ಮಕ್ಕಳಿಗೆ ಹರಡುವ ಸಾಂಕ್ರಾಮಿಕ ರೋಗ ತಡೆಗೆ ಆಯುರ್ವೇದ ಔಷಧ ಬಳಸಿ

ಮುಳಗುಂದ : ಮಕ್ಕಳ ಮತ್ತು ಯುವಕರಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗ ತಡೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವದು ಮುಖ್ಯವಾಗಿದ್ದು, ಆಯುರ್ವೇದದಲ್ಲಿ ಉಲ್ಲೇಖಿಸಿರುವ ಅಮೃತ ಬಳ್ಳಿ, ಬೆಟ್ಟದ ನೆಲ್ಲಿ, ಹಿರೇಮದ್ದಿನ ಬೇರು ಸೇರಿದಂತೆ ಮನೆಯಲ್ಲಿ ಲಭ್ಯವಿರುವ ಆಯುರ್ವೇದ ಗುಣವುಳ್ಳ ಔಷಧಗಳನ್ನ ಬಳಸಿಕೊಳ್ಳಬೇಕು. ಎಂದು ಡಿ.ಜಿ.ಎಂ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಎಸ್.ಎನ್.ಬೆಳವಡಿ ಹೇಳಿದರು.
ಅವರು ಇಲ್ಲಿನ ಕೆ.ಎಸ್.ಎಸ್. ಪ್ರೌಢ ಶಾಲೆಯಲ್ಲಿ ಅಮೃತ ಕಾ ಆಜಾದಿ ಮಹೋತ್ಸವದ ಅಂಗವಾಗಿ ಗದಗ ಡಿ.ಜಿ.ಎಂ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸ್ನಾತಕೋತ್ತರ ಸಂಶೋಧನಾ ಕೇಂದ್ರದ ವತಿಯಿಂದ ಸೋಮವಾರ ನಡೆದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಆಯುರ್ವೇದ ಸಸ್ಯಗಳ ಮಾಹಿತಿ ಮತ್ತು ಬಳಕೆ ವಿಧಾನ ಕುರಿತು ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.


ಡಾ. ಅಶ್ವಿನಿ ಸಜ್ಜನರ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಾಸ್ಥ್ಯವಾಗಿ ಇಟ್ಟುಕೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗೆÉ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು. ಎಂದರು. ನಂತರ ಆಯುರ್ವೇದ ಔಷಧ ಗುಣವುಳ್ಳ ಹತ್ತಾರು ಬಗೆಯ ಸಸ್ಯಗಳ ಪ್ರದರ್ಶನ ಹಾಗೂ ವಿದ್ಯಾರ್ಥಿಳ ಆರೋಗ್ಯ ತಪಾಸಣೆ ನಡೆಯಿತು.


ಈ ಸಂದರ್ಭದಲ್ಲಿ ಡಾ.ಎಂ.ಡಿ.ಸಮುದ್ರಿ, ಡಾ.ಕುಮಾರ ಚೌಡಪ್ಪನವರ, ಡಾ.ಯು.ವಿ.ಪುರದ, ಡಾ.ಮಮತಾ ಕಟಾವಕರ, ಪ್ರಾಚಾರ್ಯ ಡಿ.ವೈ.ಹುಡೆದ, ಶಿಕ್ಷಕರಾದ ಎಸ್.ವೈ.ಕುರಿ, ಎಸ್.ಎ.ಯಳವತ್ತಿ, ಜಿ.ಬಿ.ಮುಳಗುಂದ ಇದ್ದರು.

Exit mobile version