ಬಿರೇನ್ ಸಿಂಗ್ ಮಣಿಪುರ ಸಿಎಂ ಆಗಿ ಅವಿರೋಧವಾಗಿ ಆಯ್ಕೆ


ಉತ್ತರಪ್ರಭ ಸುದ್ದಿ
ಮಣಿಪುರ:
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಣಿಪುರದ ಹಂಗಾಮಿ ಸಿಎಂ ಎನ್ ಬಿರೇನ್ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೀಕ್ಷಕರಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕಾನೂನು ಸಚಿವ ಕಿರಣ್ ರಿಜಿಜು ಅವರು ರಾಜ್ಯದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಬಿರೇನ್ ಸಿಂಗ್‌ರನ್ನು ಆಯ್ಕೆ ಮಾಡಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ತೊಂಗA ಬಿಸ್ವಜಿತ್ ಸಿಂಗ್ ಹೆಸರು ಕೇಳಿ ಬಂದಿತು. ಈಗ ಹಾಲಿ ಸ್ಪೀಕರ್ ಯುಮ್ನಮ್ ಖೇಮ್‌ಚಂದ್ ಸಿಂಗ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಅಂತಿಮವಾಗಿ ನೊಗ್ತೋಂಬಮ್ ಬಿರೇನ್ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ.
ಬಿರೇನ್ ಸಿಂಗ್ ಸಂಕ್ಷಿಪ್ತ ವ್ಯಕ್ತಿಚಿತ್ರ: ನೊಗ್ತೋಂಬಮ್ ಬಿರೇನ್ ಸಿಂಗ್ ಅವರು 1961ರ ಜನವರಿ 1ರಂದು ಜನಿಸಿದ್ದಾರೆ. ಮಣಿಪುರ ವಿಶ್ವವಿದ್ಯಾಲಯದಲ್ಲಿ ಬಿ.ಎ ಪದವಿ ಪಡೆದಿದ್ದಾರೆ. ಫುಟ್ಬಾಲ್ ಆಟಗಾರರಾಗಿ ಜನಪ್ರಿಯತೆ ಗಳಿಸಿದ್ದರು. ನಂತರ ಗಡಿ ಭದ್ರತಾ ಪಡೆ(ಬಿಎಸ್ಎಫ್) ಗೆ ಆಯ್ಕೆಯಾಗಿ ಗಡಿ ಕಾಯ್ದಿದ್ದಾರೆ. ಫುಟ್ಬಾಲ್ ಆಟಗಾರರಾಗಿ ಸ್ಥಳೀಯ ಪಂದ್ಯಾವಳಿಗಳಲ್ಲದೆ ಡುರಾಂಡ್ ಕಪ್ ಪಂದ್ಯಾವಳಿಯಲ್ಲೂ ಭಾಗಿಯಾಗಿದ್ದರು.
1992ರಲ್ಲಿ ಪತ್ರಿಕೋದ್ಯಮಕ್ಕೆ ಧುಮುಕಿದ ಬಿರೇನ್ ಸಿಂಗ್ ಅವರು ನಹರೊಲ್ಗಿ ತೌಡಂಗ್ ಎಂಬ ಹೆಸರಿನ ಸ್ಥಳೀಯ ಪತ್ರಿಕೆಯನ್ನು ಸ್ಥಾಪಿಸಿದರು. ನಂತರ 2001ರ ತನಕ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.2002ರಲ್ಲಿ ಡೆಮೊಕ್ರಾಟಿಕ್ ರೆವಲ್ಯೂಷನರಿ ಪೀಪಲ್ಸ್ ಪಾರ್ಟಿಗೆ ಸೇರಿಕೊಂಡರು. ಹಿಂಗಾAಗ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾದರು. 2007ರಲ್ಲಿ ಮತ್ತೊಮ್ಮೆ ಜಯ ದಾಖಲಿಸಿದ್ದಲ್ಲದೆ, 2012ರ ತನಕ ಸಚಿವ ಸಂಪುಟ ಸದಸ್ಯರಾಗಿದ್ದರು.

Exit mobile version