ಸ್ಥಳದಲ್ಲೇ ಪರೀಕ್ಷಿಸಿ ಸೋಂಕಿತರ ಸಂಖ್ಯೆ ಕಡಿಮೆಗೊಳಿಸಲು ಪ್ರಯತ್ನ ನಡೆದಿದೆ

ನರೇಗಲ್‌: ಕೊರೊನಾ ವೈರಸ್ ಪಟ್ಟಣದಿಂದ ಹಳ್ಳಿಯ ಕಡೆಗೆ ಗಣನೀಯವಾಗಿ ಹಬ್ಬಿದ್ದು, ಇದನ್ನು ತಡೆಗಟ್ಟಲು ಸರ್ಕಾರ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಉಪಯೋಗವನ್ನು ಕೊರೊನಾ ಸೋಂಕಿತರು ಪಡೆದುಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ:ಎ,ಡಿ,ಸಾಮುದ್ರಿ ಹೇಳಿದರು.
ಪಟ್ಟಣದ ಮಜರೆ ಗ್ರಾಮವಾದ ಏಳನೇ ವಾರ್ಡ ನ ದ್ಯಾಂಪುರದಲ್ಲಿ ಹಾಗೂ ಹಾಲಕೆರೆ,ಗ್ರಾಮದಲ್ಲಿ ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಂದು ಹಳ್ಳಿಗಳಿಗೆ ತೆರಳಿ ಮನೆ ಮನೆಗೆ ಹೋಗಿ ಕೋವಿಡ್ ಸೋಂಕತರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡುವುದು, ಕೊರೊನಾ ಸೋಂಕಿತರನ್ನು ತಕ್ಷಣ ಮನವೂಲಿಸಿ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸುವುದೆ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.
ಕೊರೊನಾ ಸೋಂಕಿಗೆ ಗ್ರಾಮದ ಜನರು ಆತಂಕ ಪಡದೆ ವೈದ್ಯರು ಬಂದಾಗ ಪರೀಕ್ಷೆಗೊಳಪಡಬೇಕು. ಸೋಂಕು ಕಂಡು ಬಂದರೆ ಸೂಕ್ತ ಚಿಕಿತ್ಸೆ ಕೊಡುವ ಮೂಲಕ ಕೊರೋನಾ ಗುಣಪಡಿಸಬಹುದು. ಸ್ಥಳದಲ್ಲೇ ಪರೀಕ್ಷೆ ಮಾಡಿ ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಗೊಳಿಸಲು ಪ್ರಯತ್ನ ನಡೆದಿದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎನ್.ಪಾಟೀಲ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಜಾಲಿಹಾಳ, ಪಿ.ಸಿ.ಹಳಗೇರಿ, ಎಲ್.ಟಿ.ಹೊಸಮನಿ, ಎಸ್.ಎಸ್‌.ಮುಚಖಂಡಿ, ವಿ.ಬಿ.ಪೊಲೀಸ್ ಪಾಟೀಲ, ಬಿ.ಎಚ್.ಅರಕೇರಿ, ಎಸ್.ವಿ.ಹಿರೇವಡೆಯರ, ಜೆ.ಎಸ್.ವಿಭೂತಿ, ಶ್ರೀಕಾಂತ ಬೆಂಡಿಗೇರಿ ಮುಂತಾದವರು ಉಪಸ್ಥಿತರಿದ್ದರು.

Exit mobile version