ಅಳ್ನಾವರದಲ್ಲಿ ಬಂಜಾರ ಕೂಲಿಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಆರೋಪಿಗಳನ್ನು ಬಂಧಿಸದ ಪೋಲಿಸರ ನಡೆಗೆ ರಾಜ್ಯಾದ್ಯಂತ ತಿವ್ರ ಆಕ್ರೋಶ


ಅಳ್ನಾವರ: ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಿಗೆ ಗ್ರಾಮದಲ್ಲಿ ಬೇರೆ ಬೇರೆ ತಾಂಡಾಗಳಿಂದ ತಮ್ಮ ಉಪಜೀವನಕ್ಕಾಗಿ ಕಬ್ಬು ಕಡಿಯಲು ಬಂದ ಬಂಜಾರ ಜನಾಂಗದ ಕೂಲಿ‌ ಕಾರ್ಮಿಕರ ಮೇಲೆ ಏಕಾ ಏಕಿ ಮಹಿಳೆಯರು ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ನಡೆದಿದೆ.


ಹಲ್ಲೆ ಆರೋಪಿ ಅರ್ಜುನ ತಂದೆ ಗಂಗಾರಾಮ ವಡ್ಡರ ಉರ್ಪ ಮಲ್ಲಾಪುರ ವಯಾ: 35 ವರ್ಷ ಸಾ:ಕುಂಬಾರಕೊಪ್ಪ ಮತ್ತು ಆತನ ಸಹಚರರು ಸೇರಿ ಕಬ್ಬು ಕಾಠಾವು ಮಾಡುತ್ತಿದ್ದ ಕಾರ್ಮಿಕರ ಮೇಲೇ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದು ಮಹಿಳೆಯರನ್ನು ಎಳೆದಾಡಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲೇಬೇಕೆಂದು ಅವರನ್ನು ಅಟ್ಟಾಡಿಸಿ ಕೊಂದು ಹಾಕಲು ತನ್ನ ಕಾರಿನಲ್ಲಿ ಗೂಂಡಾಗಳನ್ನು ಕರೆದು ಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.


ಮಾರಣಾಂತಿಕ ಹಲ್ಲೆಗೊಳಗಾದ ಲಕ್ಷ್ಮಿಬಾಯಿ ಸೇರಿ ಅನೇಕ ಮಹಿಳೆಯರು ಗಂಭೀರ ಪ್ರಮಾಣದಲ್ಲಿ ಹಲ್ಲೆ ಗೊಳಗಾಗಿದ್ದು, ಆರೋಪಿಗಳು ಕಟ್ಟಿಗೆಯಿಂದ ಹೊಡೆದ ಪರಿಣಾಮ ಗಂಭೀರ ಪ್ರಮಾಣದ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇಂತಹ ಹೇಯ ಕೃತ್ಯ ಎಸಗಿದ ಆರೋಪಗಳನ್ನು ಕೂಡಲೇ ಬಂಧಿಸಬೇಕು. ಕಾರ್ಮಿಕರ ಹಲ್ಲೆ ಖಂಡನಿಯ ಇಂತಹ ಘಟನೆಗಳನ್ನು ಬಂಜಾರ ಜನಾಂಗ ಸಹಿಸುವುದಿಲ್ಲ .ಧಾರವಾಡ ಜಿಲ್ಲಾಧಿಕಾರಿ ಮತ್ತು ಪೋಲಿಸ ವರೀಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಗಳನ್ನು ಬಂಧಿಸಬೇಕು ಇಲ್ಲದಿದ್ದಲ್ಲಿ ಉಗ್ರವಾದ ಹೊರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ

– ಶ್ರೀ ರವಿಕಾಂತ ಅಂಗಡಿ, ವಕೀಲರು ಕಾರ್ಮಿಕ ಮುಖಂಡರು ಗೋರ ಸೇನಾ ರಾಜ್ಯಾಧಕ್ಷರು

ತಕ್ಷಣವೇ ಪ್ರಕರಣ ದಾಖಲಿಸದ ಪೋಲಿಸರು ಕಾರ್ಮಿಕರ ಪ್ರತಿಭಟನೆಯ ನಂತರ ಪ್ರಕರಣವನ್ನು ಕಾಟಾಚರಕ್ಕೆ ದಾಖಲಿಸದಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು. ಆರೋಪಿಗಳ ರಕ್ಷಣೆ ಮಾಡಲು ಪೋಲಿಸರು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಪೊಲೀಸರು ಇನ್ನೂ ವರೆಗೂ ಆರೋಪಗಳನ್ನು ಬಂಧಿಸದೆ ಇರುವುದು ಎಲ್ಲೋ ಆರೋಪಿಗಳ ಪ್ರಭಾವ ಮಣಿದರಾ ಎನ್ನುವ ಶಂಕೆ ವ್ಯಕ್ತವಾಗಿದೆ.


ಕಾರ್ಮೀಕರು ರಕ್ಷಣೆ ಮಾಡ ಬೇಕಾದ ಕಾರ್ಮಿಕ ಇಲಾಖೆ ಇತ್ತ ನೋಡುವ ಗೊಜಿಗೆ ಹೊಗಿಲ್ಲ , ತಮ್ಮ ತುತ್ತಿನ ಚಿಲಕ್ಕಾಗಿ ಬೇರೆ ಬೇರೆ ತಾಂಡಾಗಳಿಂದ ಬಂದ ಜನರನ್ನು ಹಲ್ಲೆ ಮಾಡೋದು ,ಕೊಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಇವರ ರಕ್ಷಣೆ ಮಾಡಬೇಕಾದ ಸರ್ಕಾರ ಕಣ್ಣಮುಚ್ಚಿ ಕುಳಿತಿದ್ದು ವಿಪರ್ಯಾಸವೇ ಸರಿ ಅದರಲ್ಲೂ ತಾಂಡಾ ಅಭಿವೃದ್ಧಿ ನಿಗಮ ಅಂತ ಮಾಡಿ ಈ ಜನರ ಭವಣೆಯನ್ನು ನಿಗಿಸಬಹುದು ಎಂಬ ನಿರೀಕ್ಷೆ ಆ ಸಮುದಾಯದಲ್ಲಿ ಇತ್ತು. ಇಂತಹ ಘಟನೆ ನಡೆದರು ಮೌನ ವಹಿಸಿದ್ದು ನೋಡಿದರೆ ಆ ಸಮುದಾಯದ ದುರಾದುಷ್ಟವೇ ಸರಿ.

Exit mobile version