ಎಂ.ಎಚ್.ಎಂ.ಆಂಗ್ಲ ಮಾದ್ಯಮ ಸ್ನೇಹ ಸಮ್ಮೇಳನ- ಕರುನಾಡು ಗಾಂಧಿ ಉತ್ಸವ-2022 ನಾಳೆ

ಉತ್ತರಪ್ರಭ
ಆಲಮಟ್ಟಿ:ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಎಂ.ಎಚ್.ಎಂ.ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾಷಿ೯ಕ ಸ್ನೇಹ ಸಮ್ಮೇಳನ, ಕರುನಾಡು ಉತ್ಸವ 2022 ಕಾರ್ಯಕ್ರಮ ಇದೇ ಮಾಚ್೯ 22 ರಂದು ಮಂಗಳವಾರ ಸಂಜೆ 4 ಗಂಟೆಗೆ ಶಾಲಾ ಆವರಣದಲ್ಲಿನ ಲಿಂ, ತೋಂಟದ ಡಾ. ಸಿದ್ದಲಿಂಗ ಶ್ರೀಗಳ ಸಭಾ ವೇದಿಕೆಯಲ್ಲಿ ಜರುಗಲಿದೆ.

ಜಗತ್
ಲಿಂಗೈಕ್ಯ ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳವರ ಕೃಪಾಶೀವಾ೯ದ ಹಾಗು ತೋಂಟದ ಮಹಾಸ್ವಾಮೀಜಿಗಳವರ ಸ್ಪೂರ್ತಿ ಮತ್ತು ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿ ಶ್ರೀ ಶಿವಾನಂದ ಪಟ್ಟಣಶೆಟ್ಚರ ಅವರ ಸಮಯೋಚಿತವಾಗಿ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ವಿಶೇಷ ಸಮಾರಂಭದ ಅಧ್ಯಕ್ಷತೆಯನ್ನು ರಾವಬಹದ್ದೂರ ಡಾ. ಫ.ಗು.ಹಳಕಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಬಿಜೆಎನ್ ಎಲ್ ಉಪ ಮುಖ್ಯ ಅಭಿಯಂತರ ಎಂ.ಎನ್.ಪದ್ಮಜಾ, ಮಂಜಪ್ಪ ಹಡೇ೯ಕರ ಸ್ಮಾರಕ ಭವನ ಕಾರ್ಯದರ್ಶಿ ವ್ಹಿ.ಎಂ.ಪಟ್ಟಣಶೆಟ್ಚಿ, ಕನಾ೯ಟಕ ರಾಜ್ಯ ಸರಕಾರಿ ನೌಕರರ ಸಂಘ ಆಲಮಟ್ಟಿ ಶಾಖೆ ಅಧ್ಯಕ್ಷ ಎಸ್.ಬಿ.ದಳವಾಯಿ, ಎಂ.ಎಚ್.ಎಂ ಪ.ಪೂ ಕಾಲೇಜಿನ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಪದವಿ ಕಾಲೇಜಿನ ಎಚ್.ಎನ್.ಕೆಲೂರ, ಎಂ.ಎಚ್. ಎಂ.ಹೈಸ್ಕೂಲಿನ ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ, ಎಂ.ಎಚ್. ಎಂ.ಕನ್ನಡ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಮಾತೆ ಕೆ.ಎನ್.ಹಿರೇಮಠ ಸೇರಿದಂತೆ ಹಲವಾರು ಗಣ್ಯರು ಆಗಮಿಸುವರು. ಕಾರ್ಯಕ್ರಮದ ಬಳಿಕ ಶಾಲೆಯ ಪುಟಾಣಿ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಮನರಂಜನಾ ಚಟುವಟಿಕೆಗಳು ನಡೆಯಲಿವೆ ಎಂದು ಮುಖ್ಯ ಗುರುಮಾತೆ ಶ್ರೀಮತಿ ತನುಜಾ ಪೂಜಾರಿ ಉತ್ತರಪ್ರಭಕ್ಕೆ ತಿಳಿಸಿದ್ದಾರೆ.

Exit mobile version