ಆಲಮಟ್ಟಿ ಜಲಾಶಯ ಭದ್ರತಾ ಪಡೆ ಇನ್ಸ್‌ಪೆಕ್ಟರ್ ಮರನೂರ ಸೇವೆಯಿಂದ ಅಮಾನತ್ತು


ಆಲಮಟ್ಟಿ : ಆಲಮಟ್ಟಿ ಜಲಾಶಯ ಭದ್ರತಾ ಕರ್ತವ್ಯಕ್ಕೆ ನಿಯೋಜನೆವಾಗಿದ್ದ ಕೆ.ಎಸ್.ಐ.ಎಸ್.ಎಫ್. 3 ನೇ ಪಡೆ ಪೋಲಿಸ್ ಇನ್ಸ್‌ಪೆಕ್ಟರ್ ಕರಿಯಪ್ಪ ಮರನೂರು ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.
ಅತಿರೇಕದ ದರ್ಪ,ಅಸಹ್ಯ, ಅಸೌಜನ್ಯ ವರ್ತನೆ ಹಾಗು ಇತರೆ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಸಾರ್ವಜನಿಕರೊಂದಿಗೆ ನಂಬಿಕೆ,ವಿಶ್ವಾಸಾರ್ಹತೆ,ಸೌಹಾರ್ದತೆಗೆ ಧಕ್ಕೆ ಮಾಡುತ್ತಿದ್ದಾರೆಂಬ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೋಲಿಸ್ ಇನ್ಸ್‌ಪೆಕ್ಟರ್ ಕರಿಯಪ್ಪ ಮರನೂರು ಕರ್ತವ್ಯದಿಂದ ಅಮಾನತ್ತುಕ್ಕೊಳಗಾಗಿದ್ದಾರೆ.


ಇಲ್ಲಿನ ಸಾರ್ವಜನಿಕರು, ಗುತ್ತಿಗೆದಾರರು, ಕಾಮಿ೯ಕರು,ವಿವಿಧ ಅಧಿಕಾರಿಗಳು ಈ ಬಗ್ಗೆ ಆರೋಪಿಸಿ ಹಿರಿಯ ಅಧಿಕಾರಿಗಳಿಗೆ ದೂರ ಸಲ್ಲಿಸಿದ್ದರು.
ಈ ಗುರುತರ ಆರೋಪಗಳನ್ನು ಪರಿಶೀಲಿಸಿ ವಿಚಾರಣೆ ಕೈಗೊಂಡಾಗ ಮೇಲ್ನೋಟಕ್ಕೆ ಆರೋಪಗಳು ಸಾಬೀತಾಗಿರುವ ನಿಟ್ಟಿನಲ್ಲಿ ಶಿಸ್ತು ಪ್ರಾಧಿಕಾರಿಗಳು ಮತ್ತು ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೋಲಿಸ್ ಆಂತರಿಕ ವಿಭಾಗದ ಐಪಿಎಸ್ ಅಧಿಕಾರಿ ಜೆ ಅರುಣ ಚಕ್ರವರ್ತಿ ಅಮಾನತ್ತು ಆದೇಶ ಹೊರಡಿಸಿದ್ದಾರೆ.
ಇಲ್ಲಿನ ಗೇಟ್ಸ್‌ ಉಪ ವಿಭಾಗದ ಕೆಬಿಜೆಎನ್ ಎಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ,ಆಲಮಟ್ಟಿ ವಲಯದ ಮುಖ್ಯ ಇಂಜಿನಿಯರ್ ಕಚೇರಿಯಿಂದ ಈ ಸಂಬಂಧ ಬೆಂಗಳೂರಿನ ಆಂತರಿಕ ಭದ್ರತಾ ಕಚೇರಿಗೆ ಪತ್ರ ಬರೆದು ದೂರ ನೀಡಿಲಾಗಿತ್ತು .
ಆರೋಪಗಳ ಬಗೆ : ಆಲಮಟ್ಟಿ ಜಲಾಶಯ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದ ಕರಿಯಪ್ಪ ಮರನೂರು ಅವರು ನೀಡುತ್ತಿದ್ದ ಕಿರುಕಳ ದಿನೆದಿನೆ ಹೆಚ್ಚಾಗುತ್ತಾ ನಡೆದಿತ್ತು. ಎದುರಿಗೆ ಬಂದವರಿಗೆಲ್ಲ ಪೂವಾ೯ಪರ ವಿಚಾರಿಸದೆ ತಮ್ಮದೇ ದರ್ಪದ ಮಾತುಗಳನ್ನಾಡಿ ಹಿಯಾಳಿಸಿ ನಿಂದಸುತ್ತಿದ್ದರೆನ್ನಲಾಗಿದೆ.
ಇತರೆ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಆಣೆಕಟ್ಟಿನ ನಿರ್ವಹಣೆ, ಸರಕಾರದ ಕೆಲಸದ ನಿಮಿತ್ಯ ಈ ಆಣೆಕಟ್ಟುಯಿಂದ ಸಂಚರಿಸುವಾಗ ನಿತ್ಯ ಮಾತಿನ ಚಕಮಕಿ,ರಗಳೆ ವಿಪರೀತಂತೆ. ಆಣೆಕಟ್ಟಿನ ಮೇಲೆ ಸಂಚರಿಸಲು ಅನುಮತಿ ಇದ್ದಾಗ್ಯೂ ಅನುವು ಮಾಡಿಕೊಡದೆ ವಿನಾಕಾರಣ ತಕರಾರು ತಗೆದು ರೇಗಿಸುತ್ತಿದ್ದರು. ಅಲ್ಲದೇ ನಾನಾ ಉದ್ಯಾನವನದಲ್ಲಿ ಕೆಲಸ ಗೈಯುವ ಕಾಮಿ೯ಕರೊಂದಿಗೂ ಕ್ಯಾತೆ ತಗೆದು ಕಿರಿಕ್ ಹಚ್ಚುತ್ತಿದ್ದರು. ಅವಾಚ್ಯ ಶಬ್ದಗಳಿಂದ ಮನಸೋ ಇಚ್ಚೆ ನಿಂದಿಸಿ ಅಗೌರವದೊಂದಿಗೆ ಮಾನಸಿಕ ವೇದನೆ ನೀಡುತ್ತಿದ್ದರು. ಒಂದೊಂದು ಬಾರಿ ಕಾಮಿ೯ಕರ ಮೇಲೆ ಹಲ್ಲೆ ಮಾಡಲು ಯತ್ನಿಸಿದಂಥ ಪ್ರಸಂಗಗಳು ಜರುಗಿವೆ. ಅಸಭ್ಯ ವರ್ತನೆಯ ನರ್ತನ ಪದೇಪದೇ ಪುನರಾವರ್ತಿತ ಈ ಪೋಲೀಸ್ ಅಧಿಕಾರಿಯಿಂದ ರಾಜಾರೋಷವಾಗಿ ನಡೆಯುತ್ತಲೇ ಇತ್ತು. ಇಷ್ಟು ದಿನ ಜನ ಇತನನ್ನು ಸಂಭಾಳಿಸಿದೇ ದೊಡ್ಡದು!
ಜಲಾಶಯಕ್ಕೆ ಸಂಬಂಧಿಸಿದಂತೆ ಅನ್ಯ ಅಧಿಕಾರಿಗಳಿಗೆ ಸರಕಾರದ ಕೆಲಸ ನಿರ್ವಹಿಸಲು ಮುಜುಗುರು ಮಾಡುವಂಥ ಪರಸ್ಥಿತಿ ಇತ್ತು. ಜವಾಬ್ದಾರಿ ಸ್ಥಾನ ಹೊತ್ತಿದ್ದ ಕರಿಯಪ್ಪ ಮರನೂರು ಅವರು ತೋರ್ಪಡಿಸುತ್ತಿದ್ದ ಇಂಥ ತಮಾಷೆಯಿಂದ ಬೇಸತ್ತು ಎಲ್ಲರೂ ನೋವನ್ನುಂಡಿ ಶಪಿಸುತ್ತಿದ್ದರು.
ಆಣೆಕಟ್ಟಿನ ಮೇಲಿನ ಮತ್ತು ಆಣೆಕಟ್ಟು ಮೇಲ್ಭಾಗದ ಮೂಲಕ ಸಂಚರಿಸಿ ಬಲದಂಡೆಯ ಉದ್ಯಾನವನ ಹಾಗು ನೀರಾವರಿ ಕಾಮಗಾರಿಗಳಿಗೆ ತೆರಳುತ್ತಿದ್ದ ಅಧಿಕಾರಿಗಳಿಗೆ ತೀವ್ರ ತೊಂದರೆ ನೀಡಿದ ಆರೋಪಗಳು ಮಾರ್ದನಿಸುತ್ತಿವೆ ಇದೀಗ ಇಲ್ಲಿ ! ಪಿಎಸ್ಐ ಕರಿಯಪ್ಪ ಮರನೂರು ಅವರನ್ನು ಕೂಡಲೇ ಇಲ್ಲಿಂದ ಬೇರೆಕಡೆ ಎಲ್ಲಾದರೂ ಬದಲಾಯಿಸಿ ಎಂಬ ಕೂಗು ಹೆಚ್ಚಾಗಿತ್ತು. ಪೋಲಿಸ್ ಅಧಿಕಾರಿಯ ಈ ದುರ್ವತನೆಗೆ ತಕ್ಕ ಶಾಸ್ತಿ ಸಿಕ್ಕಿದೆ. ಮಾಡಿದ್ದುಣೋ ಮಾರಾಯ ಎಂಬಂತಾಗಿದೆ.ಆರೋಪಗಳ ಆ ಕೂಗಿಗೆ ಶಿಸ್ತು ಪ್ರಾಧಿಕಾರಗಳು ಅಮಾನತ್ತು ಬಳವಳಿ ನೀಡಿದ್ದಾರೆ ಈಗ.
ಹೊಣೆಗಾರಿಕೆ ಯಿಂದ ಕೆಲಸ ನಿರ್ವಹಿಸಬೇಕಾಗಿದ್ದ ಕರಿಯಪ್ಪ ಮರನೂರು ಆಣೆಕಟ್ಟಿನ ಅಧಿಕಾರಿಗಳ, ಕಾಮಿ೯ಕರ, ಸಾರ್ವಜನಿಕರ ಜೊತೆ ಸಹಭಾಂದವ್ಯದಿಂದ ವತಿ೯ಸಿದರೆ ಈ ಗತಿ ಬರುತ್ತಿರಲಿಲ್ಲ.ಕರ್ತವ್ಯದಲ್ಲಿ ಗುರುತುರ ಆರೋಪಗಳನ್ನು ಎಸಗಿ ಅತೀವ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ನಡೆದುಕೊಂಡಿರುವುದು ಗಂಭೀರವಾಗಿ ಪರಿಗಣಿಸಿ ಕನಾ೯ಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 98 ರನ್ವಯ ಇವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ

Exit mobile version