ಬಸವ ವಸತಿ ಯೋಜನೆ ಮನೆ ಮಂಜೂರು: ಪಿಡಿಒ ತಿಮ್ಮಣ್ಣ ಭೋವಿ

ವರದಿ: ವಿಠಲ ಕೆಳೂತ್


ಮಸ್ಕಿ: ಬಸವ ವಸತಿ ಯೋಜನೆ‌ ಹಾಗೂ ಡಾ.‌ಬಿ.ಆರ್ ಅಂಬೇಡ್ಕರ್ ಯೋಜನೆಯಡಿಯಲ್ಲಿ 30 ಮನೆಗಳು ಮಂಜೂರು ಆಗಿವೆ ಅರ್ಹ ಪಲಾನುಭವಿಗಳಿಗೆ ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ತಿಮ್ಮಣ್ಣ ಭೋವಿ ಹೇಳಿದರು.
ತಾಲೂಕಿನ ಮಾರಲದಿನ್ನಿ ಗ್ರಾಪಂಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಬಸವ ವಸತಿ ಯೋಜನೆಯಲ್ಲಿ 20 ಮನೆಗಳು, ಡಾ. ಬಿ.ಆರ್ ಅಂಬೇಡ್ಕರ್ ಯೋಜನೆಯಡಿಯಲ್ಲಿ 7 ಮನೆ, ಇದರಲ್ಲಿ ಪಜಾಗೆ 5 ಮತ್ತು ಪಪಂ ವರ್ಗಕ್ಕೆ 02 ಮನೆಗಳು, ಅಲ್ಪ ಸಂಖ್ಯಾತರು ಸೇರಿದಂತೆ ಒಟ್ಟು 30ಮನೆಗಳು ಮಂಜೂರು ಆಗಿವೆ ಎಂದರು.


ಅದಕ್ಕೆ ಗ್ರಾಪಂ ಸದಸ್ಯರು ಪ್ರತಿಕ್ರಿಯಿಸಿ, ಸರಕಾರದಿಂದ ಮನೆ ಕೊಡಿಸುತ್ತಾರೆ ಎಂದು ಜನ ನಮ್ಮನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ. ಕಡಿಮೆ ಮನೆಗಳು ಬಂದಿದ್ದರಿಂದ ಅರ್ಹ ಪಲಾನುಭವಿಗಳಿಗೆ ಮನೆ ಒದಗಿಸುವುದು ಕಷ್ಟಕರವಾಗಿದೆ. ಹೆಚ್ಚಿನ ಮನೆ ಕೊಡುವಂತೆ ಸರಕಾರಕ್ಕೆ ಪ್ರಸ್ತಾವನೆ ಕಳಿಸಬೇಕೆಂದು ಒತ್ತಾಯಿಸಿದರು.


ಸದ್ಯಕ್ಕೆ ಸರಕಾರದಿಂದ ಬಂದಿರುವ ಮನೆಗಳು ಬಡ ಜನರಿಗೆ ಒದಗಿಸಬೇಕು, ಮುಂದಿನ ದಿನದಲ್ಲಿ ಹೆಚ್ಚಿನ ಮನೆ ಕೊಡುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಈ ಭಾಗದಲ್ಲಿ ಎಸ್ಸಿ ಎಸ್ಟಿ ಜನಸಂಖ್ಯೆ ಹೆಚ್ಚಿನದ್ದು ಇದೆ. ಈ ವರ್ಗದ ಬಹುತೇಕ ಜನರಿಗೆ ಮನೆಗಳು ಇಲ್ಲ. ‌ಗುಡಿಸಲಿನಲ್ಲಿ ವಾಸ ಮಾಡುತ್ತಿಲ್ಲ. ಇವರಿಗೆ ಕೇವಲ 7ಮನೆಗಳು ಮಂಜೂರು ಆಗಿದ್ದು ಬೇಸರದ ಸಂಗತಿ ಎಂದು ಗ್ರಾಮ ಸದಸ್ಯರು ಅಸಮಾಧಾನ ಹೊರ ಹಾಕಿದರು.


ಬಳಿಕ ಗ್ರಾಪಂ‌ ಅಧ್ಯಕ್ಷ ಟಾಕಪ್ಪ ಮೆಣಸಿನಕಾಯಿ ಅವರು ಮಾತನಾಡಿ, ಸರಕಾರದಿಂದ ಮಂಜೂರು ಆಗಿರುವ ಮನೆಗಳನ್ನು ವಾಪಾಸ್ಸು ಕಳಿಸುವುದು ಬೇಡ, ಎಲ್ಲಾರು ಜೊತೆಗೂಡಿ ಇದನ್ನು ಬಡ ಜನರಿಗೆ ಹಂಚಿಕೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಹುಲಿಗೆಮ್ಮ, ಬೀರಪ್ಪ ವೆಂಕಟಾಪೂರ, ಲಕ್ಷ್ಮಿ, ಭೀಮವ್ವ, ಮೌನಮ್ಮ, ಹನುಮಂತ, ಗ್ರಾಪಂ ಸಿಬ್ಬಂದಿ ಶಿವಪುತ್ರಪ್ಪ ಮಾರಲದಿನ್ನಿ, ಮೌನೇಶ ಹೊಸಮನಿ ಉಪಸ್ಥಿತಿರಿದ್ದರು.

Exit mobile version