ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲು..!

ನವದೆಹಲಿ: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರು ಭಾನುವಾರ ರಾತ್ರಿ ಎದೆನೋವಿನ ಕಾರಣದಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ರಾತ್ರಿ ಸುಮಾರು 8.45ರ ವೇಳೆಗೆ ಏಮ್ಸ್‌ಗೆ ದಾಖಲಾಗಿರುವ ಮನಮೋಹನ್‌ ಸಿಂಗ್‌ ಅವರಿಗೆ ಡಾ. ನಿತೀಶ್‌ ನಾಯ್ಕ್‌ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯಕ್ಕೆ ಮನಮೋಹನ್‌ ಸಿಂಗ್‌ ಅವರು ಐಸಿಯುನಲ್ಲಿ ದಾಖಲಾಗಿದ್ದಾರೆ, ಎಂದು ತಿಳಿದು ಬಂದಿದೆ.

ಈ ಹಿಂದೆಯೂ ಹಲವು ಬಾರಿ ಬೈಪಾಸ್‌ ಸರ್ಜರಿಗೆ ಒಳಗಾಗಿರುವ ಮನಮೋಹನ್‌ ಸಿಂಗ್‌ ಅವರು, 2009ರಲ್ಲಿ ಕೊನೇಯ ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

Exit mobile version