ನಟಿ ಪ್ರೇಮಾ ಎರಡನೇ ಮದುವೆ ಬಗ್ಗೆ ನೀಡಿದ ಸ್ಪಷ್ಟನೆ

ಬೆಂಗಳೂರು: ಕೆಲ ದಿನಗಳಿಂದ ನಟಿ ಪ್ರೇಮಾ ಎರಡನೇ ಮದುವೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸೋಶಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರೇಮಾ, ಎರಡನೇ ಮದುವೆ ಹಾಗೂ ಖಿನ್ನತೆ ಕುರಿತು ನನ್ನ ಬಗ್ಗೆ ಹರಿದಾಡುತ್ತಿರುವುದು ಫೇಕ್ ನ್ಯೂಸ್ ಇದು. ಇದನ್ನು ನಂಬಿ ನನಗೆ ಮೆಸೇಜ್ ಮಾಡಬೇಡಿ ಎಂದು ಸೋಶಿಯಲ್ ಮಿಡಿಯಾದ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 2009ರಲ್ಲಿ ಶಿಶಿರ ಚಿತ್ರದಲ್ಲಿ ಅಭಿನಯಿಸಿದ ನಂತರ ಪ್ರೇಮಾ ಚಿತ್ರರಂಗಕ್ಕೆ ಬೈ ಹೇಳಿದ್ದರು. 2017ರಲ್ಲಿ ಉಪೇಂದ್ರ ಮತ್ತೆ ಬಾ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದರು.

Exit mobile version