ಕಂಟೆನ್ಮೆಂಟ್ ಜೋನ್ ಹಾಗೂ ಬಫರ್ ವಲಯಗಳ ಬಗ್ಗೆ ಪರಿಷ್ಕೃತ ಮಾರ್ಗಸೂಚಿ

corona containment zone

ಕಂಟೆನ್ಮೆಂಟ್ ಜೋನ್ ಹಾಗೂ ಬಫರ್ ವಲಯಗಳ ಬಗ್ಗೆ ಪರಿಷ್ಕೃತ ಮಾರ್ಗಸೂಚಿ

ಕಂಟೆನ್ಮೆಂಟ್  ಜೋನ್ ಹಾಗೂ ಬಫರ್ ವಲಯಗಳ ಬಗ್ಗೆ ಪರಿಷ್ಕೃತ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಪರಿಷ್ಕೃತ ಮಾರ್ಗಸೂಚಿಯಲ್ಲಿ ಯಾವ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ವಿಕಸಿಸುತ್ತಿರುವ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ಅಕ್ಕ-ಪಕ್ಕದಲ್ಲಿರುವ/ಹತ್ತಿರದಲ್ಲಿಯೇ ಇರುವ ಮನೆಗಳು ಅಥವಾ ಅಪಾರ್ಟ್ಮೆಂಟ್/ ವಸತಿ ಸಮುಚ್ಛಯಗಳಲ್ಲಿ ವರದಿಯಾಗುತ್ತಿವೆ. ಇದರಿಂದ ಕಂಟೇನ್ಮೆಂಟ್ ವಲಯಗಳ ಸಂಖ್ಯೆಯು ಮಿತಿ ಮೀರಿದ್ದು, ಪ್ರಾಧಿಕಾರಿಗಳಿಗೆ ಸರ್ವೇಕ್ಷಣಾ ಚಟುವಟಿಕೆಗಳನ್ನು ಸುಲಭವಾಗಿ ಕೈಗೊಳ್ಳಲು ಅಡ್ಡಿಯಾಗುವುದೇ ಅಲ್ಲದೇ, ಪರಿಧಿ ವಲಯ ನಿಯಂತ್ರಣವನ್ನೂ ಸಹ ಖಚಿತಪಡಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ಈ ಹಿನ್ನೆಲೆಯಲ್ಲಿ, ಕಂಟೇನ್ಮೆಂಟ್ ಜೋನ್ ಹಾಗೂ ಬಫರ್ ವಲಯಗಳ ಅಧಿಸೂಚನೆ ಹಾಗೂ ಮುಕ್ತಗೊಳಿಸುವುದು (ಸಡಿಲಿಸುವಿಕೆ) ಕುರಿತು ಈ ಕೆಳಕಂಡಂತೆ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಲಾಗಿದೆ.

  1. ಕಂಟೇನ್ಮೆಂಟ್ ವಲಯವೆಂದು ಅಧಿಸೂಚನೆ ಹೊರಡಿಸುವ ಬಗ್ಗೆ

ಕಂಟೇನ್ಮೆಂಟ್ ವಲಯ:

  1. ಕೋವಿಡ್-19 (ನೋವೆಲ್ ಕೊರೋನಾ ವೈರಸ್) ದೃಢಪಟ್ಟ ಪ್ರಕರಣ/ ವ್ಯಕ್ತಿಯು ವಾಸವಿರುವ ಮನೆಯ ಸುತ್ತಲಿನ ಸುಸ್ಪಷ್ಟ ಪ್ರದೇಶವನ್ನು ಕಂಟೇನ್ಮೆಂಟ್ ವಲಯವೆಂದು ಕರೆಯಲಾಗುತ್ತದೆ. ಸದರಿ ಪ್ರದೇಶದಲ್ಲಿ ಸೋಂಕು ಹರಡದಂತೆ ತೀವ್ರ ಗತಿಯಲ್ಲಿ ಅಗತ್ಯ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ.
  2. ಮರದಿಯಾಗುವ “ಪ್ರತಿ ಪ್ರಕರಣದ” ಅನ್ವಯ “ಪ್ರದೇಶ”ವನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಲಾಗಿದೆ:
  3. ವಸತಿ ಸಮುಚ್ಛಯಗಳು ಕೋವಿಡ್-19 ದೃಢಪಟ್ಟ ವ್ಯಕ್ತಿಯ ಮನೆ ಇರುವ ಮಹಡಿ.
  4. ಸ್ವತಂತ್ರವಾದ ಮನೆ/ ವಿಲ್ಲಾ ಕೋವಿಡ್-19 ದೃಢಪಟ್ಟ ವ್ಯಕ್ತಿಯು ವಾಸವಿರುವ ಮನೆ/ವಿಲ್ಲಾ.
  5. ಕೊಳಗೇರಿ ಪ್ರದೇಶ ಕೋವಿಡ್-19 ದೃಢಪಟ್ಟ ವ್ಯಕ್ತಿಯ ಮನೆ ಇರುವ ಬೀದಿ/ ರಸ್ತೆ.

ಒಂದು ಪ್ರದೇಶದಲ್ಲಿ ಹೆಚ್ಚು ಪ್ರಕರಣಗಳು ವರದಿಯಾದ ಸಂದರ್ಭದಲ್ಲಿ ಕಾರ್ಯಾಚರಣೆಯ ಉದ್ದೇಶದಿಂದ ಕಂಟೇನ್ಮೆಂಟ್ ವಲಯವು ಸಾಕಷ್ಟು ವಿಸ್ತಾರವಾಗುರಬೇಕು ಹಾಗೂ ಪಕ್ಕ ಪಕ್ಕದಲ್ಲಿರುವ/ ಹತ್ತಿರವಿರುವ ಕೋವಿಡ್ ಪ್ರಕರಣಗಳ ಗುಂಪನ್ನು ಒಳಗೊಂಡಿರಬೇಕು. ಸದರಿ ಪ್ರದೇಶದ ಅಳತೆ/ ವಿಸ್ತಾರ ಹಾಗೂ ಗಡಿರೇಖೆಯನ್ನು ಈ ಕೆಳಗಿನಂತೆ ನಿರ್ಧರಿಸಬೇಕು:

2. ಪ್ರಕರಣಗಳು ಹಾಗೂ ಸಂಪರ್ಕಿತರನ್ನು ಮ್ಯಾಪ್ ಮಾಡುವ ಮೂಲಕ.

  1. ಪ್ರಕರಣಗಳು ಹಾಗೂ ಸಂಪರ್ಕಿತರ ಭೌಗೋಳಿಕ ಪ್ರಸರಣದ ಆಧಾರದ ಅನ್ವಯ.
  2. ಗುರುತಿಲಾದ ಪರಿಧಿ ವಲಯ ಆಧಾರದ ಮೇಲೆ.
  3. ಪರಿಧಿ ವಲಯ ನಿಯಂತ್ರಣವನ್ನು ಜಾರಿಗೊಳಿಸುವ ಸಂದರ್ಭದಲ್ಲಿ. ಆಯಾ ಜಿಲ್ಲಾಧಿಕಾರಿಗಳು/ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಇವರು ಸ್ಥಳೀಯವಾದ ತಾಂತ್ರಿಕ ಸಲಹೆ/ಸೂಚನೆಗಳೊಂದಿಗೆ ಈ ಪ್ರದೇಶವನ್ನು ರಸ್ತೆಗಳು, ಪಾರ್ಕ್ಗಳು, ಚರಂಡಿಗಳು ಅಥವಾ ಭೌಗೋಳಿಕವಾಗಿ ಪ್ರತ್ಯೇಕಿಸಲು ಸೂಕ್ತವೆನಿಸುವ ಇನ್ನಾವುದೇ ವೈಶಿಷ್ಟ್ಯಗಳ ಆಧಾರದ ಮೇಲೆ ಪರಿಧಿ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೋಳಿಸಲು ಗುರುತಿಸುವರು. ಪರಿಣಾಮಕಾರಿ ನಿಯಂತ್ರಣಕ್ಕಾಗಿ ಮೇಲೆ ತಿಳಿಸಿದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.

3. ಬಫರ್ ವಲಯ

  1. ಹೊಸದಾಗಿ ಕೋವಿಡ್-19 ಪ್ರಕರಣಗಳು ವರದಿಯಾಗುವ ಸಂಭವವಿರುವ ಪ್ರದೇಶವನ್ನು ‘ಬಫರ್ ವಲಯ’ ಎಂದು ವ್ಯಾಖ್ಯಾನಿಸಲಾಗುತ್ತದೆ..
  2. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುವಂತೆ, ಕಂಟೇನ್ಮೆಂಟ್ ವಲಯದ ಸುತ್ತಲಿನ 200 ಮೀಟರ್ ತ್ರಿಜ್ಯದ ಪ್ರದೇಶವನ್ನು ಬಫರ್ ವಲಯ ಎಂದು ಕರೆಯಲಾಗುತ್ತದೆ.
  3. ಆಯಾ ಜಿಲ್ಲಾಧಿಕಾರಿಗಳು/ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಇವರು ಮೇಲೆ ತಿಳಿಸಿದ ಮಾನದಂಡಗಳ ಅನ್ವಯ ರಸ್ತೆಗಳು, ಪಾರ್ಕ್ ಗಳು, ಚರಂಡಿಗಳು ಅಥವಾ ಭೌಗೋಳಿಕವಾಗಿ ಪ್ರತ್ಯೇಕಿಸಲು ಸೂಕ್ತವೆನಿಸುವ ಇನ್ನಾವುದೇ ವೈಶಿಷ್ಟ್ಯಗಳ ಆಧಾರದ ಬಫರ್ ವಲಯವನ್ನು ಗುರುತಿಸುವರು.

4. ಸಕ್ರಿಯ ಸರ್ವೇಕ್ಷಣೆ:

ಧಾರಕ ವಲಯ ಹಾಗೂ ಬಫರ್ ವಲಯದಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಪ್ಪಿಸಲು/ ನಿಯಂತ್ರಿಸಲು, ಸಕ್ರಿಯ ಸಮೀಕ್ಷೆ ನಡೆಸಬೇಕು ಹಾಗೂ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಧಾರಕ ವಲಯದಲ್ಲಿ ಮನೆ ಮನೆ ಸಮೀಕ್ಷೆಯನ್ನು ಪ್ರತಿದಿನ ನಡೆಸಬೇಕು ಹಾಗೂ ಬಫರ್ ವಲಯದಲ್ಲಿ ಕಡ್ಡಾಯವಾಗಿ ವಾರದಲ್ಲಿ ಎರಡು ಬಾರಿ ನಡೆಸಬೇಕು.

Exit mobile version