ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಕೋವಿನ್ ಪೋರ್ಟಲ್ ಲಭ್ಯ

ನವದೆಹಲಿ: ಕೋವಿನ್ ಪೋರ್ಟಲ್ ಹಿಂದಿ ಸೇರಿದಂತೆ 10 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈ ಪ್ರಾದೇಶಿಕ ಭಾಷೆಗಳಲ್ಲಿ ಮರಾಠಿ, ಮಲಯಾಳಂ, ಪಂಜಾಬಿ, ತೆಲುಗು, ಗುಜರಾತಿ, ಅಸ್ಸಾಮೀಸ್, ಬಂಗಾಳಿ, ಕನ್ನಡ, ಒಡಿಯಾ ಸೇರಿವೆ. ಈಚೆಗೆ ನಡೆದ ಕೋವಿಡ್-19 ಕುರಿತು ಉನ್ನತ ಮಟ್ಟದ ಮಂತ್ರಿಗಳ (ಗೋಮ್) 26ನೇ ಸಭೆಯಲ್ಲಿ ಈ ನಿರ್ಧಾರಗಳನ್ನು ಪ್ರಕಟಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶಾದ್ಯಂತ ವ್ಯಾಕ್ಸಿನೇಷನ್‌ಗಳನ್ನು ನಿರ್ವಹಿಸುವ ವೇದಿಕೆಯಾಗಿ ಕೋವಿನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ನೋಂದಣಿ (ಆನ್‌ಲೈನ್ ಮತ್ತು ಆನ್-ಸೈಟ್ ಎರಡೂ ವಿಧಾನಗಳಲ್ಲಿ), ವೇಳಾಪಟ್ಟಿ, ಲಸಿಕೆ ಮತ್ತು ಕೋವಿನ್-19 ಸಮಯದಲ್ಲಿ ಫಲಾನುಭವಿಗಳ ಪ್ರಮಾಣೀಕರಣವನ್ನು ಸುಗಮಗೊಳಿಸುತ್ತದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version