ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಆಗ್ರಹಿಸಿ ಮನವಿ.

ಉತ್ತರಪ್ರಭ ಸುದ್ದಿ

ನರಗುಂದ: ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಮತ್ತು ಸಾಮಾನ್ಯ ವ್ಯವಸ್ಥೆಗಳು ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ವೈದ್ಯರುಗಳು ಇಲ್ಲದಿರುವುದು ಕಂಡುಬರುತ್ತಿದೆ ಎಂದು ಡಾ.ಸಂಗಮೇಶ ಕೊಳ್ಳಿಯವರ ಆರೋಪಿಸಿದರು.

ಬಾಬಾಸಾಹೇಬ ಭಾವೆ ಸರಕಾರಿ ತಾಲೂಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳಿಂದ ಸರಿಯಾದ ಚಿಕಿತ್ಸೆಯ ವ್ಯವಸ್ಥೆ ಇಲ್ಲದಿರುವ ಕುರಿತು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಾ.ಸಂಗಮೇಶ ಕೊಳ್ಳಿಯವರ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಡಾ.ಸಂಗಮೇಶ ಕೊಳ್ಳಿಯವರ ಮಾತನಾಡಿ, ಸರಕಾರಿ ಆಸ್ಪತ್ರೆಯಲ್ಲಿ ಸ್ಪೆಶಲಿಸ್ಟ್ ವೈದ್ಯರಿದ್ದರು ಅವರ್ಯಾರು ನಿಷ್ಠೆಯಿಂದ ತಮ್ಮ ವೃತ್ತಿಯನ್ನು ಮಾಡದಿರುವುದು ರೋಗಿಗಳಿಗೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಿದರು.

ಕೆಲವು ಬಾರಿ ರೋಗಿಗಳಿಗೆ ಮುಟ್ಟುವುದಿರಲಿ ಮುಖವನ್ನು ನೋಡದೇ ಕಾಟಾಚಾರಕ್ಕೆ ಎಂಬಂತೆ ಮಾತ್ರೆಯನ್ನು ಬರೆದು ಕೊಟ್ಟು ಕಳಿಸಿಬಿಡುತ್ತಾರೆ. ಇಸಿಜಿ ಮಾಡಲು ಪ್ರತ್ಯೇಕ ಕೊಠಡಿಯಂತು ಇಲ್ಲವೇ ಇಲ್ಲ. ಮಹಿಳೆಯರಿಗೂ ಸೇರಿದಂತೆ ಎಲ್ಲರಿಗೂ ಜನರಲ್ ಹಾಲ್ ನಲ್ಲಿ ಇಸಿಜಿ ವ್ಯವಸ್ಥೆ ಯಾವಾಗರೊಮ್ಮೆ ಇರುತ್ತದೆ. ಕೆಲವು ಬಾರಿ ಇಲ್ಲವೇ ಇರುವುದಿಲ್ಲ. ಹೀಗೆ ಹಲವಾರು ಅವ್ಯವಸ್ಥೆ ಇಲ್ಲಿ ಕಾಣುತ್ತವೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ರವಿ ಚಿಂತಾಲ, ಬಿ ಡಿ ಪಾಟೀಲ, ಶಿವಾನಂದ ಮೋಹಿತೆ, ಎಂ ಎಂ ಜಾವುರ, ಗುರ್ಲಿಂಗಪ್ಪ ಪಡಿಯವರ, ಬಸವರಾಜ ಪಾಟೀಲ, ಶಿವಾನಂದ ಹಳಕಟ್ಟಿ, ನಿಂಗಪ್ಪ ಹಡಪದ, ರಮೇಶ ಹಡಪದ, ಸುನೀಲ ದೊಡಮನಿ, ಮಂಜುನಾಥ ದೊಡಮನಿ, ಬಾಬು ಅತ್ತಾರ, ಹನಮಂತಗೌಡ ಭರಮಗೌಡ್ರ, ಪ್ರಶಾಂತ ಹೂಗಾರ, ನಿಂಗನಗೌಡ ಪಾಟೀಲ, ಮುತ್ತು ಕಳಸಾಪುರ, ಮುತ್ತು ಕಬಾಡರ, ಸಂಜು ಮಾದರ, ಪ್ರಸಾದ ಮುತ್ತಿನ, ಶಿವನಗೌಡ ಪಾಟೀಲ, ಶಶಿ ಹಂಚಿನಾಳ, ಅಶೋಕ ಹೂಲಿ, ಶರಣು ಹುಣಶಿಕಟ್ಟಿ, ಮಂಜುನಾಥ ಮೂಲಿಮನಿ ಹಾಗೂ ಹಿರಿಯರು ಮತ್ತು ಅನೇಕ ಯುವಕರು ಉಪಸ್ಥಿತರಿದ್ದರು.

Exit mobile version