ಹೆಡಗಿಬಾಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ 50 ಬಡ ಕುಟಂಬಗಳಿಗೆ ಆಹಾರ ಕಿಟ್ ವಿತರಣೆ

ಮಸ್ಕಿ: ಜೂನ್ 05 ಲಾಕ್ ಡೌನ್ ಪ್ರಯುಕ್ತ ನಮ್ಮ ಟ್ರಸ್ಟ್ ವತಿಯಿಂದ ಮಸ್ಕಿ ತಾಲೂಕಿನ ಕೆಲವೊಂದು ಆಯ್ದ ಹಳ್ಳಿಗಳಾದ ಸಾನಬಾಳ,ರಾಮಲದಿನ್ನಿ, ಜಿನ್ನಾಪೂರ, ಹಿರೇ ಕಡಬೂರು, ಮಸ್ಕಿ,ನಾಗರಬೆಂಚಿ, ಮೆದಿಕಿನಾಳ,ಅಂತರಗಂಗಿ, ಹಸಮಕಲ್, ದೀನಸಮುದ್ರ, ಕಣ್ಣೂರು, ಹೆಡಗಿನಾಳ, ಮುದಬಾಳ, ಕಾಟಗಲ್, ಹೀಗೆ 50 ಜನ ಫಲಾನುಭವಿಗಳನ್ನೂ ಗುರುತಿಸಿ ಮತ್ತು ಯಾರಿಗೆ ಪಡಿತರ ಚೀಟಿ ಇರುವುದಿಲ್ಲವೋ ಅಂತವೃದ್ಧರು, ಅಂಗವಿಕಲರು,ವಿಧವೆಯರಿಗೆ ಹಾಗೂ ಖಾಸಗಿ ಶಾಲೆಯ ಶಿಕ್ಷಕರಿಗೆ 25ಕೆಜಿ ಅಕ್ಕಿ, 2ಕೆಜಿ ಸಕ್ಕರೆ, 2ಕೆಜಿ ಬೇಳೆ, 250ಗ್ರಾಂ ಚಹಾ ಪುಡಿ, ಕಾರದ ಪುಡಿ, ಜೀರಿಗೆ ಮತ್ತು ಸಾಸಿವೆ ಹೀಗೆ ಒಂದು ತಿಂಗಳ ಮಟ್ಟಿಗೆ ಕುಟುಂಬಗಳಿಗೆ ತಗಲುವ ಆಹಾರ ಧಾನ್ಯದ ಕಿಟ್ ಗಳನ್ನೂ ಮಸ್ಕಿಯ ಸೇಂಟ್ ಜಾನ್ಸ್ ಚರ್ಚ್ ಶಾಲೆಯ ಆವರಣದಲ್ಲಿ ಹಿಂದು, ಮುಸ್ಲಿಂ ಕ್ರೈಸ್ತ ಹಾಗೆಯೇ ವಿವಿಧ ಧರ್ಮದ ಮುಖಂಡರ ನೇತೃತ್ವದಲ್ಲಿ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಬಲರಾಮಕಟ್ಟಿಮನಿ, ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಥೋಡ್, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ , ಶ್ರೀ ಮಹಾಂತ ಸ್ವಾಮೀಜಿ ಕಲ್ಯಾಣ್ ಆಶ್ರಮ ಮುದ್ಗಲ್, ಜಿಲಾನಿ ಖಾಜಿ ಮುಸ್ಲಿಂ ಧರ್ಮ ಗುರುಗಳು ಮಸ್ಕಿ, ಸಿಸ್ಟರ್ ಲಿಲ್ಲಿ ಆಮರ ಪ್ರೇಮಾಶ್ರಮ ಮಸ್ಕಿ, ಚಿನ್ನಪ್ಪ ಹೆಡಗಿಬಾಳ – ಗೌರವ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಭಾಗಹಿಸಿದ್ದರು.

Exit mobile version