ರೈತರ ಉತ್ಪನ್ನುಗಳಿಗೆ ಲಾಭದಾಯಕ ಬೆಲೆ ಘೋಷಿಸಿ: ನೆಲಗುಡ್ಡದ

ಉತ್ತರಪ್ರಭ ಸುದ್ದಿ
ಶಿರಹಟ್ಟಿ :
ರೈತರ ಉತ್ಪನ್ನುಗಳಿಗೆ ಲಾಭದಾಯಕ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ ಜೆ.ಬಿ. ಮಜ್ಜಿಗಿ ಅವರ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘಟನೆ ಅಧ್ಯಕ್ಷ ಎಸ್.ವಿ. ನೆಲಗುಡ್ಡದ ಮಾತನಾಡಿ. ದೇಶದಲ್ಲಿ ರಸ್ತೆ, ರೈಲ್ವೆ, ವಿದ್ಯುನ್ಮಾನ ತಂತ್ರಜ್ಞಾನವು ಪ್ರಗತಿ ಸಾಧಿಸಿ, ಮಂಗಳನ ಅಂಗಳದವರೆಗೂ ತಲುಪಿದ್ದೇವೆ. ಆದರೆ ಮನುಷ್ಯನ ಬದುಕಿಗೆ ಅತ್ಯಾವ್ಯಶಕವಾಗಿ ಬೇಕಾದ ಆಹಾರ ಉತ್ಪಾದಿಸುವ ಕೃಷಿ ಕ್ಷೇತ್ರ ಇಂದು ದುಸ್ಥಿತಿಯತ್ತ ಸಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರ ಉತ್ಪನ್ನುಗಳಿಗೆ ವೈಜ್ಞಾನಿಕ ಬೆಲೆ ಸಿಗದೇ 1990ರ ದಶಕದಿಂದ 3.5ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.

ಯುವ ಸಮೂಹ ಕೃಷಿ ಕ್ಷೇತ್ರ ತ್ಯಜಿಸಿ ನಗರದತ್ತ ಹೋಗುತ್ತಿದ್ದು, ರೈತರು ತಾವು ಬೆಳೆದ ಬೆಳೆಗಳ ಒಳಸುರಿಗಳ ವೆಚ್ಚ ಅಧಿಕವಾಗಿ, ಪ್ರಕೃತಿ ವಿಕೋಪದಿಂದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಲಾಭದಾಯಕ ಬೆಲೆ ಸಿಗದ ಕಾರಣ ರೈತ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅಲ್ಲದೇ ರೈತರು ಉತ್ಪನ್ನುಗಳಿಗೆ ಮಧ್ಯವರ್ತಿಗಳು ದರ ನಿಗದಿ ಮಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಕೃಷಿ ಕ್ಷೇತ್ರ ಅವನತಿಗೊಂಡು ಆಹಾರದ ಅಭಾವ ಉಂಟಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಅನ್ನದಾತರ ಉತ್ಪನ್ನುಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು, ಹಣದುಬ್ಬರದ ಜೊತೆ ರೈತ ಕುಟುಬಂಗಳು ಆರ್ಥಿಕ ಸುಸ್ಥಿರತೆ ಕಾಣುವಂತೆ ಮಾಡಬೇಕೆಂದು ಒತ್ತಾಯಿಸಿದರು.

ಈ ವೇಳೆ ರಮೇಶ ಕೋಳಿವಾಡ, ಬಸವನಗೌಡ ಪಾಟೀಲ, ಆರ್.ಎಫ್. ಬಿಜ್ಜೂರ, ಕೆ.ಬಿ. ಗಾಣಿಗೇರ. ಬಿ.ಎಫ್. ತುಳಿ, ನಿಂಗಪ್ಪ ತಳವಾರ, ಚನ್ನಬಸಪ್ಪ ವರವಿ, ಮಂಜು ವರವಿ, ಈರಣ್ಣ ಕಲ್ಯಾಣಿ, ಸಂತೋಷ ವರವಿ ಉಪಸ್ಥಿತರಿದ್ದರು.

Exit mobile version