283ನೇ ಸಂತ ಸೇವಾಲಾಲ್ ಜಯಂತಿ ರದ್ದು

ದಾವಣಗೇರಿ:ಮುಂದಿನ ತಿಂಗಳು ನೆಡೆಯಬೇಕಿದ್ದ 283ನೇ ಸಂತ ಸೇವಾಲಾಲ್ ಜಯಂತೋತ್ಸವ ಧಾರ್ಮಿಕ ಕಾರ್ಯಕ್ರಮವನ್ನು ಕೊರೋನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.

ಇಂದು ದಾವಣಗೇರಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಪಿ ರಾಜೀವ್, ಮಾಜಿ ಸಚಿವರು ಮಹಾ ಮಠ ರಾಜ್ಯ ಸಮಿತಿ ಅಧ್ಯಕ್ಷರಾದ ಶ್ರೀ ರುದ್ರಪ್ಪ ಲಮಾಣಿ, ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಂ ಪಿ ರೇಣುಕಾ ಚಾರ್ಯ, ಮಾಜಿ ಶಾಸಕರಾದ ಶ್ರೀ ಬಸವರಾಜ್ ನಾಯ್ಕ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಶ್ರೀ ಮಾರುತಿ ನಾಯ್ಕ ಹಾಗೂ ಮಾನ್ಯ ಜಿಲ್ಲಾಧಿಕಾರಿ, ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಕೆಲವು ಸಮಾಜದ ಮುಖಂಡರುಗಳ ಉಪಸ್ಥಿತಿಯಲ್ಲಿ ನೆಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಪ್ರತಿ ವರ್ಷ ಸೇವಾಲಾಲ ಜಯಂತಿಯನ್ನು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಗೊಂಡನಕೊಪ್ಪದಲ್ಲಿ ಲಕ್ಷಾಂತರ ಭಕ್ತರು ಸೇರಿ ಆಚರಿಸಲಾಗುತ್ತದೆ. ಬಂಜಾರ ಜನಾಂಗದ ಆರಾಧ್ಯದೈವ ಶ್ರೀ ಸಂತ ಸೇವಾಲಾಲ ಜಯಂತಿಯನ್ನು ಬಂಜಾರ ಜನಾಂಗವಲ್ಲದೆ ಎಲ್ಲ ಜನಾಂಗದವರು ಸೇರಿ ಆಚರಣೆ ಮಾಡುತ್ತಾರೆ.

ಪ್ರತಿ ವರ್ಷ ದೇಶ , ವಿದೇಶದಿಂದ ಭಕ್ತರು ಜಯಂತಿಯಂದು ಬಂದು ಸೇವಾಲಾಲರ ಆರ್ಶಿವಾದ ಪಡೆದು ಪುನಿತರಾಗುತ್ತಾರೆ. ಎಲ್ಲ ತಾಂಡಾಗಳ ಜನರು ಭಕ್ತಿ ಭಾವದಿಂದ ಜಯಂತಿಯನ್ನು ಆಚರಣೆ ಮಾಡುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಮಾಲಾಧಾರಿಗಳು ತಿಂಗಗಳುಗಂಟಲೇ ವೃತವನ್ನು ಮಾಡಿ ಸೂರಗೊಂಡನ ಕೊಪ್ಪಕ್ಕೆ ಬಂದು ಮಾಲೆಯನ್ನು ತಗೆದು ಸೇವಾಲಾಲ ಕೃಪಾರ್ಶಿವಾದ ಪಡೆದು ಕೊಳ್ಳುತ್ತಾರೆ. ಆದರೆ ಈ ಬಾರಿ ಸರ್ಕಾರದ ನಿರ್ಧಾರದಿಂದ ಭಕ್ತರಿಗಂತೂ ನಿರಾಶೆಯಾಗಿದೆ. ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಇಂತಹ ನಿರ್ಧಾರ ತೆಗೆದುಕೊಳ್ಳಲೇ ಬೇಕು.

ಭಕ್ತರ ಆಕ್ರೋಶ: ಜಯಂತಿಯನ್ನು ರದ್ದು ಪಡಿಸಿದ್ದನ್ನು ಕೆಲವು ಭಕ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕಪಡಿಸುತ್ತಿದ್ದಾರೆ. ಸರ್ಕಾರ ಇಷ್ಟು ಬೇಗ ಇಂತಹ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಇನ್ನೂ ಒಂದು ತಿಂಗಳ ಕಾಲವಿದೆ ಕೊರೊನಾ ಅಲೇ ಕಡಿಮೆಯಾದರೆ ಜಯಂತಿಯನ್ನು ಆಚರಣೆ ಮಾಡಬೇಕು ಎನ್ನುವುದು ಬಹುತೇಕ ಭಕ್ತರ ಒತ್ತಾಯವಾಗಿದೆ.

ಜಯಂತಿಯನ್ನು ರದ್ದು ಪಡಿಸಲಾಗಿದೆ . ಸರ್ಕಾರದಿಂದ ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ.ಮಾಲಾಧಾರಿಗಳು ಸೂರಗೊಂಡನಕೊಪ್ಪಕ್ಕೆ ಬರದೆ ತಾಂಡಾದಲ್ಲಿಯೇ ಉಳಿದು ಆಚರಿಸಲು ಮನವಿ. ಎಲ್ಲರೂ ಸರಳ ರೀತಿಯಲ್ಲಿ ಜಯಂತಿಯನ್ನು ಆಚರಿಸಬೇಕು ಜಯಂತಿ ಆಚರಣೆ ಸಮಯದಲ್ಲಿ ಕೊರೊನಾ ನಿಯಮ ಪಾಲಿಸಲು ಮನವಿ

Exit mobile version