ಕೆಲೂರು : ಅರಣ್ಯಾಧಿಕಾರಿಗಳನ್ನು ಬಂಧಿಸಲು ಸೂಚಿಸಿದೆ- ಸಚಿವ ಶ್ರೀರಾಮುಲು

ಉತ್ತರಪ್ರಭ
ಗದಗ: ಮುಂಡರಗಿ ತಾಲೂಕ ಕೆಲೂರು ಗ್ರಾಮದ ನಿರ್ಮಲಾ ಪಾಟೀಲರು ಒಂದು ವಾರದ ಹಿಂದೆ ಅರಣ್ಯಾಧಿಕಾರಿಗಳ ಕಿರುಕುಳದಿಂದ ವಿಷಪ್ರಾಶನ ಮಾಡಿ ಚಿಕಿತ್ಸೆ ಫಲಿಸದೆ ಗದಗ ಜಿಮ್ಸ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಇಂದು ರವಿಕಾಂತ ಅಂಗಡಿಯವರ ನೇತೃತ್ವದಲ್ಲಿ ಸಚಿವರಾದ ಶ್ರೀ ರಾಮುಲುರವರನ್ನು ಭೇಟಿಯಾಗಿ ಘಟನೆ ಕುರಿತು ಮಾಹಿತಿಯನ್ನು ನೀಡಿದರು. ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರ ಸಚಿವರಿಗೆ ಬಗರಹುಕುಂ ಮತ್ತು ಅರಣ್ಯ ಸಾಗುವಳಿದಾರರಿಗೆ ಅರಣ್ಯ ಇಲಾಲಾಖೆಯಿಂದ ನೀಡುತ್ತಿರುವ ಕಿರುಕುಳದ ಬಗ್ಗೆ ಈಗಾಗಲೇ ಸದನದಲ್ಲಿ ಪ್ರಸ್ತಾಪ ಮಾಡಲಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಉತ್ತರ ಕರ್ನಾಟಕ ಮಹಾಸಭಾ ಹಾಗೂ ಬಗರ ಹುಕುಂ ಸಾಗುವಳಿದಾರರ ಸಮಿತಿ ಅಧ್ಯಕ್ಷ ರವಿಕಾಂತ ಅಂಗಡಿ ಕೆಲೂರಿನ ಮೃತ ಮಹಿಳೆಗೆ ಸರ್ಕಾರದಿಂದ 25 ಲಕ್ಷ ರೂಪಾಯಿಗಳನ್ನು ನೀಡಬೇಕು ಮತ್ತು ಅವರಿಗೆ ವಾಲ್ಮೀಕಿ ನಿಗಮದಿಂದ ಸಿಗುವ ಸೌಲಭ್ಯಗಳನ್ನು ಶೀಘ್ರವಾಗಿ ಸರ್ಕಾರದಿಂದ ಕೋಡಬೇಕು ಮತ್ತು ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಬಂಧಿಸಬೆಕೆಂದು ಒತ್ತಾಯಿಸಿದರು.
ಈ ಕರಿತು ಪ್ರತಿಕ್ರಿಯಿಸಿದ ಸಚಿವರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಬಂಧಿಸಲು ಸೂಚಿಸಿದೆ ಅವರು ತಲೇ ಮರೆಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ನಿರ್ಮಲಾ ಪಾಟೀಲರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಶೀಘ್ರದಲ್ಲೇ ಕೊಡಲಾಗುವುದು. ಸರ್ಕಾರ ರೈತ ಪರವಾಗಿ ಇದೆ ಹಾಗಾಗಿ ರೈತರು ಆತಂಕ ಪಡುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರಾದ ಬಸಣ್ಣ ಬೆಳದಡಿ , ಚಂದ್ರಕಾಂತ ಚವ್ಹಾಣ, ಎನ್ ಟಿ ಪೂಜಾರ ಹಾಗೂ ಮತ್ತಿತರರು ಹಾಜರಿದ್ದರು.

Exit mobile version