ಜನ ಮೈಮರೆಯದೆ ಮಾರ್ಗಸೂಚಿ ಪಾಲಿಸಿ; ಗೃಹ ಸಚಿವ ಬೊಮ್ಮಾಯಿ

basavraj bommai

ಬೆಂಗಳೂರು: ಮೇ 30-ಕೋವಿಡ್ ಪಾಸಿಟೀವ್ ಪ್ರಮಾಣ ಕಡಿಮೆಯಾಗಿದೆ ಎಂದು ಜನರು ಮೈಮರೆಯದೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಸೋಂಕು ಉಲ್ಬಣಗೊಳ್ಳದಂತೆ ಜನರು ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು.
ಮೈಮರೆತು ಸೋಂಕು ಉಲ್ಬಣವಾದರೆ ಕಷ್ಟವಾಗಲಿದೆ. ಸಂಪೂರ್ಣ ನಿಯಂತ್ರಣಕ್ಕೆ ಬಂದ ಮೇಲೆ ಯಥಾ ರೀತಿ ಇತರೆ ಚಟುವಟಿಕೆಗಳು ಆರಂಭವಾಗಲಿವೆ ಎಂದರು. ಜೂನ್ 7ರವರೆಗೂ ಈಗಿರುವ ಲಾಕ್ ಡೌನ್ ಕಠಿಣ ನಿಯಮಗಳು ಮುಂದುವರೆಯಲಿವೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೇಂದ್ರ ಗೃಹ ಸಚಿವಾಲಯ ಜೂನ್ 30 ರವರೆಗೂ ಕೋವಿಡ್ ನಿರ್ವಹಣೆ ಮಾರ್ಗಸೂಚಿ ನೀಡಿದೆ. ಈ ಹಿನ್ನೆಲೆಯಲ್ಲಿ 3-4 ದಿನದಲ್ಲಿ ಮುಖ್ಯಮಂತ್ರಿ ಪರಿಣಿತರು ಹಾಗೂ ಕೋವಿಡ್ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆಸಿ ಲಾಕ್ ಡೌನ್ ಮುಂದುವರೆಸುವ ಹಾಗೂ ತೆರವುಗೊಳ್ಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

Exit mobile version