ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣ ತಾಲೂಕು ಕೇಂದ್ರವಾಗಿ ಎರಡು ವರ್ಷ ಉರುಳುತ್ತಿದ್ದರು. ಇಲ್ಲಿನ ಮೂಲಭೂತ ಸೌಕರ್ಯಗಳು ಸಾರ್ವಜನಿಕರಿಗೆ ದೊರೆಯುತ್ತಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಹಲವು ವರ್ಷಗಳಿಂದ ಸರಿಯಾಗಿ ಕಾರ್ಯಾನಿರ್ವಹಿಸದೇ ನಡೆಯುತ್ತಿರುವ ಶುದ್ದ ಕುಡಿಯುವ ನೀರಿನ ಘಟಕ.
ಮಸ್ಕಿ ಪಟ್ಟಣದ ಎಲ್ಲಾ ವಾರ್ಡನ ಜನತೆಗೆ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ 2008-09 ರಲ್ಲಿ ಗ್ರಾಮ ಪಂಚಾಯತಿ ಸುಮಾರು 7 ಕೋಟಿ ಅನುದಾನದಲ್ಲಿ ಬೇಸಿಗೆ ಸಮಯದಲ್ಲಿ ಕಾಲುವೆ ನೀರನ್ನು ಸಂಗ್ರಹಿಸಲು ಸುಮಾರು 16 ಏಕರೆ ಪ್ರದೇಶದ 88 mld ಸಾಮರ್ಥ್ಯದ ಕುಡಿಯುವ ನೀರಿನ ಕೆರೆ ಹಾಗೂ ಶುದ್ದ ಕುಡಿಯುವ ನೀರಿನ ಘಟಕ ವನ್ನು ನಿರ್ಮಿಸಿತು. ಆದರೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಶುದ್ದೀಕರಣ ಘಟಕವನ್ನು ಸರಿಯಾಗಿ ನಿರ್ವಹಿಸಬಲ್ಲ ತಾಂತ್ರಿಕ ವಿಷಯಗಳನ್ನು ತಿಳಿಯದೆ ಘಟಕದ ನಿರ್ವಹಣೆ ಸರಿಯಾದ ಕ್ರಮದಲ್ಲಿ ಆಗಲಿಲ್ಲ. ಪಟ್ಟಣ ಪಂಚಾಯತಿ ಯಿಂದ ನೆರವಾಗಿ ಪುರಸಭೆಗೆ ಬಡ್ತಿ ಪಡೆದ ನಂತರ ಶುದ್ದೀಕರಣದ ಬಗ್ಗೆ ಹಲವು ಬಾರಿ ಚರ್ಚೆ ನಡೆದರು ಯಾವುದೇ ಅನುದಾನ ಬಿಡುಗಡೆ ಯಾಗಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
2016-17 ರಲ್ಲಿ ಪುರಸಭೆ ತನ್ನ ವ್ಯಾಪ್ತಿಗೆ ತೆಗೆದುಕೊಂಡು ಇದರ ಸರಿಯಾದ ನಿರ್ವಹಣೆ ಗಾಗಿ ಹಲವು ಬಾರಿ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಎರೆಡು ಹಂತದಲ್ಲಿ ಸುಮಾರು 8 ಕೋಟಿ ಮೊತ್ತದ ಅನುದಾನವನ್ನು ಜಿಲ್ಲಾಧಿಕಾರಿಗಳ ಮುಖಾಂತರ ನಗರೊತ್ಪನ್ನ ಪೇಸ್ -3 ಗೆ ಸಲ್ಲಿಕೆ ಮಾಡಲಾಗಿದೆ. ಅದು ಮುಂದೆ KUWB ಗೆ ಹಸ್ತಾಂತರ ಮಾಡಿದ್ದು ಟೆಂಡರ್ ಕರೆದು ಕಾಮಾಗಾರಿ ಪ್ರಾರಂಭಿಸುವ ಹಂತದಲ್ಲಿ ಇದೇ ಎಂದು ಪುರಸಭೆ ಅಧಿಕಾರಿಗಳು ಉತ್ತರಿಸುತ್ತಾರೆ.
ಮರಳಿನ ಕೊರತೆ
ಶುದ್ದೀಕರಣ ಕ್ರೀಯೆಗೆ ಮುಖ್ಯವಾಗಿ ವಿಶೇಷವಾದ ಮರಳನ್ನು ಬಳಸಲಾಗುತ್ತಿದ್ದು ಅಂತಹ ಮರಳನ್ನು 4-5 ವರ್ಷಗಳಿಗೊಮ್ಮೆಯಾದರೂ ಬದಲಿಸಬೇಕು ಆದರೆ ಘಟಕ ಪ್ರಾರಂಭವಾಗಿ ಸುಮಾರು ವರ್ಷಗಳಾಗಿದ್ದರೂ ಮರಳನ್ನು ಬದಲಿಸುವ ಗೋಜಿಗೆ ಹೊಗಿಲ್ಲ ಅದರ ಸಂಬಂಧಿಸಿದ ಅಧಿಕಾರಿಗಳು. ಮರಳೆ ಇಲಗಲದ್ದರಿಂದ ನೀರಿನ ಶುದ್ದೀಕರಣ ಸಮರ್ಪಕವಾಗಿ ಆಗುತ್ತಿಲ್ಲ.
ಕೆಲವೇ ವಾರ್ಡಗಳಿಗೆ ಶುದ್ದ ಕುಡಿಯುವ ನೀರಿನ ಭಾಗ್ಯ
ಇಡೀ ಮಸ್ಕಿ ಪಟ್ಟಣದ ಎಲ್ಲಾ ವಾರ್ಡಗಳಿಗು ಕುಡಿಯುವ ನೀರು ಸರಬರಾಜು ಮಾಡುವ ಗುರಿ ಇಟ್ಟುಕೊಂಡು ಘಟಕ ಸ್ಥಾಪಿಸಿದ್ದಾರೆ. ಆದರೆ ಘಟಕ ಪ್ರಾರಂಭವಾಗಿ ಇಂದಿಗೆ ದಶಕಗಳೇ ಕಳೆದರು ಇಂದಿಗೂ ಬಹುತೇಕ ವಾರ್ಡಗಳ ಜನರಿಗೆ ಸರಕಾರದ ಶುದ್ದ ಕುಡುಯುವ ನೀರು ಕನಸಾಗೇ ಉಳಿದಿದೆ. ಮಸ್ಕಿ ಪಟ್ಟಣದಲ್ಲಿ ಸುಮಾರು 23 ವಾರ್ಡ ಗಳಿದ್ದರು ಈ ಘಟಕದ ನೀರು ವಾರ್ಡ ನಂಬರ್ ಗಳಾದ 1,4,5, 6,7, 9, 12, 20, 21, 22 ವಾರ್ಡ್ ಗಳಿಗೆ ಬಿಟ್ಟು ಉಳಿದಂತೆ ಪಟ್ಟಣದ ಅರ್ಧಕ್ಕೂ ಹೆಚ್ಚು ವಾರ್ಡ ಗಳಿಗೆ ನೀರು ಸರಬರಾಜಾಗುತ್ತಿಲ್ಲ.
ಅಶುದ್ದ ಕುಡಿಯುವ ನೀರಿನಿಂದ ಮಾರಕ ಸಾಂಕ್ರಾಮಿಕ ರೋಗಗಳು ಹರಡುತ್ತಿರು ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಳು ಮುತುವರ್ಜಿಯಿಂದ ಶುದ್ದ ಕುಡಿಯುವ ನೀರಿನ ಘಟಕವನ್ನು ಸಂಸ್ಕರಿಸಿ ಸರಿಯಾದ ಪ್ರಮಾಣದಲ್ಲಿ ನೀರು ಶುದ್ದಿಕರಷವಾಗುವಂತೆ ಮಾಡುತ್ತಾರ ಅನ್ನೊದನ್ನ ಕಾದುನೋಡಬೇಕು.
ವಿಠಲ ಕೆಳೂತ್,ಮಸ್ಕಿ
