ಮಳೆ ನೀರು ಹರಿಯುವ ಕಾಲುವೆ ಹೂಳು ತೆರವು

ಮುಳಗುಂದ: ಸ್ಥಳಿಯ ಪಟ್ಟಣ ಪಂಚಾಯ್ತಿ ವತಿಯಿಂದ ಮಳೆ ನೀರು ಹರಿಯುವ ಕಾಲುವೆಗಳ ಹೂಳು ತೆರವು ಕಾರ್ಯ ಶನಿವಾರ ನಡೆಯಿತು.
ವಡ್ಡರಕಣಿ ಹತ್ತಿರದ ಕಾಲುವೆ ಗಿಡಗಂಟಿಗಳು ಬೆಳೆದು ಹೂಳು ತುಂಬಿಕೊಂಡಿತ್ತು. ಇದರಿಂದ ಅಬ್ಬಿಕೆರೆಗೆ ನೀರು ಹರಿದು ಬರಲು ಸಮಸ್ಯೆಯಾಗಿತ್ತು. ಪಂಚಾಯ್ತಿ ಪೌರಕಾರ್ಮಿಕರು ಹಾಗೂ ಜೆಸಿಬಿ ಬಳಸಿ ಹೂಳು ತೆರವುಗೊಳಿಸಿ ಸ್ವಚ್ಛಗೊಳಿಸಿದೆ. ಸಾರ್ವಜನಿಕರು ಮನೆ ಮುಂದಿನ ಚರಂಡಿಗಳಿಗೆ ಕಸ ಹಾಕುವುದರಿಂದ ಹೂಳು ತುಂಬಿ ಮಳೆಗಾಲದಲ್ಲಿ ನೀರು ಸಾಗದೆ ಸಮಸ್ಯೆಯಾಗುತ್ತದೆ. ಮನೆಯಲ್ಲಿ ತ್ಯಾಜ್ಯವನ್ನ ಸಂಗ್ರಹಿಸಿಟ್ಟು ನಿತ್ಯ ಬರುವ ಪಂಚಾಯ್ತಿ ವಾಹನಕ್ಕೆ ಹಾಕಬೇಕು. ಹೀಗೆ ಮಾಡುವುದರಿಂದ ಕೊಳಚೆ ನೀರು ನಿಲ್ಲದಂತೆ ಮಾಡಬಹುದು, ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಜನರು ಸ್ವಚ್ಛತೆಗೆ ಆಧ್ಯತೆ ನೀಡಬೇಕು. ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಹೇಳಿದರು.

Exit mobile version