ಹೂವಿನಹಡಗಲಿ: ಬೆಂಗಳೂರಿನಲ್ಲಿ ಶ್ರೀ ಸೇವಾಲಾಲ್ ಜಯಂತಿ ಪ್ರಯುಕ್ತ ದಿನಾಂಕ 04.02.2022 ರಿಂದ 06.02.2022 ರವರೆಗೆ ಟೂರ್ನಿ ನಡೆಯಲಿದ್ದು ಸುಮಾರು 45 ಕ್ಕೂ ಹೆಚ್ಚು ತಂಡಗಳೂ ಭಾಗವಹಿಸಲಿದ್ದು, ಬೇರೆ ಬೇರೆ ಜಿಲ್ಲೆಗಳಿಂದ (ಬಂಜಾರರು ಮಾತ್ರ ) ತಂಡಗಳು ಕೂಡ ಪಾಲ್ಗೊಳ್ಳಲಿದೆ, ವಿಜಯ ನಗರ ( ಜಿಲ್ಲೆ ) ಹೂವಿನ ಹಡಗಲಿ ತಾಲ್ಲೂಕಿನ 6 ತಾಂಡಾಗಳ ಆಟಗಾರರನ್ನು ಸೇರಿಸಿ ಒಂದು ತಂಡವನ್ನೂ ರಚಿಸಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಶ್ರೀ ಸಂತ ಸೇವಾಲಾಲ್ ಕ್ರಿಕೆಟ್ ಕಪ್ ಪಂದ್ಯಾವಳಿಯಲ್ಲಿ ಕೆಸುಲ ವಾರಿಯರ್ಸ್ ತಂಡ ಭಾಗವಹಿಸಿಲಿದೆ ತಂಡದ ನೇತೃತ್ವವನ್ನು ತಂಡದ ನಾಯಕ : ಅರ್ಜುನ ಬಿ ನಾಯ್ಕ್ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.