ಆಲಮಟ್ಟಿ ಪದವಿ ಕಾಲೇಜಿಗೆ ಎಲ್.ಐ.ಸಿ.ತಂಡ ಭೇಟಿ


ಗುಲಾಬಚಂದ ಜಾಧವ
ಆಲಮಟ್ಟಿ : ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ಮಂಜಪ್ಪ ಹಡೇ೯ಕರ (ಎಂ.ಎಚ್.ಎಂ.)ಪದವಿ ಮಹಾವಿದ್ಯಾಲಯಕ್ಕೆ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಲೋಕಲ್ ಇನ್ಸ್‌ಪೆಕ್ಷನ್ ಕಮೀಟಿ ( ಎಲ್.ಐ.ಸಿ) ತಂಡ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿತು.


ಎಲ್.ಐ.ಸಿ.ಕಮೀಟಿ ಚೇರಮನ್ ಡಾ.ಆನಂದ ಹೊಸೂರ ನೇತೃತ್ವದ ತಂಡದಲ್ಲಿ ಸದಸ್ಯರಾದ ಪ್ರೋ.ಗುಂಡಣ್ಣ ಕಲಬುರ್ಗಿ, ಫಕ್ಕೀರಪ್ಪ ಸೊಲಗದ ಇದ್ದರು.
ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ರಾಚವಿವಿ ತನ್ನದೇ ಅದ ಮಾನದಂಡಗಳನ್ನು ರಚಿಸಿ ಅವುಗಳ ಅನುಷ್ಠಾನಕ್ಕೆ ಮುಂದಾಗಿದೆ. ಶಿಕ್ಷಣ ನೀತಿ ನೀಡುವ ಗುರಿ ಸಾಧಿಸಲು ಪ್ರಾಮುಖ್ಯತೆ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಎಲ್.ಐ.ಸಿ.ಕಮೀಟಿ ಸದಸ್ಯರು ಆಗಮಿಸಿ ಕಾಲೇಜಿನ ಸ್ಥಿತಿಗತಿ ಕೂಲಂಕುಷವಾಗಿ ಪರಿಶೀಲಿಸಿತು.


ಬಹು ವಿಶಾಲ ವರ್ಗಕೋಣೆಗಳತ್ತ್ ತೆರಳಿ ವ್ಯವಸ್ಥೆಗಳ ಆವಲೋಕನ ನಡೆಸಿತು.ಸೇಮಿನಾರ ಹಾಲ್,ಗ್ರಂಥಾಲಯ,ಪುಸ್ತಕಗಳ ಮಾಹಿತಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿತು. ಹಸಿರು ತೋರಣದಲ್ಲಿ ತಲೆ ಎತ್ತಿರುವ ಕಾಲೇಜು ಭವ್ಯ ಕಟ್ಟಡ,ವಿಸ್ತಾರವಾದ ಆಟದ ಮೈದಾನ ಕಂಡು ಮೆಚ್ಚುಗೆ ಸೂಚಿಸಿತು.


ಇದೇ ಸಂದರ್ಭದಲ್ಲಿ ಬಸವನ ಬಾಗೇವಾಡಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಗದುಗಿನತ್ತ ತೆರಳುತ್ತಿದ್ದ ಸಂಸ್ಥೆಯ ಅಧ್ಯಕ್ಷ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ಆಕಸ್ಮಿಕ ಕಾಲೇಜಿಗೆ ಭೇಟಿಯಿತ್ತರು. ಶ್ರೀಗಳವರನ್ನು ಕಂಡು ಎಲ್.ಐ.ಸಿ.ತಂಡದ ಸದಸ್ಯರು ಸೇರಿದಂತೆ ಶಾಲಾ,ಕಾಲೇಜಿನ ಗುರುಬಳಗ ಕೃಪಾಶೀವಾ೯ದ ಪಡೆದರು. ತೋಂಟದ ಸಿದ್ದರಾಮ ಶ್ರೀ ಸಂಸ್ಥೆ ಪರವಾಗಿ ಎಲ್.ಐ.ಸಿ.ಕಮೀಟಿ ಚೇರಮನ್, ಸದಸ್ಯರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಈ ವೇಳೆ ಬಸವನ ಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಶ್ರೀ, ವಿಜಯಪುರ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಶ್ರೀ, ಎನ್.ಕೆ.ಕುಂಬಾರ, ಸುರೇಶಗೌಡ ಪಾಟೀಲ, ಪ್ರಾಚಾರ್ಯ ಎಚ್.ಎನ್.ಕೆಲೂರ, ಪಿ.ಎ.ಹೇಮಗಿರಿಮಠ,ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ, ಶಿಕ್ಷಕರು,ಉಪನ್ಯಾಸಕರು, ಪ್ರಾಧ್ಯಾಪಕರು,ಗುರುಮಾತೆಯರು ಮೊದಲಾದವರಿದ್ದರು.

Exit mobile version