ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಂಧೆ

ಲಕ್ಷ್ಮೇಶ್ವರ :ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಂಧೆ ನಡೆಯುತ್ತಿದ್ದು ಅಕ್ಕಿಯ ಲೋಡಿನ ಗಾಡಿಯನ್ನು ಹಿಡಿದು ಹಣವನ್ನು ವಸೂಲಿ ಮಾಡಿರುವ ಘಟನೆಯೊಂದು ನಡೆದು ಹೋಗಿದೆ ಇದರಿಂದ ಇದರಲ್ಲಿ ಅಧಿಕಾರಿಗಳು ಶ್ಯಾಮಿಲ್ಇರೋದು ಅನುಮಾನಸ್ಪಂದಕ್ಕೆ ಕಾರಣವಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಅಕ್ರಮವಾಗಿ ಅಕ್ಕಿ ದಂಧೆ ನಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ಜಾಣ ಕುರುಡುತನ ತೋರುತ್ತಿದ್ದಾರೆ ಶಿಗ್ಲಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಾದ ದೊಡ್ಡೂರ ಸುವರ್ಣಗಿರಿ ಊಳಟ್ಟಿ ಹೊನ್ನಿಕೊಪ್ಪ ಹೂವಿನ ಶಿಗ್ಲಿ ಮೂನಿಯನ ತಾಂಡಾ ಉಂಡೇನಹಳ್ಳಿಯಿಂದ ಅಕ್ರಮ ಅಕ್ಕಿ ದಂಧೆಕೋರರು ಶಿಗ್ಲಿ ಗ್ರಾಮದ ಕಿರಾಣಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಅಕ್ಕಿಯನ್ನು ಬಡವರಿಂದ ತೆಗೆದುಕೊಂಡು ಮನೆಯಲ್ಲಿ ಸಂಗ್ರಹ ಮಾಡಿ ನಂತರ ಟಾಟಾ ಏಸಿಯಲ್ಲಿ ಹೇರಿಕೊಂಡು ಹಾವೇರಿಯ ಅಕ್ಕಿಆಲೂರ ಹಾಗೂ ರಾಣಿಬೆನ್ನೂರಿಗೆ ಮಾರಾಟ ಮಾಡುತ್ತಾರೆ ಶಿಗ್ಲಿ ಗ್ರಾಮದಲ್ಲಿ ಕೆಲ ಅಕ್ಕಿ ದಂಧೆಕೋರರು ಹುಟ್ಟಿಕೊಂಡಿದ್ದು ಇವತ್ತಿನದಲ್ಲ ಅವರು ಈ ದಂಧೆಗೆ ಕಿರಾಣಿ ಅಂಗಡಿಗಳನ್ನು ಬಳಸಿಕೊಂಡು ತಮ್ಮ ಮನೆಯಲ್ಲಿಯೇ ಸಂಗ್ರಹ ಮಾಡುತ್ತಾರೆ ಇದಕ್ಕೆ ಅಧಿಕಾರಿಗಳು ಸಾಥ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.


ಈ ಅಕ್ಕಿಯನ್ನು ಸಂಗ್ರಹಿಸಿ ಬೆರೆ ಬೇರೆ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಾರೆ ಅಧಿಕಾರಿಗಳಿಗೆ ಗೊತ್ತಿದ್ದರು ನಮಗೆ ಏನು ಗೋತ್ತೇ ಇಲ್ಲದಂತೆ ವರ್ತಿಸುತ್ತಾರೆ ಈ ಶಿಗ್ಲಿ ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ಸಂಗ್ರಹ ಮಾಡುತ್ತಿರುವುದರಿಂದ ಕೆಲವರಿಗೆ ಅರ್ಥವೇ ಆಗುತ್ತಿಲ್ಲ ಟಾಟಾ ಏಸಿಯಲ್ಲಿ ಅಕ್ಕಿಯನ್ನು ಹೆರಿ ಮುಂಜಾನೆ ಬೇಗನೆ ಲೋಡನ್ನು ಕಳುಹಿಸುತ್ತಾರೆ ಇನ್ನಾದರೂ ಅಧಿಕಾರಿಗಳು ಈ ಸುದ್ದಿಯನ್ನು ನೋಡಿ ಎಚ್ಚೆತಕೊಳ್ಳುತ್ತಾರೇ ಕಾದು ನೋಡಬೇಕಾಗಿದೆ‌. ಇನ್ನೂ ಈ ಅಕ್ಕಿಯ ಲೋಡನ್ನು ಹೆರಿಕೊಂಡು ಹೋಗುವ ದಾರಿಯನ್ನು ಕೇಲ ಜನರು ಕಾದು ಕುಳಿತುಕೊಂಡಿರುತ್ತಾರೆ ಗಾಡಿಯನ್ನು ಹಿಡಿದು ಹಣ ವಸೂಲಿ ಮಾಡುತ್ತಾರೆ ಇದಕ್ಕೆ ಅಧಿಕಾರಿಗಳು ಸಾಥ ನೀಡುತ್ತಿದ್ದಾರೆ ಎಂದು ಶಿಗ್ಲಿ ಗ್ರಾಮದ ಸಾರ್ವಜನಿಕರು ಆರೋಪಿಸಿದರು.

ವರದಿ: ಸುರೇಶ ಲಮಾಣಿ

Exit mobile version