ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ತಹಶೀಲ್ದಾರ್ ಹಾಗು ಪಿಎಸ್ಐ  ಧನ್ಯತಯ ಸಮರ್ಪಣೆ

ಉತ್ತರಪ್ರಭ

ಸಿಂದಗಿ: ಅಖಿಲ ಭಾರತ ಸಂದೇಶ ವೇದಿಕೆ ಸಿಂದಗಿ ತಾಲೂಕಿನ ಘಟಕದ ವತಿಯಿಂದ ಬೇಸಿಗೆ ಕಾಲದಲ್ಲಿ ಸಿಂದಗಿನಗರದಲ್ಲಿ ಜನರಿಗೆ ಕುಡಿಯುವ ನೀರಿನ  ಸೇವೆಯನ್ನು  ನೀಡಿದ ವೇದಿಕೆ  ಕಾರ್ಯಕರ್ತರಗೆ ಸನ್ಮಾನ ಮಾಡಿ  ಪ್ರೋತ್ಸಾಹಿಸಲಾಯಿತು. ಸಂಘಟನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಂದಗಿ ಪೊಲೀಸ್ ಠಾಣೆ ಪಿಎಸ್ಐ ನಿಂಗಪ್ಪ ಎಚ್ ಪೂಜಾರಿ ಸರ್ ಜನರ ಸೇವೆ ಪುಣ್ಯದ ಕಾರ್ಯ. ಜನರ ಸೇವೆ ಜನಾರ್ಧನ ಸೇವೆ. ಈ ಕಾರ್ಯ ಸಲ್ಲಿಸಿದ್ದು ಅತ್ಯಮೂಲ್ಯವಾದದ್ದು.ಇದೊಂದು ಉತ್ತಮ ಪ್ರತಿಫಲದಾಯಕ ಕೆಲಸ. ವೇದಿಕೆ ನಮ್ಮ ಠಾಣೆಯ ಆವರಣದಲ್ಲಿ ನೀರಿನ ವ್ಯವಸ್ಥೆ ಮಾಡಿತು ಇದರಿಂದ ಅನೇಕರು ಬಾಯಾರಿಕೆ ನಿಗಿಸಿ ಪ್ರಯೋಜನ ಪಡೆದರು ಎಲ್ಲಾ ಸಿಬ್ಬಂದಿ ಪರವಾಗಿ  ನಾನು ಧನ್ಯವಾದಗಳು ಹೇಳುತ್ತೇನೆ  ಮತ್ತು ಮಾನವೀಯತೆಯ ಸೇವೆಯಲ್ಲಿ ನಮ್ಮ ಬೆಂಬಲ ಸದಾ ಇರುತ್ತದೆ ಎಂದು  ಹೇಳಿದರು. ನಂತರ ಸಿಂದಗಿ ತಾಲೂಕಿನ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲಾಯಿತು ಅವರು, ತಮ್ಮ ಕಚೇರಿಯ ಹೊರಗೆ ನೀರಿನ ಅರವಟಿಗೆ ಇಡಲು ಅನುಮತಿ ನೀಡಿದ್ದರು.

ವಿವಿಧ ಗ್ರಾಮಗಳಿಂದ ತಮ್ಮ ಕೆಲಸಗಳಿಗೆ ಬರುವ ಸಾವಿರಾರು ಜನರಿಗೆ ಸೇವೆ ಒದಗಿಸಿಲು ಮತ್ತು  ಬೇಸಿಗೆಯಲ್ಲಿ  ತಾಪಂ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಾಯಾರಿಕೆಆದವರ ಸೇವೆಗೆ ಅವಕಾಶ ನಿಡಿದ್ದರು, ವೇದಿಕೆಯ ಸದಸ್ಯರಿಗೆ.ಪ್ರಶ್ನೆ ಕೇಳುತ್ತಾ ಹೇಳಿದರು “ತಾವು ಹಜ್ಜಿಗೆ ಹೂಗಿ ಬಂದಿರಬಹುದು, ಏಕೆಂದರೆ ಒಬ್ಬ ಸೇವಕ ಹಜ್ಜಿಗೆ ಹೋದಾಗ, ಅವನು ಮಾನವೀಯತೆ ಸೇವೆ ಮನೋಭಾವದಿಂದ ಹಿಂದಿರುಗುತ್ತಾನೆ ಮತ್ತು ಮಾನವರೊಂದಿಗೆ ದಯೆ ಮತ್ತು ಸಹಾನುಭೂತಿಯಿಂದ ವರ್ತಿಸುತ್ತಾನೆ. “ಇಂದು ಅಣ್ಣ ತಮ್ಮಂದಿರ ಜೊತೆ ಜಗಳವಾಡುತ್ತಿದ್ದಾರೆ ಹಿಂದೆ ಎಲ್ಲರೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತಿದ್ದರು ಕುಟುಂಬದವರೆಲ್ಲಾ ಒಂದೇ ಮನೆಯಲ್ಲಿ ವಾಸಿಸುತಿದ್ದರು ಈಗ ಎಲ್ಲವೂ ಬದಲಾಗಿದೆ ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ)  ಬಂದ ನಂತರ ಮಾನವರ ಭಾವನೆಗಳು ಅತೀ ಬೇಗ ಹೆಚ್ಚುತ್ತವೆ ಪರಸ್ಪರ ಸಂಬಂಧ ದೂರವಾಗಿವೆ ಮತ್ತು ದ್ವೇಷಕ್ಕೆ ಕಾರಣ ವಾಗುತ್ತವೆ ಪ್ರತಿ ಮನುಷ್ಯ ತನ್ನ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದಾನೆ. ಇತರರ ಹಿತವನ್ನು ಕಡೆಗಣಿಸುತ್ತಿದ್ದಾನೆ. ಇಂತಹ ಕಾಲದಲ್ಲಿ ಮಾನವೀಯತೆಯ ಸೇವೆ ಮಾಡುವುದೇ ಶ್ರೇಷ್ಠ, ಈಗ ಪ್ರಮಾಯಾಣಿಕವಾಗಿ ಕೇಲಸ ಮಾಡುವುದು. ಪ್ರವಾದಿ ಮಹಮದ್ ಪೈಗಂಬರರು ತಿಳಿಸಿಕೊಟ್ಟರು ಹಾದಿ…  ಯಾವುದೇ ಸೇವೆಯನ್ನು  ಮಾಡಲು ನಾವು ಸಿದ್ಧನಿದ್ದೆವೆ. ಮಾನವೀಯತೆಯ ಸೇವೆಯಲ್ಲಿ ಭಾಗವಹಿಸುವುದು ನಮ್ಮ ಕಾರ್ಯಕರ್ತರಿಗೆ ಸಂತೋಷದ ಸಂಗತಿಯಾಗಲಿದೆ. ಈ ಒಂದು ಸೇವೆಗೆ ಸಮಯ ನೀಡಿದ್ದಕ್ಕಾಗಿ  ನಮ್ಮ ವೇದಿಕೆ ವತಿಯಿಂದ ಮೌಲಾನಾ ದಾವುದ ನದ್ವ ಅವರು ಕೃತಜ್ಞತೆ ಸಲ್ಲಿಸಿದರು ಮೌಲಾನಾ ಕಲೀಮುಲ್ಲಾ  ಹಜರತ್ ಪಟೇಲ್ ಬಿರಾದಾರ  ಖಾರಿ ಅಬುಲ್ ಖೈರ್, ಮೌಲಾನಾ ಇಬ್ರಾಹಿಂ ದೇವರಹಿಪ್ಪರಗಿ, ಮೌಲಾನಾ ಇಬ್ರಾಹಿಂ ನದ್ವಿ ಮತ್ತಿತರರು ಉಪಸ್ಥಿತರಿದ್ದರು.

Exit mobile version