ಸ್ವರಾಜ್ಯಕ್ಕೆ ಮುಕ್ಕಾಲು ನೂರು: 75ನೆಯ ಸ್ವಾತಂತ್ರ‍್ಯ ಸಂಗ್ರಾಮದ ನಿಮಿತ್ಯ ‘ಕನ್ನಡ ತೇರು’ ಕಾರ್ಯಕ್ರಮ

ಉತ್ತರಪ್ರಭ
ಗದಗ:
ಯುವ ಬ್ರಿಗೆಡ್ ಕರ್ನಾಟಕ ಹಾಗೂ ಗದಗ ತಂಡದ ಸಹಯೋಗದೊಂದಿಗೆ 75ನೆಯ ಸ್ವಾತಂತ್ರ‍್ಯ ಸಂಗ್ರಾಮದ ನಿಮಿತ್ಯ ಸ್ವರಾಜ್ಯಕ್ಕೆ ಮುಕ್ಕಾಲು ನೂರು ಸಂಭ್ರಮಕ್ಕೆ ‘ಕನ್ನಡ ತೇರು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕರ್ನಾಟಕ ರಾಜ್ಯದ ಸ್ವಾತಂತ್ರ‍್ಯ ಹೋರಾಟಗಾರರು ಮತ್ತು ರಾಜ-ಮಹಾರಾಜರು ಹಾಗೂ ಜನಸಾಮಾನ್ಯರು ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ ಸಾಧನೆಗಳ ಕುರಿತು ನಗರದ ಹಲವೆಡೆ ತೆರಿನ ಮುಖಾಂತರ ವೀಡಿಯೊ ಪ್ರದರ್ಶಿಸುವ ಮೂಲಕ ಸಂಭ್ರಮಿಸಿಲಾಯಿತು.


ದಿ. 8/7/2022 ರಂದು ಗದಗ ನಗರದಲ್ಲಿ ಶ್ರೀ ರಾಚೋಟೆಶ್ವರ ದೆವಸ್ತಾನ ದಿಂದ ತೋಂಟದಾರ್ಯ ಮಠದ ವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು. ದಿ. 9/7/2022 ರಂದು ಗದಗ ನಗರದ ಕೆ.ಎಸ್.ಎಸ್ ಕಾಲೇಜ್, ಮದರ ತೆರೆಸಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆಂಡ್ ಸೈನ್ಸ್ ಕಾಲೇಜ್, ಆರ್ಯಭಟ ಕಾಲೇಜ್ ಗದಗ, ಬಸವೇಶ್ವರ ಶಾಲೆ ಗದಗ, ಸರ್ಕಾರಿ ಪ್ರೌಢಶಾಲೆ ಗದಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.


ಕೊನೆಯದಾಗಿ ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗದಲ್ಲಿ, ಭೈರನಹಟ್ಟಿಯ ಶ್ರೀ ಶಾಂತಲಿoಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ‘ಕನ್ನಡ ತೇರು’ ಕಾರ್ಯಕ್ರಮ ನಡೆಸಲಾಯಿತು.


ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ತಂಡದ ಗದಗ ಸಂಚಾಲಕರಾದ ವಿಜಯಕುಮಾರ ಎಸ್ ಎನ್, ಪ್ರಮುಖರಾದ ಸಂಜಯರೆಡ್ಡಿ, ರಾಚಣ್ಣ ಜಕ್ಕಲಿ, ಮಂಜುನಾಥ, ಕಪಿಲ, ರವೀಂದ್ರ, ದರ್ಶನ, ಗಿರೀಶ, ಬಸವರಾಜ, ಪ್ರಕಾಶ ಸೇರಿದಂತೆ ಕಾರ್ಯಕರ್ತರು ಹಾಗೂ ಎಲ್ಲ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Exit mobile version