರ ಗುರುಗಳು,ಬಸಯ್ಯ ಸಾಲಿಮಠ, ರಮೇಶ ಮಾಗಿ, ಪ್ರಭು ಕೊಳಮಲಿ,ನಿಂಗಪ್ಪ ಹುಗ್ಗಿ, ಲಕ್ಷ್ಮಣ ಸುಳಿಬಾವಿ, ಯಲಗುರದಪ್ಪ ಜಟ್ಟಗಿ, ನಾರಾಯಣ ಹುಗ್ಗಿ, ಬಸಪ್ಪ ಹುಗ್ಗಿ, ಭೀರಪ್ಪ ಇಂಜಗನೆರಿ,ರವಿ ಕಾಳಗಿ, ರಾಮಚಂದ್ರ ನಾಗರಾಳ ಇತರರಿದ್ದರು.

Exit mobile version