ಕೊವಿಡ್-19 ನಿಯಂತ್ರಣ : ನಿಯಮ ಉಲ್ಲಂಘಿಸಿದ ಸಂಘ, ಸಂಸ್ಥೆ, ಹೊಟೆಲ್‍ಗಳ ವಿರುದ್ದ ಪ್ರಕರಣ ದಾಖಲು

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್

ರಾಜ್ಯದಲ್ಲಿಂದು ಸೋಂಕಿತರ ಸಂಖ್ಯೆಯಲ್ಲಿ ಪಲ್ಲಟ:

ಗದಗ : ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಖಕ್ಕೆ ಮಾಸ್ಕ ಧಾರಣೆ, ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಗುಂಪು ಸೇರದಿರುವ ಮುಂತಾದ ನಿರ್ದೇಶನಗಳನ್ನು ಉಲ್ಲಂಘಿಸಿದ  ಗದಗ ಬೆಟಗೇರಿ ವ್ಯಾಪ್ತಿಯ ಸಂಘ, ಸಂಸ್ಥೆ, ಹೊಟೆಲ್‍ಗಳ ವಿರುದ್ದ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ.

ಬೆಟಗೇರಿ ಎಸ್.ಎಸ್.ಕೆ. ವ್ಯಾಯಾಮ ಶಾಲೆ, ಅಕ್ಕಿಸ್ ಫಿಟ್ನೆಸ್ ಜಿಮ್, ನಿಸರ್ಗ ಬಡಾವಣೆಯ ಖಾನ್ಸ್  ಜಿಮ್, ಧನುಷ ಹೊಟೆಲ್, ಕಳಸಾಪೂರ ರಸ್ತೆಯ ಇಕ್ವಿನಾಕ್ಸ ಜಿಮ್, ಗದಗ ಶಹರದ ನ್ಯೂ ಆನಂದ ಮಾಂಸಾಹಾರಿ ಹೊಟೆಲ್ ಇವುಗಳು ಹಾಗೂ  ಲಕ್ಷ್ಮೇಶ್ವರದ ಬಾಲೆಹೊಸೂರು ಗ್ರಾಮದ ಘಂಟಿಚೋರ್  ಸಮಾಜದವರು ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ಸಮಯದಲ್ಲಿ  ಕೊವಿಡ್-19 ಸೋಂಕು ನಿಯಂತ್ರಣ ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ್ದು ಇವರೆಲ್ಲರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಇನ್ನು ಮುಂದೆಯೂ ಸಹ ಜಿಲ್ಲೆಯ ಸಾರ್ವಜನಿಕರು ಕೇಂದ್ರ ಹಾಗೂ ರಾಜ್ಯ ಸರಕಾರದ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ನಿರ್ಲಕ್ಷಿಸಿ ಪಾಲಿಸಲು ವಿಫಲವಾದಲ್ಲಿ ಸಂಬಂಧಪಟ್ಟವರ ವಿರುದ್ದ ಪ್ರಕರಣಗಳನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು  ಎಚ್ಚರಿಕೆ ನೀಡಿರುತ್ತಾರೆ.  

Exit mobile version