ತೋಂಟದ ಶ್ರೀ, ಹಡೇ೯ಕರ, ಹಳಕಟ್ಟಿ ಜಗದ ಯುಗ ಪುರುಷರು- ಪಟ್ಟಣಶೆಟ್ಟರ


ವರದಿ: ಗುಲಾಬಚಂದ ಜಾಧವ
ಆಲಮಟ್ಟಿ : ಶಾಂತ ಚಿತ್ತತೆ,ಬದ್ದತೆ ಖ್ಯಾತಿಯ ಕನ್ನಡದ ಕುಲದೇವರಾದ ಲಿಂ,ತೋಂಟದ ಸಿದ್ದಲಿಂಗ ಶ್ರೀಗಳು,ಕರುನಾಡಿನ ಗಾಂಧಿ ಮಂಜಪ್ಪ ಹಡೇ೯ಕರ ಹಾಗೂ ವಚನ ಗುಮ್ಮಟ ಫ.ಗು.ಹಳಕಟ್ಟಿ ಈ ತ್ರಿಮೂರ್ತಿ ಅನರ್ಘ್ಯ ರತ್ನಗಳು ಸಮಾಜ ಪರವಾದ ಮನೋಧರ್ಮವನ್ನು ಬೆಳಗಿಸಿದ್ದಾರೆ ಎಂದು ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಾಗೂ ಆಲಮಟ್ಟಿ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಕಾರ್ಯದರ್ಶಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಹೇಳಿದರು.

ಆಲಮಟ್ಟಿಯ ಎಸ್.ವ್ಹಿ. ವ್ಹಿ. ಸಂಸ್ಥೆಯ ಪ್ರಾ.ಶಿವಾನಂದ ಪಟ್ಟಣಶೆಟ್ಟರ ಸಭಾ ವೇದಿಕೆಯಲ್ಲಿ ಗುರುವಾರ ಜರುಗಿದ ಕರುನಾಡು ಗಾಂಧಿ ಮಂಜಪ್ಪ ಹಡೇ೯ಕರ ಉತ್ಸವ, ಲಿಂ, ಸಿದ್ದಲಿಂಗ ಶ್ರೀಗಳ ಹಾಗೂ ವಚನ ಪಿತಾಮಹ ಫ.ಗು.ಹಳಕಟ್ಟಿ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಾಗೂ ಆಲಮಟ್ಟಿ ಎಸ್.ವ್ಹಿ. ವ್ಹಿ.ಸಂಸ್ಥೆ ಕಾರ್ಯದರ್ಶಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಮಾತನಾಡುತ್ತಿರುವುದು.


ಸ್ಥಳೀಯ ಎಸ್.ವ್ಹಿ. ವ್ಹಿ. ಸಂಸ್ಥೆಯ ಆವರಣದಲ್ಲಿ ಗುರುವಾರ ನಡೆದ ಕರುನಾಡು ಗಾಂಧಿ ಮಂಜಪ್ಪ ಹಡೇ೯ಕರ ಉತ್ಸವ, ಲಿಂ,ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಹಾಗೂ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಪುಣ್ಯ ಸ್ಮರಣೋತ್ಸವ,ಶಾಲಾ,ಕಾಲೇಜುಗಳ ವಾಷಿ೯ಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದ ಅವರು ಈ ಮೂರು ಜನ ಮಹನೀಯರ ಮೌಲಿಕ ವಿಚಾರಧಾರೆಗಳು ಸೂಜಿಗಲ್ಲಿನಂತಿವೆ.ಇವರುಗಳ ಸೂಕ್ತಿಗಳು, ಆದರ್ಶಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ.ಅವರುಗಳ ಚಿಂತನೆಗಳು ಮತ್ತಿಷ್ಟು ಬಲ ಪಡಿಸಬೇಕಾಗಿದೆ ಎಂದರು.
ತೋಂಟದ ಸಿದ್ದಲಿಂಗ ಶ್ರೀಗಳು ಧಾಮಿ೯ಕ ಜಾಗೃತಿ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಬದಲಾವಣೆ ತರುವ ಕೆಲಸ ಗೈದಿದ್ದಾರೆ.ಅಕ್ಷರ,ಅನ್ನ ದಾಸೋಹಕ್ಕೆ ನವ್ಯ ಭಾಷೆ ಬರೆದು ಮಠ ಮಾನ್ಯಗಳಿಗೆ ಮಾದರಿಯಾಗಿದ್ದಾರೆ. ನಿಸ್ವಾರ್ಥ ಸೇವೆ,ಜನೋಪಕಾರಿ ಕಾಳಜಿಯಿಂದ ಮನೆ ಮಾತಾಗಿದ್ದಾರೆ ಎಂದರು.


ಸಕಾ೯ರ ಮಂಜಪ್ಪನವರ ಬಗ್ಗೆ ಕಾಳಜಿ ತೋರಲಿ : ಕನಾ೯ಟಕ ಗಾಂಧಿ ಮಂಜಪ್ಪ ಹಡೇ೯ಕರ ಬಗ್ಗೆ ಸಕಾ೯ರ ಬಹಳಷ್ಟು ಲಕ್ಷ ವಹಿಸಬೇಕು.ಕೇವಲ ಒಂದು ಪುಸ್ತಕ ಪ್ರಕಟಿಸಿದರೆ ಸಾಲದು. ಲಾಲ್ ಬಹಾದ್ದೂರ್ ಶಾಸ್ತ್ರಿ ಹೆಸರಿನ ಮೇಲೆ ವಿಶ್ವ ವಿದ್ಯಾಲಯಗಳಿವೆ.ಶಾಲೆ,ಕಾಲೇಜುಗಳಿವೆ.ಉತ್ತರ ಭಾರತದಲ್ಲಿ ಸಾಕಷ್ಟು ದೊಡ್ಡ ಸಂಸ್ಥೆಗಳಿಗೆ ಸಕಾ೯ರ ನಾಮಕರಣ ಮಾಡಿದೆ. ಗಾಂಧೀಜಿಯರಂತೆ ತತ್ವದಾರ್ಶದ ಪ್ರಖ್ಯಾತಿ ಪಡೆದಿರುವ ಮಂಜಪ್ಪನವರು ಇನ್ನೂ ಅಜ್ಞಾತ ಮಹಾತ್ಮರಾಗಿದ್ದಾರೆ ಇದು ವಿಷಾಧನೀಯಪ್ರೊ.ಶಿವಾನಂದ ಪಟ್ಟಣಶೆಟ್ಟರ


ಮಂಜಪ್ಪ ಅಗ್ರಗಣ್ಯ ವ್ಯಕ್ತಿ : ಭಾರತದ ಉದ್ದಕ್ಕೂ ಮಹಾತ್ಮ ಗಾಂಧೀಜಿಯವರ ಹೆಸರಿರುವಂತೆ ಶರಣ ಮಂಜಪ್ಪನವರ ಹೆಸರು ಬೆಳೆಸಬೇಕಾಗಿದೆ. ಸಮಾಜಕ್ಕಾಗಿ ಇಡೀ ತಮ್ಮ ಜೀವವನ್ನು ತೆದಿರುವ ಮಂಜಪ್ಪನವರು ಅಗ್ರಗಣ್ಯ ವ್ಯಕ್ತಿಯಾಗಿದ್ದಾರೆ. ಆದರೆ ಸಮಾಜ ಅಷ್ಟೊಂದು ಅಪ್ಪಿಕೊಂಡಿಲ್ಲ. ಮೇಲಸ್ತರದ ಜಾಲದಲ್ಲಿ ಮಂಜಪ್ಪನವರು ಮುಸುಕಾಗಿದ್ದಾರೆ. ಶೀಮಿತ ಕ್ಷೇತ್ರಕ್ಕೆ ಉಳಿದುಕೊಂಡಿದ್ದಾರೆ. ಬಹಳಷ್ಟು ಪ್ರಚಾರವಾಗಬೇಕಿತ್ತು.ಇದು ದುರದೃಷ್ಟಕರ ಎಂದರು.
ಆಲಮಟ್ಟಿ ಗಾರ್ಡನ್ ಗಳಿಗೆ ಮಂಜಪ್ಪ ಹೆಸರಿಡಿ : ಮಹಾತ್ಮ ಗಾಂಧಿ, ಬಸವಣ್ಣ ತತ್ವ ಹಾಗೂ ಶಿಕ್ಷಣ ಪ್ರಸಾರಕ್ಕಾಗಿ ಸಾಕಷ್ಟು ತಡಕಾಡಿ ಜೀವ ಹಣ್ಣಾಗಿಸಿಕೊಂಡು ಜನೋಪಯೋಗಿ ಹೋರಾಟ ಮಾಡಿದ್ದಾರೆ. ಆ ಕಾರಣ ಮಂಜಪ್ಪನವರ ಧರ್ಮ,ಕರ್ಮಭೂಮಿಯಾಗಿರುವ ಆಲಮಟ್ಟಿಯಲ್ಲಿನ ವಿಖ್ಯಾತ ಉದ್ಯಾನವನಗಳಿಗೆ ಮಂಜಪ್ಪನವರ ಹೆಸರು ಸಕಾ೯ರ ನಾಮಕರಣ ಮಾಡಬೇಕು. ಆ ದಿಸೆಯಲ್ಲಿ ಗೌರವ ನೀಡಬೇಕು.ಹೆಸರು ಬೆಳೆಸಬೇಕು. ಮಂಜಪ್ಪನವರು ಕಂಡ ಕನಸುಗಳನ್ನು ಅನುಷ್ಟಾನಗೊಳಿಸಲು ಸಕಾ೯ರ ದಿಟ್ಟ ನಿಧಾ೯ರ,ಸಂಕಲ್ಪವನ್ನು ತೋರಬೇಕು ಎಂದು ಪ್ರಾ.ಶಿವಾನಂದ ಪಟ್ಟಣಶೆಟ್ಟರ ಒತ್ತಾಯಿಸಿದರು.
ಮಂಜಪ್ಪನವರ ಆಶಯ,ವಿಚಾರ, ಚಿಂತನೆಗಳನ್ನು ತೋಂಟದ ಸಿದ್ದಲಿಂಗ ಶ್ರೀಗಳು ಪೋಷಿಸಿಕೊಂಡು ಬಂದಿದ್ದಾರೆ.ಆಜ್ಞಾತ ಮಹಾತ್ಮ ಮಂಜಪ್ಪನವರ ಬಗ್ಗೆ ಬಹಳಷ್ಟು ಭಕ್ತಿ ಮೆರೆದಿದ್ದಾರೆ.ಇದರಿಂದ ಮಹಾತ್ಮನ ಸಮಾಧಿ ಸ್ಥಳಾಂತರಕ್ಕೆ ಅಂದು ಪ್ರೇರಣೆ ಒದಗಿತ್ತು.ಶ್ರೀಗಳ ಆಶಯದಂತೆ ಮಂಜಪ್ಪನವರ ಸ್ಮಾರಕವೂ ಇಲ್ಲಿ ನಿಮಾ೯ಣ ಅಗಿದೆ. ಗದುಗಿನ ತೋಂಟದ ಸಿದ್ದಲಿಂಗ ಶ್ರೀಗಳು ಲಕ್ಷ ವಹಿಸದಿದಿದ್ದರೆ ಮಂಜಪ್ಪನವರು ಜನತೆಯ ಮನದಿಂದ ಎಂದೋ ದೂರ ಸರಿದು ಹೋಗುತ್ತಿದ್ದರು ಎಂದು ಹಿಂದಿನ ಮೆಲುಕುಗಳನ್ನು ಅವರು ಸ್ಮರಿಸಿಕೊಂಡರು. ಆಜ್ಞಾತ ಸಂತನ ಸುಂದರ ಸ್ಮಾರಕ ಭವನ ನಿಮಾ೯ಣಕ್ಕೆ ಜನಪ್ರತಿನಿಧಿಗಳ ಸಹಕಾರವೂ ಇದೆ ಎಂದರು.


ಹಡೇ೯ಕರ ಮಂಜಪ್ಪನವರ ಹೆಸರು ಇನ್ನಷ್ಟು ಹೆಚ್ಚು ಪ್ರಸಾರವಾಗಲ್ಲಿಕ್ಕೆ ಮತ್ತಿಷ್ಟು ಇಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮಂಜಪ್ಪನವರ ಹೆಸರಿನ ಮೇಲೆ ಸಂಸ್ಥೆಯ ವತಿಯಿಂದ ತೆರೆಯಲಾಗುತ್ತಿದೆ. ಈ ಭಾಗದ ಹಿರಿಯರು,ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಕೇಳಿಕೊಂಡರು. ಮುಂದಿನ ದಿನಗಳಲ್ಲಿ ಮಂಜಪ್ಪನವರ ಸಮಗ್ರ ಸಾಹಿತ್ಯ ಪುಸ್ತಕ ಸಂಗ್ರಹಿಸುವ ಮಹಾದಾಸೆ ಹೊಂದಲಾಗಿದೆ ಎಂದರು.
ಅಮೂಲ್ಯ ವಚನಗಳ ಸಾರ ಸಂರಕ್ಷಿಸಿ ಬದ್ದತೆಯಿಂದ ಸಮಾಜಮುಖಿ ಕಾಯಕ ಮಾಡಿರುವ ವಚನ ಗುಮ್ಮಟ ಡಾ.ಫ.ಗು.ಹಳಕಟ್ಟಿ ಶರಣರು ಬಲು ದೊಡ್ಡವರು.ಅವರ ಬಗ್ಗೆ ಸಮಗ್ರ ಸಾಹಿತ್ಯವನ್ನು ಸಿದ್ದಲಿಂಗ ಶ್ರೀಗಳು ಪ್ರಕಟ ಮಾಡಿದ್ದಾರೆ ಎಂದರು.
ಸಂತ್ರಸ್ತರ ಬಡ ಪ್ರತಿಭಾ ಮಕ್ಕಳಿಗೆ ಉಚಿತ ವಿದ್ಯಾದಾನ : ಸಿದ್ದಲಿಂಗ ಶ್ರೀಗಳು ತ್ಯಾಗ, ಪರಿಶ್ರಮದಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆದು ಗ್ರಾಮೀಣ ಪ್ರದೇಶದ ಬಡ ಮಕ್ಕಳ ಶಿಕ್ಷಣಕ್ಕೆ ನೇರವಾಗಿದ್ದಾರೆ. ಮಕ್ಕಳ ಪಾಲನೆ,ಪೋಷಣೆ ಮಾಡಿ ಸಂರಕ್ಷಿಸಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಕಲಿಯುತ್ತಿರುವ ಸಂತ್ರಸ್ತರ ಬಡ ಪ್ರತಿಭಾ ಮಕ್ಕಳಿಗೆ ಉಚಿತ ಹೈಸ್ಕೂಲ್ ಶಿಕ್ಷಣ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿದ ಬಳಿಕ ಗದುಗಿನಲ್ಲಿರುವ ಡಿಪ್ಲೊಮಾ ಕೋರ್ಸ್, ಐಟಿಐ,ಇಂಜಿನಿಯರಿಂಗ್ ಕಾಲೇಜು ಗಳಲ್ಲಿ ಕೇವಲ ಸಕಾ೯ರಿ ಫೀ ಭರಿಸಿ ಪ್ರವೇಶ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಶಾಸಕ ಶಿವಾನಂದ ಪಾಟೀಲ ಮುಖ್ಯ ಅತಿಥಿಗಳಾಗಿದ್ದರು. ವಿಪ ಸದಸ್ಯ ಹಣಮಂತ ನಿರಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಪಪೂ ಶಿಕ್ಷಣ ಇಲಾಖೆ ಉಪ ನಿದೇ೯ಶಕ ಎಸ್.ಎನ್. ಬಗಲಿ, ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಕನಾ೯ಟಕ ರಾಜ್ಯ ನೌಕರರ ಸಂಘ ಯೋಜನಾ ಶಾಖೆ ಅಧ್ಯಕ್ಷ ಎಸ್.ಬಿ.ದಳವಾಯಿ, ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ,ಅರಣ್ಯಾಧಿಕಾರಿ ಅಶೋಕ ಕಾಳೆ, ಹಿರಿಯ ಪತ್ರಕರ್ತ ಜಿ.ಸಿ.ಮುತ್ತಲದಿನ್ನಿ, ಶಂಕರ ಜಲ್ಲಿ, ನಿಡಗುಂದಿ ಕಾನಿಪ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ತೋರಗಲಮಠ, ಗ್ರಾಪಂ ಅಧ್ಯಕ್ಷ ಮಂಜುನಾಥ ಹಿರೇಮಠ, ಬಿಸ್ಮಿಲ್ಲಾ ಹಳ್ಳದಮನಿ, ಮಲ್ಲನಗೌಡ ನರಸನಗೌಡರ,ತಾಪಂ ಮಾಜಿ ಅಧ್ಯಕ್ಷ ಬಂದೇನವಾಜ ಡೋಲಜಿ, ಪ್ರಾಚಾರ್ಯ ಎಚ್.ಎನ್ ಕೆಲೂರ, ಮುಖ್ಯ ಶಿಕ್ಷಕ ಎಸ್.ಆಯ್.ಗಿಡಪ್ಪಗೋಳ,ಮುಖ್ಯ ಶಿಕ್ಷಕಿ ಕೆ.ಎನ್.ಹಿರೇಮಠ,ತನುಜಾ ಪೂಜಾರಿ, ಜಹೀರ ಕಾಜಿ,ಮಹೇಶ್ ಧರ್ಮರ,ಪ್ರಕಾಶ ಮಾಲಗತ್ತಿ ಇತರರು ವೇದಿಕೆ ಮೇಲೆ ಇದ್ದರು.
ಅಮ್ಮನ ಮಡಿಲು ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ವಿಶೇಷ ಉಪನ್ಯಾಸ ನೀಡಿದರು.
ಶಾಸಕರಿಗೆ,ವಿಪ ಸದಸ್ಯರಿಗೆ ಹಾಗೂ ಗದಗಿನ ಕೆಎಲ್ಇ ಕಾಲೇಜ್ ಉಪನ್ಯಾಸಕ ಈರಣ್ಣ ದಾವಣಗೆರಿ,ಜೆಟಿವಿಪಿ ಸಂಸ್ಥೆಯ ಈರಣ್ಣ ಗುರುಪುತ್ರನವರ ಸೇರಿದಂತೆ ಹಲ ದಾನಿಗಳಿಗೆ,ಗಣ್ಯರಿಗೆ ಸಂಸ್ಥೆ ವತಿಯಿಂದ ಗೌರವ ಸನ್ಮಾನ ನೀಡಲಾಯಿತು.
ಪ್ರತಿಭಾವಂತ ಮಕ್ಕಳಿಗೆ ಸತ್ಕರಿಸಲಾಯಿತು. ವಿವಿಧ ಶಾಲಾ,ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ನಡೆದವು.
ಇದೇ ಸಂದರ್ಭದಲ್ಲಿ ಆಜಾದ್ ಕಾ ಅಮೃತ ಮಹೋತ್ಸವದಂಗವಾಗಿ ಅರವಿಂದ ಚೂಕ್ಕಾಡಿ ರಚಿಸಿದ ಆಜ್ಞಾತ ಸಂತ ಮಂಜಪ್ಪ ಹಡೇ೯ಕರ ಪುಸ್ತಕ ಗಣ್ಯರು ಬಿಡುಗಡೆಗೊಳಿಸಿದರು. ಕರುನಾಡು ಗಾಂಧಿ ಮಂಜಪ್ಪ, ಭಾವೈಕ್ಯತ್ಯಾ ಹರಿಕಾರ ಸಿದ್ದಲಿಂಗ ಶ್ರೀ, ವಚನ ಪಿತಾಮಹ ಹಳಕಟ್ಟಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಪ್ರಾಚಾರ್ಯ ಪಿ.ಎ.ಹೇಮಗಿರಿಮಠ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಪ್ರಸ್ತಾವಿಕ ಮಾತನಾಡಿದರು. ಮಹೇಶ್ ಗಾಳಪ್ಪಗೋಳ ನಿರೂಪಿಸಿದರು. ಪಿ.ವೈ.ಧನಶೆಟ್ಟಿ ವಂದಿಸಿದರು.
ಮಕ್ಕಳ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮವನ್ನು ಎನ್.ಎಸ್.ಬಿರಾದಾರ, ಆರ್.ಎಂ.ರಾಠೋಡ, ಎಂ.ಎಚ್.ಬಳಬಟ್ಟಿ, ತನುಜಾ ಪೂಜಾರಿ, ಕವಿತಾ ಮರಡಿ ನಡೆಯಿಸಿಕೊಟ್ಟರು.

Exit mobile version