ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮುರುಡಿ ಗ್ರಾಮಕ್ಕೆ 93.33% ರಷ್ಟು ಫಲಿತಾಂಶ

ಉತ್ತರಪ್ರಭ

ಮುಂಡರಗಿ: ತಾಲ್ಲೂಕಿನ ಮುರುಡಿಯ ಸರಕಾರಿ ಪ್ರೌಢ ಶಾಲೆಯ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಒಟ್ಟು 45 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು. ಅದರಲ್ಲಿ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟು ಶೇಕಡವಾರು ಫಲಿತಾಂಶ 93.33 ಬಂದಿದೆ.

ಪ್ರಥಮ ಸ್ಥಾನ:  ವಿಜಯಕುಮಾರ ಬೂದಿಹಾಳ  ಅವರ 96.64% 
ದ್ವಿತೀಯ ಸ್ಥಾನ: ಶಿವರಾಜ್ ಪೂಜಾರ.96.32%
ತೃತೀಯ ಸ್ಥಾನ: ಹನುಮಂತಗೌಡ ಪಾಟೀಲ 94.08%

ಮುರುಡಿ ಪ್ರೌಢ ಶಾಲೆಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ಶಾಲೆಯ ಗುರುಬಳಗ ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು  ಅಭಿನಂದಿಸಿದ್ದಾರೆ.

Exit mobile version