ಹರ್ಷ ಕೊಲೆ ಖಂಡಿಸಿ ನಿಡಗುಂದಿಯಲ್ಲಿ ಪ್ರತಿಭಟನೆ: ಮನವಿ ಅರ್ಪಣೆ


ನಿಡಗುಂದಿ (ವಿಜಯಪುರ ಜಿಲ್ಲೆ): ಶಿವಮೊಗ್ಗದಲ್ಲಿ ನಡೆದ ಹರ್ಷ ಝಿಂಗಾಡೆ ಕೊಲೆ ಖಂಡಿಸಿ ಭಾವಸಾರ ಕ್ಷತ್ರೀಯ ಸಮಾಜದ ಜನರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಹತ್ಯೆಯನ್ನು ಖಂಡಿಸಿದರು.
ಹರ್ಷ ನಿಧನಕ್ಕೆ ಹರ್ಷ ಭಾವಚಿತ್ರದ ಮುಂದೆ ಮೇಣದ ಬತ್ತಿ ಬೆಳಗಿ, ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಸಮಾಜದ ಅಧ್ಯಕ್ಷ ನಾರಾಯಣ ಮಹೇಂದ್ರಕರ, ಕಾಶೀನಾಥ ಮಹೇಂದ್ರಕರ ಮಾತನಾಡಿ, ಹಿಂದೂ ಸಮಾಜದ ರಕ್ಷಣೆಗಾಗಿ ಕ್ಷತ್ರೀಯ ಸಮಾಜ ಸದಾ ನಿಲ್ಲುತ್ತದೆ, ಅಂಥ ಸಮಾಜದ ಹರ್ಷನನ್ನು ಕಿಡಿಗೇಡಿಗಳು ಹತ್ಯೆ ಮಾಡಿದ್ದಾರೆ. ಸಮಾಜಕ್ಕಾಗಿ ತನ್ನ ಬದುಕನ್ನೆ ತ್ಯಾಗ ಮಾಡಿರುವ ಹರ್ಷನ ಹತ್ಯೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇಂಥ ವಿಚಾರದಲ್ಲಿ ಸರ್ಕಾರ ಮೃದು ಧೋರಣೆ ತೋರಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಆಗ್ರಹಿಸಿದರು.


ಪಾಂಡುರಂಗ ಪತಂಗೆ, ನಾಗೇಶ ಮಹೇಂದ್ರಕರ ಮಾತನಾಡಿ, ರಾಜ್ಯ ಸರ್ಕಾರ ಎಸ್ ಡಿಪಿಐ ಹಾಗೂ ಪಿಎಫ್ ಐ, ಸಿಎಫ್ ಐ ಸಂಘಟನೆ ನಿಷೇಧಿಸಬೇಕೆಂದು ಒತ್ತಾಯಿಸಿದರು. ಹಿಂದೂ ಧರ್ಮದವರ ಪರಧರ್ಮ ಸಹಿಷ್ಣುತೆ ಬಗ್ಗೆ ಅನ್ಯರು ಹಗುರವಾಗಿ ಪರಿಗಣಿಸುವುದು ಸಲ್ಲ, ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಎಂದು ಹೇಳಿದವರಿಂದ ಮುಂದುವರಿದ ಭಾಗವಾಗಿ ಈ ಹತ್ಯೆ ನಡೆದಿದೆ, ಮುಂದೆ ಇನ್ನೂ ಅನೇಕ ಹತ್ಯೆಗಳು ನಡೆಯಬಹುದು ಎಂದರು.
ಲಕ್ಷ್ಮಿಕಾಂತ ಮಹೇಂದ್ರಕರ, ನರಸಿಂಹ ಮಹೇಂದ್ರಕರ, ಸಿದ್ಧಲಿಂಗೇಶ, ಕೃಷ್ಣಾಕಾಂರ, ತುಕಾರಾಮ, ಶಂಕರ, ಪಾಂಡು ಬೋಂಬಲೇಕರ, ಪ್ರವೀಣಕುಮಾರ, ಯಮನೂರಿ, ಜಗದೀಶ, ತುಳಜರಾಮ ಇನ್ನೀತರರು ಇದ್ದರು.
ಗ್ರೇಡ್-2 ತಹಶೀಲ್ದಾರ್ ಎಸ್.ಎಚ್. ರಾಠೋಡ ಮನವಿ ಸ್ವೀಕರಿಸಿದರು.

Exit mobile version