ನರೇಗಾ ಕೂಲಿಗಾಗಿ ಗ್ರಾಮ ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ

ಹಾವೇರಿ: ಉದ್ಯೋಗಕ್ಕೆ ಖಾತ್ರಿಯಾಗಬೇಕಿದ್ದ ಯೋಜನೆ ಉದ್ಯೋಗಕ್ಕೆ ಕತ್ತರಿಯಾದರೆ ಹೇಗೆ? ಎನ್ನುವ ಪ್ರಶ್ನೆ ಉದ್ಭವವಾಗಿದೆ. ಹೌದು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕುರುಬರಮಲ್ಲೂರ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಕುರುಬರಮಲ್ಲಾಪೂರ ಗ್ರಾಪಂ ವ್ಯಾಪ್ತಿಯ ಬರದೂರ ಗ್ರಾಮಸ್ಥರು ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ನರೇಗಾ ಯೋಜನೆಯಡಿಯಲ್ಲಿ ಕೂಲಿ ಮಾಡಿಸಿಕೊಂಡು ಕಡಿಮೆ ಮೊತ್ತ ಸಂದಾಯ ಮಾಡಿದ ಆರೋಪ ಹಿನ್ನೆಲೆ ಇಂದು ಪ್ರತಿಭಟಿಸಿದರು.

ಗ್ರಾಪಂನಿಂದ ಕಡಿಮೆ ಹಣ ಸಂದಾಯವಾಗಿದೆ ಎಂದು ಗ್ರಾಮಸ್ಥರ ಆರೋಪಿಸಿದರು. ನರೇಗಾ ಅಡಿಯಲ್ಲಿ ಒಬ್ಬರಿಗೆ 275 ದಿನಗೂಲಿ ನೀಡಬೇಕು. ಆದರೆ ಗ್ರಾ.ಪಂನವರು ಒಬ್ಬರಿಗೆ 142 ರೂಗಳನ್ನು ಮಾತ್ರ ನೀಡಿದ್ದಾರೆ. ಹಣ ಸಂದಾಯದ ವೇಳೆ ಗ್ರಾ.ಪಂ ತಾರತಮ್ಯ ಮಾಡಿದೆ. ನಮಗೆ ನ್ಯಾಯ ಸಿಗೋವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದು ಗ್ರಾಮಸ್ಥರ ಪಟ್ಟು ಹಿಡಿದರು. ಪ್ರತಿಭಟನೆ ಆರಂಭವಾಗಿ ಕೆಲ ಗಂಟೆಯಾದರೂ ಸ್ಥಳಕ್ಕೆ ಪಿಡಿಓ ಬಾರದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಕಾಮಗಾರಿ ವೇಳೆ ಯಾವೊಬ್ಬ ಇಂಜನೀಯರ್ ಅಥವಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ, ಹೀಗಿದ್ದಾಗ್ಯೂ ಅದು ಹೇಗೆ ನಮಗೆ ಕಡಿಮೆ ವೇತನ ನೀಡಿದ್ದಾರೆ ಎಂದು ಕಿಡಿಕಾರಿದ್ರು. ಕೆಲ ಸಮಯದ ನಂತರ ಸ್ಥಳಕ್ಕೆ ಆಗಮಿಸಿದ ಪಿಡಿಓ ಅವರನ್ನು ಜನರು ತೀವ್ರ ತರಾಟೆಗೆ ತೆಗೆದುಕೊಂಡರು.

ನಂತರ ಈ ಬಗ್ಗೆ ಮಾಹಿತಿ ಪಡೆದು ಯಾರಿಗು ಅನ್ಯಾಯವಾಗದಂತೆ ಸರಿಪಡಿಸಲಾಗುವುದು ಎಂದು ಪಿಡಿಓ ಭರವಸೆ ನೀಡಿದರು. ಇದರಿಂದ ಕೂಲಿಕಾರ್ಮಿಕರು ಪ್ರತಿಭಟನೆ ಕೈಬಿಟ್ಟರು.

Exit mobile version