ಸೂರ್ಯಕಾಂತಿ ಕ್ಷೇತ್ರಕ್ಕೆ ಕೃಷಿ ಅಧಿಕಾರಿಗಳ ಭೇಟಿ ಕೀಟ ರೋಗ ನಿಯಂತ್ರಣಕ್ಕೆ ಸಲಹೆ


ಉತ್ತರಪ್ರಭ ಸುದ್ದಿ
ನಿಡಗುಂದಿ:
ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಕೀಟ ಹಾಗೂ ರೋಗಗಳ ಭಾದೆ ಈ ಭಾಗದಲ್ಲಿ ವ್ಯಾಪಕ ಕಂಡು ಬಂದಿದ್ದು ಈಚೆಗೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ, ಕೃಷಿ ಅಧಿಕಾರಿ ಎನ್.ಟಿ.ಗೌಡರ ತಾಲ್ಲೂಕಿನ ಗೊಳಸಂಗಿ ಹಾಗೂ ಬುದ್ನಿ ಗ್ರಾಮದ ಸೂರ್ಯಕಾಂತಿ ಮತ್ತು ಮಕ್ಕಜೋಳ ಕ್ಷೇತ್ರಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು. ಸೂರ್ಯಕಾಂತಿ ಬೆಳೆಗಳಿಗೆ ಕೋರಿ ಹುಳುವಿನ ಕೀಟ ಭಾದೆ ಹೆಚ್ಚಾಗಿದ್ದು, ಈ ಕೀಟವು ಪತಂಗ ಜಾತಿಗೆ ಸೇರಿದ ಎಲೆಯ ಕೆಳಭಾಗದಲ್ಲಿ ಗುಂಪು ಗುಂಪುಗಳಾಗಿ ಸುಮಾರು 200-300 ಮೊಟ್ಟೆಗಳನ್ನು ಇಡುತ್ತದೆ ನಂತರ ಇದರಿಂದ ಬರುವ ಮರಿ ಹುಳುಗಳು ಸೂರ್ಯಕಾಂತಿಯ ಎಲೆಗಳನ್ನು ಸಂಪೂರ್ಣವಾಗಿ ನಾಶಮಾಡುತ್ತವೆ. ಮರಿಹುಳಗಳು ಎಲೆಯ ಕೆಳಭಾಗದಲ್ಲಿ ವಾಸಿಸುವರಿಂದ ಮೊದಲು ಕೀಟಭಾದೆಗೆ ಒಳಗಾದ ಎಲೆಗಳನ್ನು ಕಿತ್ತುಹಾಕಿ ಮರಿ ಹುಳಗಳನ್ನು ನಾಶಪಡಿಸಬೇಕು, ನಂತರ ಸೈಪರ ಮೃಥಿನ್ ಅಥವಾ ಅಲ್ಲಾ ಮೈನ್ ಹೆಸರಿನ ಯಾವುದಾದರೊಂದು ಕೀಟನಾಶಕವನ್ನು ಲೀಟರ್ ನೀರಿಗೆ 0.5 ಮಿಲಿಯಷ್ಟು ಮಿಶ್ರಣಮಾಡಿ ಎಲೆಯ ಕೆಳಭಾಗ ಒದ್ದೆಯಾಗುವ ಹಾಗೆ ಸಿಂಪಡಿಸುವ ಮೂಲಕ ಕೀಟಬಾಧೆ ನಿಯಂತ್ರಿಸಬಹುದು, ಮತ್ತು ಹೊಲದ ಸುತ್ತಲೂ ಹರಿತಗೆದು 4% ರ ಫೆನವಲರೇಟೆ ಪುಡಿಯನ್ನು ಹರಿಯಲ್ಲಿ ಹಾಕಬೇಕು ಎಂದು ರೈತರಿಗೆ ಸಲಹೆ ನೀಡಿದರು.

Exit mobile version