
ಲಕ್ಷ್ಮೇಶ್ವರ: ತಾಲೂಕಿನ ಅಕ್ಕಿಗುಂದ ಗ್ರಾಮದಲ್ಲಿ ತಹಶೀಲ್ದಾರ ಭ್ರಮರಾಂಭ ಗುಬ್ಬಿಶೆಟ್ಟಿಯವರು ಗ್ರಾಮ ವಾಸ್ತವ್ಯ ಮಾಡಿದರು. ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆ ಹರಿದಿಲ್ಲ. ಚರಂಡಿಯ ಪಕ್ಕದಲ್ಲಿರುವ ಕುಡಿಯುವ ನೀರಿನ ಕೊಳವೆ ಬಾವಿಯಲ್ಲಿ ಚರಂಡಿ ನೀರು ಈ ಕೊಳವೆ ಬಾವಿಯಲ್ಲಿಯೇ ಹೋಗುವುದರಿಂದ ಗ್ರಾಮಸ್ಥರು ಗ್ರಾಮ ವ್ಯಾಸ್ಥವ್ಯ ಮಾಡಿದಾಗ ತಹಶಿಲ್ದಾರರಿಗೆ ದೊರು ನೀಡಿದರು ಪ್ರಯೋಜನೆ ಆಗಿಲ್ಲ ಈಗ ಈ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಹೌದು, ಲಕ್ಷ್ಮೇಶ್ವರ ತಾಲೂಕಿನ ಅಕ್ಕಿಗುಂದ ಗ್ರಾಮದಲ್ಲಿ ಕುಡಿಯುವ ನೀರಿನ ಬಗ್ಗೆ ಗ್ರಾಮ ವ್ಯಾಸ್ಥವ್ಯ ಮಾಡಿದಾಗ ಹೇಳಿದರು ಏನೂ ಪ್ರಯೋಜನೆ ಆಗಿಲ್ಲ. ಇದರಿಂದ ಈಗ ಈ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಅಧಿಕಾರಿಗಳು ಮಾತ್ರ ಜಾಣ ಕುರುಡುತನ ತೋರುತ್ತಿದ್ದಾರೆ.
ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಹೇಳಿದರೂ ಯಾರು ಏನು ಕ್ರಮ ಕೈಗೊಂಡಿಲ್ಲ. ಇದರಿಂದ ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿಗೆ ಬರೆ ಬಂದಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಅಕ್ಕಿಗುಂದ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಪ್ರತಿಯೊಂದು ಮನೆಯಲ್ಲಿ ತಳ್ಳುವ ಗಾಡಿಗಳಿದ್ದು ಇದರಿಂದ ಸಿಕ್ಕ ಕಡೆ ನೀರನ್ನು ತಳ್ಳುವ ಗಾಡಿಯ ಮೂಲಕ ತರುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದರು.
