ಮಹಾದೇವಪ್ಪ ಬಸಪ್ಪ ಹೆಬ್ಬಾಳ ನಿಧನ

ಆಲಮಟ್ಟಿ:ಬಸವನಬಾಗೇವಾಡಿ ತಾಲ್ಲೂಕಿನ ಮಣ್ಣೂರ ಗ್ರಾಮದ ಲಿಂಗಾಯತ ಸಮಾಜದ ಮುಖಂಡ ಮಹಾದೇವಪ್ಪ ಬಸಪ್ಪ ಹೆಬ್ಬಾಳ (69) ಶುಕ್ರವಾರ ನಿಧನರಾದರು.ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.
ಮೃತರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 12 ಕ್ಕೆ ಸ್ವಗ್ರಾಮ ಮಣ್ಣೂರ ದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇಲ್ಲಿಯ ಗಂಗಾ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ವಿರೇಶಕುಮಾರ ಹೆಬ್ಬಾಳ ಮೃತರ ಪುತ್ರರಲ್ಲಿ ಒಬ್ಬರು.

Exit mobile version