ಮೊರಾರ್ಜಿ ವಸತಿ ಶಾಲೆಯಲ್ಲಿ 10 ವಿದ್ಯಾರ್ಥಿಗಳಿಗೆ ಕೋವಿಡ್ ಧೃಡ

ಮುಳಗುಂದ : ಇಲ್ಲಿನ ಯಳವತ್ತಿ ರಸ್ತೆಗೆ ಹೊಂದಿಕೊಂಡಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10 ವಿದ್ಯಾರ್ಥಿಗಳು ಮತ್ತು ಒಬ್ಬ ಸಿಬ್ಬಂದಿಗೆ ಸೋಮವಾರ ಕೋವಿಡ್ ಸೋಂಕು ಧೃಡಪಟ್ಟ ಬಗ್ಗೆ ವರದಿಯಾಗಿದೆ.


ಈ ಕುರಿತು ಗದಗ ಟಿ.ಎಚ್.ಒ ಡಾ.ಪ್ರೀತ್ ಖೋನಾ ಮಾತನಾಡಿ, ವಸತಿ ಶಾಲೆಯ ಕೆಲವರಿಗೆ ನೆಗಡಿ, ಕೆಮ್ಮು, ಜ್ವರದಂತ ಲಕ್ಷಣಗಳು ಕಂಡುಬಂದ ಹಿನ್ನೆಲೆ ಜ.29 ರಂದು 39 ವಿದ್ಯಾರ್ಥಿಗಳಿಗೆ ಕೋವಿಡ್ ರ್ಯಾಡಂ ಪರೀಕ್ಷೆಗೆ ಒಳಪಡಿಸಿ ಗಂಟಲು ಮಾದರಿ ಸಂಗ್ರಹಿಸಲಾಗುತ್ತು. ಈ ಪೈಕಿ 10 ವಿದ್ಯಾರ್ಥಿಳು ಮತ್ತು ಒಬ್ಬ ಸಿಬ್ಬಂದಿಗೆ ಸೋಂಕು ದೃಡಪಟ್ಟಿದೆ. ಆರೋಗ್ಯ ಸಿಬ್ಬಂದಿ ಶಾಲೆಗೆ ಭೇಟಿಕೊಟ್ಟಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ, ಸೌಮ್ಯ ಲಕ್ಷಣಗಳಿದ್ದು ಎಲ್ಲರೂ ಕ್ವಾರಂಟೈನ ವ್ಯವಸ್ಥೆ ಮತ್ತು ಅಗತ್ಯ ಚಿಕಿತ್ಸೆ ನೀಡಲಾಗಿದೆ. 3 ದಿನ ತರಗತಿಗೆ ರಜೆ ಕೊಡುವಂತೆ ಪ್ರಾಚಾರ್ಯರಿಗೆ ತಿಳಿಸಲಾಗಿದೆ. ಎಂದು ಹೇಳಿದರು.

ಸೋಂಕು ಧೃಡಪಟ್ಟ ಹಿನ್ನೆಲೆ ವಸತಿ ಶಾಲೆಗೆ ಸ್ಥಳೀಯ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರ ಎಂ.ಎಸ್.ಬೆಂತೂರ ಭೇಟಿ ನೀಡಿದ್ದರು. ಪೌರಕಾರ್ಮಿಕರಿಂದ ವಿದ್ಯಾರ್ಥಿಗಳ ಕೊಠಡಿಗಳಿಗೆ ಸೋಂಕು ನಾಶಕ ದ್ರಾವಣ ಸಿಂಪಣೆ ಮಾಡಿಸಿದ್ದು ಅಗತ್ಯ ಸ್ವಚ್ಛತೆ ಕ್ರಮ ಕೈಗೊಳ್ಳಲಾಗಿದೆ. ಎಂದು ತಿಳಿಸಿದರು.

Exit mobile version