ವರದಿ:ವಿಠ್ಠಲ ಕೇಳುತ್
ಮಸ್ಕಿ: ಜಾತ್ಯತೀತ, ಸಮಾನತೆಯ ಸಮಾಜ ನಿರ್ಮಾಣ ಗಣರಾಜ್ಯದ ಆಶಯವಾಗಿದ್ದು, ಇದನ್ನು ಸಕಾರಗೊಳಿಸುವ ಜವಬ್ದಾರಿ ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಮೇಲಿದೆ ಎಂದು ಶಾಸಕ ಆರ್.ಬಸನಗೌಡ ತುರವಿಹಾಳ ಅವರು ಹೇಳಿದರು.
ಪಟ್ಟಣದ ಕೇಂದ್ರ ಶಾಲೆ ಆವರಣದಲ್ಲಿ ನಡೆದ 73ನೇ ಗಣರಾಜ್ಯೋತ್ಸವ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,ಭಾರತ ದೇಶ ಸಂಯುಕ್ತ ರಾಜ್ಯಗಳ ಒಕ್ಕೂಟವಾಗಿದ್ದು, 1950 ಜನೆವರಿ 26ರಂದು ಜಾರಿಗೆ ತಂದ ಸಂವಿಧಾನ ಎಂಬ ಭದ್ರ ತಳಹದಿಯ ಮೇಲೆ ನಿಂತಿದೆ.ಸಂವಿಧಾನದ ಆಶಯಗಳನ್ನು ಕಾಪಾಡುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ ಎಂದರು.
ಡಾ. ಬಿ.ಆರ್ ಅಂಬೇಡ್ಕರ್ ಅವರ ನೇತೃತ್ವದ ಸಮಿತಿ ರಚಿಸಿದ ನಮ್ಮ ದೇಶದ ಸಂವಿಧಾನವನ್ನು ಸ್ಮರಿಸುವ ದಿನವಾಗಿದೆ. ಸಂವಿಧಾನದ ಸಮಗ್ರತೆಯನ್ನು ಎತ್ತಿ ಹಿಡಿಯುವ ಮೂಲಕ ಈ ದಿನದ ಗಣರಾಜ್ಯೋತ್ಸವನ್ನು ಆಚರಿಸೋಣ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕವಿತಾ.ಕೆ.ಆರ್. ಸಿಪಿಐ ಸಂಜೀವ್ ಬಳಿಗಾರ, ತಾಪಂ ಇಒ ಬಾಬು ರಾಠೋಡ್, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಮುಖಂಡ ಶ್ರೀಶೈಲಪ್ಪ ಬ್ಯಾಳಿ, ಹೆಚ್. ಬಿ ಮುರಾರಿ, ಎಂ. ಅಮರೇಶ, ಬಿ.ಹೆಚ್ ದಿವಟರ್ ಸೇರಿದಂತೆ ಇನ್ನಿತರ ಗಣ್ಯರು ಇದ್ದರು.